
ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ಇಂದೋರ್‌ನಲ್ಲಿ ನಡೆಯುತ್ತಿದೆ. ಈಗಾಗಲೇ ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಕಿವೀಸ್ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಟಿ20 ನಂತರ ಟೀಂ ಇಂಡಿಯಾ (Team India) ಏಕದಿನದಲ್ಲಿ ನಂ.1 ಸ್ಥಾನಕ್ಕೇರಲಿದೆ. ಅಷ್ಟೇ ಅಲ್ಲ, ಭಾರತ ತಂಡ ಏಕದಿನ ಇತಿಹಾಸದಲ್ಲಿ ಮೂರನೇ ಬಾರಿಗೆ ಕಿವೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಲಿದೆ. 13 ವರ್ಷಗಳ ಹಿಂದೆ 2010ರಲ್ಲಿ ಗೌತಮ್ ಗಂಭೀರ್ (Gautam Gambhir) ನಾಯಕತ್ವದಲ್ಲಿ ತಂಡ ಈ ಸಾಧನೆ ಮಾಡಿತ್ತು. ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಭಾರತ 5-0 ಅಂತರದಲ್ಲಿ ಜಯ ಸಾಧಿಸಿತ್ತು. ಅದಕ್ಕೂ ಮುನ್ನ 1988ರಲ್ಲಿ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು.
ಪ್ರಸ್ತುತ ODI ಶ್ರೇಯಾಂಕದಲ್ಲಿ, ಇಂಗ್ಲೆಂಡ್ ತಂಡವು ನಂಬರ್-1 ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ ಮತ್ತು ಭಾರತ ಮೂರನೇ ಸ್ಥಾನದಲ್ಲಿದೆ. ಪ್ರಮುಖ ಅಂಶವೆಂದರೆ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ-3 ರಲ್ಲಿರುವ ಎಲ್ಲಾ ಮೂರು ತಂಡಗಳು ಒಂದೇ ರೇಟಿಂಗ್ ಅಂಕಗಳನ್ನು ಹೊಂದಿವೆ (113). ಈ ಪಂದ್ಯದಲ್ಲಿ ಗೆದ್ದರೆ ಭಾರತ 114 ರೇಟಿಂಗ್ ಪಾಯಿಂಟ್ ಪಡೆಯುವುದರೊಂದಿಗೆ ನಂಬರ್-1 ಆಗಲಿದೆ.
ನ್ಯೂಜಿಲೆಂಡ್ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಹೆನ್ರಿ ಶಿಪ್ಲಿ ಬದಲಿಗೆ ಜಾಕೋಬ್ ಡಫ್ಫಿ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಭಾರತ ತನ್ನ ತಂಡದಲ್ಲಿ 3 ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಜೊತೆಗೆ ಚಹಲ್ ಕೂಡ ಸೇರಿಕೊಂಡಿದ್ದಾರೆ. ಇವರಲ್ಲದೆ ಉಮ್ರಾನ್ ಮಲಿಕ್ ತಂಡಕ್ಕೆ ಮರಳಿದ್ದಾರೆ. ಸಿರಾಜ್ ಬದಲಿಗೆ ಉಮ್ರಾನ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಅದೇ ವೇಳೆ ಶಮಿ ಸ್ಥಾನವನ್ನು ಯುಜುವೇಂದ್ರ ಚಹಾಲ್ ಪಡೆದುಕೊಂಡಿದ್ದಾರೆ.
ಸಿನಿಮಾ ನಟಿಯರನ್ನು ವರಿಸಿರುವ ಟೀಂ ಇಂಡಿಯಾದ 7 ಖ್ಯಾತ ಕ್ರಿಕೆಟಿಗರಿವರು; ಫೋಟೋ ನೋಡಿ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫಿ, ಬ್ಲೇರ್ ಟಿಕ್ನರ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Tue, 24 January 23