2 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್ ಮ್ಯಾಚ್: ಭಾರತ vs ನ್ಯೂಜಿಲೆಂಡ್ ಪಂದ್ಯದ ಟಿಕೆಟ್ ಖರೀದಿ ಹೇಗೆ?
India vs New Zealand : ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಇದೀಗ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಜ್ಜಾಗಿದೆ. ಇದೇ ಅಕ್ಟೋಬರ್ 16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲನೇ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿನ ಕ್ರೀಡಾಸಕ್ತರು ಕಾಯುತ್ತಿದ್ದು, ನಾಳೆಯಿಂದ (ಶನಿವಾರ) ಟಿಕೆಟ್ ಮಾರಾಟ ಆರಂಭವಾಗಲಿದೆ. ಹಾಗಾದ್ರೆ, ಟಿಕೆಟ್ ದರ ಎಷ್ಟು? ಖರೀದಿಸುವುದು ಹೇಗೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಈಗ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣಸಾಡಲು ರೆಡಿಯಾಗಿದೆ. ಕಿವೀಸ್ ವಿರುದ್ಧದ ಒಟ್ಟು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ಅಕ್ಟೋಬರ್ 16 ರಿಂದ ಅ.20ರ ವರೆಗೆ ಟೆಸ್ಟ್ ಸರಣಿ ಆರಂಭವಾಗಲಿದೆ. ಟೀಂ ಇಂಡಿಯಾ 2022ರಲ್ಲಿ ಶ್ರೀಲಂಕಾ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆದಿತ್ತು. 2022ರ ನಂತರ ಇದುವರೆಗೂ ಒಂದೂ ಅಂತಾರಾಷ್ಟ್ರೀಯ ಟೆಸ್ಟ್ ಮ್ಯಾಚ್ಗಳು ನಡೆದಿರಲಿಲ್ಲ. ಈಗ ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕಿವೀಸ್ ವಿರುದ್ಧದ ಮೊದಲ ಪಂದ್ಯದ ಟಿಕೆಟ್ ಮಾರಾಟ ನಾಳೆಯಿಂದ ಆರಂಭವಾಗಲಿದೆ.
ನಾಳೆ ಅಂದರೆ ಅಕ್ಟೋಬರ್ 5ರಿಂದ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟ ಆರಂಭಿಸಲಾಗುತ್ತಿದೆ. ಆನ್‌ಲೈನ್ ಟಿಕೆಟ್ ಮಾರಾಟ ಶನಿವಾರ ಬೆಳಿಗ್ಗೆ 10 ಗಂಟೆಗೆ ಶುರುವಾಗಲಿದ್ದು, ಇನ್‌ಸೈಟರ್ ಅಪ್ಲಿಕೇಶನ್ (WWW.insider.in ಮತ್ತು WWW.ksca.cricket ವೆಬ್‌ಸೈಟ್ ಮೂಲಕ ಟೆಸ್ಟ್ ಪಂದ್ಯಕ್ಕೆ ಟಿಕೆಟ್‌ಗಳನ್ನು ಖರೀದಿಸಬಹುದಾಗಿದ್ದು, ಒಮ್ಮೆ ಟಿಕೆಟ್ ಖರೀದಿ ಮಾಡಿದರೆ 5 ದಿನ ವ್ಯಾಲಿಡಿಟಿ ಇರಲಿದೆ(ಒಂದು ವೇಳೆ ಪಂಡ್ಯ ಐದು ದಿನದ ವರೆಗೂ ನಡೆದರೆ).
ಇದನ್ನೂ ಓದಿ: ಭಾರತದ ವಿರುದ್ಧ ಸರಣಿಗೂ ಮುನ್ನ ನ್ಯೂಝಿಲೆಂಡ್ ತಂಡದ ನಾಯಕ ಬದಲು
ಟಿಕೆಟ್ ದರ ಎಷ್ಟು?
ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ದರಗಳು ಒಂದೊಂದು ಸ್ಟ್ಯಾಂಡ್ಗೆ ಒಂದೊಂದು ದರ ನಿಗದಿ ಮಾಡಲಾಗಿದೆ. 600 ರೂಪಾಯಿಗಳಿಂದ ಆರಂಭವಾಗಲಿದ್ದು, ಗರಿಷ್ಠ ಟಿಕೆಟ್ ದರ 7,500 ರೂಪಾಯಿ ಆಗಿದೆ. ಎಚ್ ಕೆಳಗಿನ ಸ್ಟಾಂಡ್ ಟಿಕೆಟ್ ಬೆಲೆ 600 ರೂಪಾಯಿ, ಸಿ ಸ್ಟಾಂಡ್ 1,200 ರೂಪಾಯಿ, ಬಿ ಸ್ಟಾಂಡ್ 2,000 ರೂಪಾಯಿ, ಡಿ ಕಾರ್ಪೊರೇಟ್ 2000 ರೂಪಾಯಿ, ಎನ್ ಸ್ಟಾಂಡ್ 2,500 ರೂಪಾಯಿ, ಪಿ4 ಸ್ಟಾಂಡ್ ಟಿಕೆಟ್ ದರ 2,000 ರೂಪಾಯಿಗಳಾಗಿದೆ. ಪಿ ಟೆರೇಸ್ ಟಿಕೆಟ್ 7,500 ರೂಪಾಯಿಗೆ ನಿಗದಿಪಡಿಸಲಾಗಿದೆ.
Online sales of tickets for #IndvsNZ Test at Bengaluru from tomorrow pic.twitter.com/rjSxqwe4zu
— Manuja (@manujaveerappa) October 4, 2024
ನ್ಯೂಜಿಲೆಂಡ್ ಮತ್ತು ಭಾರತದ ನಡುವಿನ ಮೂರು ಪಂದ್ಯ ಟೆಸ್ಟ್ ಸರಣಿ ಅಕ್ಟೋಬರ್ 16 ರಿಂದ ನವೆಂಬರ್ 5ರ ತನಕ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ, ಮಹಾರಾಷ್ಟ್ರದ ಪುಣೆ, ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನಗಳಲ್ಲಿ ಮೂರು ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: WTC ಫೈನಲ್ಗೇರಲು ಟೀಮ್ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಆತ್ಮವಿಶ್ವಾದಲ್ಲಿ ಟೀಂ ಇಂಡಿಯಾ
ತವರಿನಲ್ಲಿ ಟೀಂ ಇಂಡಿಯಾ ಎದುರು ಯಾವ ತಂಡಗಳು ಸಹ ಗೆಲ್ಲುವುದು ಅಷ್ಟು ಸುಲಭವಲ್ಲ. ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಸೋತ ಬಳಿಕ, ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಲು ಆಗಮಿಸುತ್ತಿದ್ದು, ಟೀಂ ಇಂಡಿಯಾವನ್ನು ಮಣಿಸುವ ವಿಶ್ವಾದಲ್ಲಿದೆ. ಇನ್ನು ಬಾಂಗ್ಲಾದೇಶ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಮಾಡಿರುವ ಭಾರತ ತಂಡ ಸಹ ಕಿವೀಸ್ನ ಕಿವಿ ಹಿಂಡಿ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.
Published On - 9:12 pm, Fri, 4 October 24