IND vs NZ: ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಹಾರ್ದಿಕ್! 15 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಕಿವೀಸ್

IND vs NZ: ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಆರಂಭಿಸಿರುವ ಟೀಂ ಇಂಡಿಯಾಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ 11 ಓವರ್​ಗಳಲ್ಲಿಯೇ ಕಿವೀಸ್ ತಂಡದ ಪ್ರಮುಖ 5 ವಿಕೆಟ್​ಗಳು ಉರುಳಿವೆ.

IND vs NZ: ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಹಾರ್ದಿಕ್! 15 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಕಿವೀಸ್
ಅದ್ಭುತ ಕ್ಯಾಚ್ ಹಿಡಿದ ಹಾರ್ದಿಕ್Image Credit source: india tv
Follow us
TV9 Web
| Updated By: ಪೃಥ್ವಿಶಂಕರ

Updated on:Jan 21, 2023 | 3:28 PM

ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಆರಂಭಿಸಿರುವ ಟೀಂ ಇಂಡಿಯಾಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಮೊದಲ 11 ಓವರ್​ಗಳಲ್ಲಿಯೇ ಕಿವೀಸ್ ತಂಡದ ಪ್ರಮುಖ 5 ವಿಕೆಟ್​ಗಳು ಉರುಳಿವೆ. ಇತ್ತ ಕಿವೀಸ್ ಪಡೆಗೆ ಸಿಂಹಸ್ವಪ್ನರಾಗಿರುವ ಟೀಂ ಇಂಡಿಯಾ ವೇಗಿಗಳು ತಮ್ಮ ಅದ್ಭುತ ಬೌಲಿಂಗ್​ನಿಂದಾಗಿ ಕಿವೀಸ್ ಬ್ಯಾಟರ್​ಗಳಿಗೆ ಮೈದಾನದಲ್ಲಿ ನಿಲ್ಲಲೂ ಹೆಚ್ಚಿನ ಸಮಯ ನೀಡುತ್ತಿಲ್ಲ. ಇದೇ ವೇಳೆ ಅದ್ಭುತ ಬೌಲಿಂಗ್ ಜೊತೆಗೆ ಅದ್ಭುತ ಫಿಲ್ಡಿಂಗ್ ಮಾಡಿ ಕಿವೀಸ್ ಆರಂಭಿಕನ ವಿಕೆಟ್ ಉರುಳಿಸಿದ ಪಾಂಡ್ಯ ಅವರ ಕ್ಯಾಚ್ ಇದೀಗ ಪಂದ್ಯದ  ಹೈಲೇಟ್ ಆಗಿದೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ಇನ್ನೊಂದು ತುದಿಯಲ್ಲಿ ಭದ್ರವಾಗಿ ನೆಲೆಯೂರುವ ಸೂಚನೆ ನೀಡುತ್ತಿದ್ದ ಕಿವೀಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ (Devon Conway) ಆಡಿದ ಸ್ಟ್ರೈಟ್ ಡ್ರೈವ್ ಶಾಟನ್ನು ಕ್ಯಾಚ್​ ಆಗಿ ಪರಿವರ್ತಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಕ್ಷಣ ಕಾಲ ಇಡೀ ಕ್ರೀಡಾಂಗಣವೇ ಸೈಲೆಂಟ್ ಆಗುವಂತೆ ಮಾಡಿದರು.

ವಾಸ್ತವವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಟೀಂ ಇಂಡಿಯಾ ವೇಗಿಗಳು ಕಿವೀಸ್ ಬ್ಯಾಟರ್​ಗಳನ್ನು ಎರಡಂಕಿ ದಾಟಲು ಅವಕಾಶ ನೀಡಲಿಲ್ಲ. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ ಹಾಗೂ ಫಿನ್ ಅಲೆನ್​ಗೆ ಖಾತೆ ತೆರೆಯಲೂ ಕೂಡ ಶಮಿ ಅವಕಾಶ ನೀಡಲಿಲ್ಲ. ಮೊದಲ ಓವರ್​ನ 5ನೇ ಎಸೆತದಲ್ಲಿಯೇ ಅಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

IND vs NZ: ಟಾಸ್ ಗೆದ್ದ ಬಳಿಕ ಏನು ಮಾಡಬೇಕು ಎಂಬುದನ್ನೇ ಮರೆತ ನಾಯಕ ರೋಹಿತ್; ವಿಡಿಯೋ ನೋಡಿ

ಶೂನ್ಯಕ್ಕೆ ವಿಕೆಟ್

ಬಳಿಕ ಬಂದ ಹೆನ್ರಿ ನಿಕೋಲ್ಸ್​ಗೆ ಆರನೇ ಓವರ್​ನ 3ನೇ ಎಸೆತದಲ್ಲಿ ಮೊಹಮದ್ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಇತ್ತ 4ನೇ ಆಟಗಾರನಾಗಿ ಕಣಕ್ಕಿಳಿದ ಮಿಚೆಲ್ ಕೂಡ 1 ರನ್​ಗಳಿಗೆ ಸುಸ್ತಾಗಿ, ಶಮಿ ಬೌಲಿಂಗ್​ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ನಾಯಕ ಟಾಮ್ ಲೇಥಮ್ ಜೊತೆಗೂಡಿ ಬಿಗ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡುತ್ತಿದ್ದ ಡೆವೊನ್ ಕಾನ್ವೇಗೆ ಹಾರ್ದಿಕ್ ವಿಲನ್ ಆದರು.

ಹಾರ್ದಿಕ್ ಪಾಂಡ್ಯ ಎಸೆದ 10ನೇ ಓವರ್​ನ 4ನೇ ಎಸೆತ ಡೆವೊನ್ ಕಾನ್ವೆ ಅವರ ಬ್ಯಾಟ್‌ಗೆ ತಾಗಿದ ನಂತರ ನೇರವಾಗಿ ಹಾರ್ದಿಕ್ ಪಾಂಡ್ಯ ಕಡೆಗೆ ವೇಗವಾಗಿ ಬಂದಿತು. ಕೂಡಲೇ ಎಚ್ಚೆತ್ತುಕೊಂಡ ಪಾಂಡ್ಯ ತನ್ನ ಎಡಗೈಯಲ್ಲಿ ಚೆಂಡನ್ನು ಹಿಡಿಯುವ ಮೂಲಕ ಕ್ಯಾಚನ್ನು ಪೂರ್ಣಗೊಳಿಸಿದರು. ಇದೀಗ ಈ ಸುದ್ದಿ ಬರೆಯುವ ವೇಳೆಗೆ ಕಿವೀಸ್ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡು 20 ಓವರ್​ಗಳಲ್ಲಿ 60 ರನ್ ಗಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Sat, 21 January 23

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು