ಫೈನಲ್ ಮ್ಯಾಚ್ ಪಿಚ್ ಯಾವುದೆಂಬುದು ಬಹಿರಂಗ: ವಿರಾಟ್ ಕೊಹ್ಲಿ ಫುಲ್ ಹ್ಯಾಪಿ
Champions Trophy 2025: ಚಾಂಪಿಯನ್ಸ್ ಟ್ರೋಫಿಯ ಅಂತಿಮ ಹಣಾಹಣಿ ಮಾರ್ಚ್ 9 ರಂದು ನಡೆಯಲಿದೆ. ಭಾನುವಾರ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಪಿಚ್ ರೆಡಿಯಾಗಿದ್ದು, ಈ ಸುದ್ದಿ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಫುಲ್ ಖುಷ್ ಆಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಮ್ಯಾಚ್ಗೆ ವೇದಿಕೆ ಸಿದ್ಧವಾಗಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿಯುವ ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ನಿರ್ಣಾಯಕ ಪಂದ್ಯವು ಯಾವ ಪಿಚ್ನಲ್ಲಿ ನಡೆಯಲಿದೆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಉತ್ತರದಿಂದ ಅತೀ ಹೆಚ್ಚು ಸಂತೋಷಗೊಂಡಿರುವುದು ವಿರಾಟ್ ಕೊಹ್ಲಿ.
ಹೌದು, ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಕೊನೆಯ ಪಂದ್ಯಕ್ಕಾಗಿ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನ 2ನೇ ಪಿಚ್ ಅನ್ನು ಆಯ್ಕೆ ಮಾಡಗಿದೆ ಎಂದು ವರದಿಯಾಗಿದೆ. ದುಬೈ ಮೈದಾನದಲ್ಲಿ ಒಟ್ಟು 10 ಪಿಚ್ಗಳಿದ್ದು, ಅದರಲ್ಲಿ 4 ಪಿಚ್ಗಳನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಬಳಸಲಾಗಿದೆ.
ಇದೀಗ ಈ ನಾಲ್ಕು ಪಿಚ್ಗಳಲ್ಲಿ ಒಂದನ್ನು ಫೈನಲ್ ಮ್ಯಾಚ್ಗೂ ಮರುಬಳಕೆ ಮಾಡಲು ಆಸ್ಟ್ರೇಲಿಯಾದ ಕ್ಯುರೇಟರ್ ಮ್ಯಾಥ್ಯೂ ಸ್ಯಾಂಡರಿ ನಿರ್ಧರಿಸಿದ್ದಾರೆ. ವಿಶೇಷ ಎಂದರೆ ಸ್ಯಾಂಡರಿ ಆಯ್ಕೆ ಮಾಡಿಕೊಂಡಿರುವುದು ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಪಿಚ್.
ಅಂದರೆ ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ್ ಆಡಿದ ಪಿಚ್ ಅನ್ನು ಮತ್ತೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ. ಏಕೆಂದರೆ ಈ ಪಿಚ್ನಲ್ಲಿ ಪಂದ್ಯ ನಡೆದು ಎರಡು ವಾರಗಳು ಕಳೆದಿವೆ. ಹೀಗಾಗಿಯೇ ನಿರ್ಣಾಯಕ ಪಂದ್ಯಕ್ಕೆ ಇದೇ ಪಿಚ್ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.
ವಿರಾಟ್ ಕೊಹ್ಲಿ ಫುಲ್ ಖುಷ್:
ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಪಿಚ್ ಅನ್ನು ಮರು ಬಳಕೆ ಮಾಡುತ್ತಿರುವುದರಿಂದ ವಿರಾಟ್ ಕೊಹ್ಲಿ ಫುಲ್ ಖುಷ್ ಆಗಿದ್ದಾರೆ. ಏಕೆಂದರೆ ಇದೇ ಮೈದಾನದಲ್ಲಿ ಪಾಕಿಸ್ತಾನ್ ವಿರುದ್ಧ ಕಿಂಗ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು. ಹೀಗಾಗಿ ಮತ್ತೊಮ್ಮೆ ಅದೇ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಕೊಹ್ಲಿಗೆ ಕಷ್ಟವೇನಲ್ಲ.
ಅದರಲ್ಲೂ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಬೌಲರ್ಗಳು ಉತ್ತಮ ಪ್ರದರ್ಶನವನ್ನೂ ಸಹ ನೀಡಿದ್ದಾರೆ. ಹಾಗಾಗಿ ಲೀಗ್ ಹಂತದಲ್ಲಿ ಕಣಕ್ಕಿಳಿದ ಪಿಚ್ನಲ್ಲೇ ಫೈನಲ್ ಪಂದ್ಯವಾಡಲಿರುವುದು ಭಾರತ ತಂಡದ ಪಾಲಿಗೆ ವರದಾನವಾಗಲಿದೆ.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಇನ್ನು ಪಾಕಿಸ್ತಾನ್ ವಿರುದ್ಧದ ಆಡಲಾದ ಪಿಚ್ ಬೌಲರ್ಗಳಿಗೆ ಸಹಕಾರಿಯಾಗಿತ್ತು. ಇದೀಗ ಅದೇ ಪಿಚ್ ಅನ್ನು ಮರು ಬಳಕೆ ಮಾಡುತ್ತಿರುವುದರಿಂದ ವಿಕೆಟ್ ಸ್ವಲ್ಪ ಬದಲಾಗಬಹುದು. ಇದರ ಹೊರತಾಗಿ ಒಟ್ಟಾರೆ ಸ್ವರೂಪದಲ್ಲಿ ಹೆಚ್ಚು ಬದಲಾವಣೆ ಕಂಡು ಬರುವುದಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲೂ ಬ್ಯಾಟರ್-ಬೌಲರ್ಗಳಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದು.