IND vs NZ: ಕೈಕೊಟ್ಟ ಟೀಂ ಇಂಡಿಯಾದ ಕೆಳಕ್ರಮಾಂಕ; ಕಿವೀಸ್ ಗೆಲುವಿಗೆ 107 ರನ್ ಟಾರ್ಗೆಟ್
IND vs NZ: ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನ ಆಘಾತದ ನಡುವೆಯೂ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ, ಪ್ರವಾಸಿ ತಂಡಕ್ಕೆ 107 ರನ್‌ಗಳ ಗೆಲುವಿನ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿದ್ದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆಗೆ ತಕ್ಕ ಪ್ರತ್ಯುತ್ತರ ನೀಡಿ ಬರೋಬ್ಬರಿ 462 ರನ್ ಕಲೆಹಾಕಿತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನ ಆಘಾತದ ನಡುವೆಯೂ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾ, ಪ್ರವಾಸಿ ತಂಡಕ್ಕೆ 107 ರನ್‌ಗಳ ಗೆಲುವಿನ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿದ್ದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆಗೆ ತಕ್ಕ ಪ್ರತ್ಯುತ್ತರ ನೀಡಿ ಬರೋಬ್ಬರಿ 462 ರನ್ ಕಲೆಹಾಕಿತು. ತಂಡದ ಕೆಳಕ್ರಮಾಂಕ ಸ್ವಲ್ಪ ಸಮಯ ನೆಲಕಚ್ಚಿ ಆಡಿದ್ದರೆ, ಕಿವೀಸ್ಗೆ ಸಿಕ್ಕ ಟಾರ್ಗೆಟ್ ಇನ್ನು ಹೆಚ್ಚಿರುತ್ತಿತ್ತು. ಆದರೆ ಕನ್ನಡಿಗ ರಾಹುಲ್, ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಸರಿಯಾದ ಸಮಯದಲ್ಲಿ ತಂಡಕ್ಕೆ ಕೈಕೊಟ್ಟರು. ಈ ಮೂವರು ಆಟಗಾರರಿಂದ ತಂಡ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಈ ಮೂವರು ತಂಡದೊಂದಿಗೆ ಅಭಿಮಾನಿಗಳಿಗೂ ಭಾರಿ ನಿರಾಸೆ ಮೂಡಿಸಿದರು.
ದಿನದಾಟ ಅಂತ್ಯ
ಇದೀಗ ಟೀಂ ಇಂಡಿಯಾವನ್ನು 462 ರನ್ಗಳಿಗೆ ಆಲೌಟ್ ಮಾಡಿ ಗುರಿಯ ಬೆನ್ನತ್ತಿರುವ ನ್ಯೂಜಿಲೆಂಡ್ ತಂಡದ ಆರಂಭಿಕರು ನಾಲ್ಕನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ ಯಾವುದೇ ರನ್ ಗಳಿಸದೆ ಪೆವಿಲಿಯನ್ಗೆ ವಾಪಸ್ಸಾಗಿದ್ದಾರೆ. ವಾಸ್ತವವಾಗಿ ನಾಲ್ಕನೇ ದಿನದಾಟ ಮುಗಿಯಲು ಇನ್ನು ಅರ್ಧಗಂಟೆಗೂ ಹೆಚ್ಚಿನ ಸಮಯವಿತ್ತು. ಆದರೆ ಮಂದ ಬೆಳಕಿನಿಂದಾಗಿ ಪಂದ್ಯವನ್ನು ನಿಲ್ಲಿಸಲು ಅಂಪೈರ್ ತೀಮಾರ್ನಿಸಿದರು. ಹೀಗಾಗಿ ದಿನದಾಟ ನಿಗದಿತ ಸಮಯಕ್ಕೂ ಮುನ್ನವೇ ಅಂತ್ಯಗೊಂಡಿತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಅಂಪೈರ್ ಅವರ ನಿರ್ಧಾರದ ವಿರುದ್ಧ ಕೆಲ ಸಮಯ ಮೈದಾನದಲ್ಲಿ ಅಂಪೈರ್ಗಳ ಜೊತೆ ವಾಗ್ವಾದ ನಡೆಸಿದರು. ಆದರೆ ಈ ವೇಳೆ ಮಳೆಬೀಳಲಾರಭಿಸಿದ್ದರಿಂದ ಅವರೂ ಕೂಡ ಪೆವಿಲಿಯನ್ಗೆ ವಾಪಸ್ಸಾಗಬೇಕಾಯಿತು.
🚨 Update 🚨
Play on Day 4 has been called off due to rain.
The action will resume on Day 5 at 9:15 AM IST
Scorecard – https://t.co/FS97Llv5uq#TeamIndia | #INDvNZ | @IDFCFIRSTBank pic.twitter.com/CpmVXZvvzn
— BCCI (@BCCI) October 19, 2024
ಭಾರತಕ್ಕೆ ಪಂತ್- ಸರ್ಫರಾಜ್ ಆಸರೆ
ಮೂರನೇ ದಿನದಾಟದಂತ್ಯಕ್ಕೆ 231 ರನ್ ಕಲೆಹಾಕಿ 3 ವಿಕೆಟ್ ಕಳೆದಕೊಂಡಿದ್ದ ಟೀಂ ಇಂಡಿಯಾ ಇಲ್ಲಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿತು. ನಿರೀಕ್ಷೆಯಂತೆ ತಂಡಕ್ಕೆ ನಾಲ್ಕನೇ ದಿನ ಉತ್ತಮ ಆರಂಭವೂ ಸಿಕ್ಕಿತು. ಸರ್ಫರಾಜ್ ಮತ್ತು ಪಂತ್ ಜೊತೆಗೂಡಿ ಕಿವೀಸ್ ವಿರುದ್ಧ ಭಾರತಕ್ಕೆ ಮುನ್ನಡೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರ ನಡುವೆ 177 ರನ್‌ಗಳ ಜೊತೆಯಾಟವಿತ್ತು. ಸರ್ಫರಾಜ್ 150 ರನ್ ಗಳಿಸಿ ಔಟಾದರೆ, ಪಂತ್ 99 ರನ್ ಗಳಿಸಿ ಔಟಾದರು.
ಕೈಕೊಟ್ಟ ಕೆಳಕ್ರಮಾಂಕ
ದಿನದ ಮೊದಲ ಸೆಷನ್‌ನಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ಆದಾಗ್ಯೂ, ಎರಡನೇ ಸೆಷನ್‌ನಲ್ಲಿ ಚೆಂಡು ಬದಲಾದ ತಕ್ಷಣ ಭಾರತದ ಬ್ಯಾಟಿಂಗ್ ಕ್ರಮಾಂಕವು ಛಿದ್ರವಾಗತೊಡಗಿತು. ಇದಕ್ಕೆ ಪೂರಕವಾಗಿ ತವರಿನಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೆಎಲ್ ರಾಹುಲ್ ಕೇವಲ 12 ರನ್, ಜಡೇಜಾ 5, ಅಶ್ವಿನ್ 15, ಕುಲ್ದೀಪ್ 6 ರನ್ ಗಳಿಸಿದರೆ ಬುಮ್ರಾ ಮತ್ತು ಸಿರಾಜ್ ಖಾತೆ ತೆರೆಯದೆ ಔಟಾದರು. ಕಿವೀಸ್ ಪರ ಹೆನ್ರಿ ಮತ್ತು ರೂರ್ಕೆ ತಲಾ ಮೂರು ವಿಕೆಟ್ ಪಡೆದರೆ, ಇಜಾಜ್ ಎರಡು ವಿಕೆಟ್ ಪಡೆದರು. ಅದೇ ವೇಳೆ ಸೌಥಿ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:46 pm, Sat, 19 October 24