ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ನಡುವಣ ಮೂರನೇ ಟಿ-20 ಪಂದ್ಯ ಇಂದು (ಫೆಬ್ರವರಿ 1) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ರಾತ್ರಿ 7 ಗಂಟೆಗೆ ಪಂದ್ಯ ಆರಂಭ ಆಗಲಿದೆ. ಮೊದಲ ಪಂದ್ಯವನ್ನು 21 ರನ್ಗಳಿಂದ ನ್ಯೂಜಿಲೆಂಡ್ ಗೆದ್ದರೆ ಎರಡನೇ ಪಂದ್ಯವನ್ನು ಭಾರತ ತನ್ನ ತೆಕ್ಕೆಗೆ ಪಡೆದಿದೆ. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಇಂದು ಗೆದ್ದವರಿಗೆ ಸರಣಿ ಒಲಿಯಲಿದೆ.
ಈವರೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಟ್ಟೂ ಒಂಭತ್ತು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳು ನಡೆದಿವೆ. ಆ ಪೈಕಿ ಮೊದಲು ಬ್ಯಾಟಿಂಗ್ ಮಾಡಿದವರು ಐದು ಹಾಗೂ ಮೊದಲು ಬೌಲ್ ಮಾಡಿದವರು ನಾಲ್ಕು ಪಂದ್ಯ ಗೆದ್ದಿದ್ದಾರೆ. ಹೀಗಾಗಿ ಫಲಿತಾಂಶ ಬಹುತೇಕ ಸಮಬಲದಲ್ಲಿವೆ ಎನ್ನಬಹುದು. ರಾತ್ರಿ ಇಬ್ಬನಿ ಇರುವುದರಿಂದ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಅಹಮದಾಬಾದ್ ಸ್ಟೇಡಿಯಂ ತುಂಬಾನೇ ದೊಡ್ಡದಾಗಿದೆ. ಹೀಗಾಗಿ ಫೋರ್ ಹಾಗೂ ಸಿಕ್ಸರ್ಗಳ ನಿರೀಕ್ಷೆ ಇಲ್ಲಿ ಕಡಿಮೆ.
ಗರಿಷ್ಟ ರನ್ 224/2 ಭಾರತ vs ಇಂಗ್ಲೆಂಡ್
ಗರಿಷ್ಟ ರನ್ ಚೇಸ್ 166/3 ಭಾರತ vs ಇಂಗ್ಲೆಂಡ್
ಕನಿಷ್ಠ ಮೊತ್ತ: 107/7 ವೆಸ್ಟ್ ಇಂಡೀಸ್ vs ಇಂಡಿಯಾ ಮಹಿಳಾ ತಂಡ
ಈ ಪಿಚ್ ದೊಡ್ಡದಿರುವುದರಿಂದ ಹೆಚ್ಚು ಸ್ಕೋರ್ ಗಳಿಕೆ ಮಾಡುವುದು ಸವಾಲಿನ ಸಂಗತಿ. ಮೊದಲ ಇನ್ನಿಂಗ್ಸ್ ಆಡಿದವರು ಸರಾಸರಿ 152 ರನ್, ಎರಡನೇ ಇನ್ನಿಂಗ್ಸ್ ಆಡಿದವರು ಸರಾಸರಿ 145 ರನ್ ಕಲೆಹಾಕಿದ್ದಾರೆ. ಪಿಚ್ನಲ್ಲಿ ಸೆಟ್ ಆದ ಬ್ಯಾಟ್ಸಮನ್ಗಳು ಮಾತ್ರ ಇಲ್ಲಿ ಆಡಬಹುದು. ಹೊಸ ಆಟಗಾರರು ಬಂದು ಏಕಾಏಕಿ ಹೊಡಿಬಡಿ ಆಟ ಆಡಲು ಸಾಧ್ಯವಿಲ್ಲ. ವೇಗಿಗಳಿಗಿಂತ ಸ್ಪಿನ್ನರ್ ಹಾಗೂ ನಿಧಾನಗತಿಯ ಬೌಲರ್ಗಳಿಗೆ ಪಿಚ್ ಸಹಕಾರಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:44 am, Wed, 1 February 23