IND vs NZ: ಫೀಲ್ಡಿಂಗ್ ವೇಳೆ ಟೀಂ ಇಂಡಿಯಾ ವೇಗದ ಬೌಲರ್ ಇಶಾಂತ್ ಶರ್ಮಾಗೆ ಇಂಜುರಿ; ಬೆರಳಿಗೆ ಬ್ಯಾಂಡೇಜ್..!
IND vs NZ: ಐದನೇ ದಿನದಾಟದ ಆರಂಭದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಇದರಿಂದಾಗಿ ಇಶಾಂತ್ ಶರ್ಮಾ ಮೈದಾನ ತೊರೆಯಬೇಕಾಯಿತು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್‌ಗೆ ಬಂದಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಿಂದ ಭಾರತಕ್ಕೆ ಕೆಟ್ಟ ಸುದ್ದಿ ಬರುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಂದು ವೇಗದ ಬೌಲರ್ ಇಶಾಂತ್ ಶರ್ಮಾ ಗಾಯಗೊಂಡಿದ್ದಾರೆ. ಐದನೇ ದಿನದಾಟದ ಆರಂಭದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಇದರಿಂದಾಗಿ ಇಶಾಂತ್ ಶರ್ಮಾ ಮೈದಾನ ತೊರೆಯಬೇಕಾಯಿತು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್‌ಗೆ ಬಂದಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಫಿಸಿಯೋ ಚಿಕಿತ್ಸೆ ನೀಡಿದ ಬಳಿಕ ಇಶಾಂತ್ ಮೈದಾನಕ್ಕೆ ಮರಳಿದ್ದು ಭಾರತಕ್ಕೆ ಸಂತಸ ತಂದಿದೆ. ಅವರ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿದ್ದು ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ.
ಐದನೇ ದಿನದಾಟದ ಮೊದಲ ಎಸೆತದಲ್ಲಿಯೇ ಇಶಾಂತ್ ಶರ್ಮಾ ಗಾಯಗೊಂಡರು. ಟಾಮ್ ಲ್ಯಾಥಮ್, ಆರ್ ಅಶ್ವಿನ್ ಎಸೆತವನ್ನು ಶಾಟ್ ಆಡಿದರು. ಇಶಾಂತ್ ಅದನ್ನು ಹಿಡಿಯಲು ಧುಮುಕಿದರು. ಆದರೆ ಅವರ ಕಿರುಬೆರಳು ನೆಲದಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ಅವರು ಸಾಕಷ್ಟು ನೋವು ಅನುಭವಿಸಬೇಕಾಯ್ತು. ಫಿಸಿಯೋ ನಿತಿನ್ ಪಟೇಲ್ ಮೈದಾನಕ್ಕೆ ಬಂದರೂ ನಂತರ ಇಬ್ಬರೂ ಮೈದಾನದಿಂದ ಹೊರಗೆ ಹೋದರು. ಇಶಾಂತ್ ಉಪಸ್ಥಿತಿಯು ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಅವರು ಭಾರತದ ಪಿಚ್‌ಗಳಲ್ಲಿ ತುಂಬಾ ಪರಿಣಾಮಕಾರಿ. ಜೊತೆಗೆ ಭಾರತೀಯ ವೇಗದ ಬೌಲಿಂಗ್‌ನ ಪ್ರಮುಖ ಭಾಗವಾಗಿದ್ದಾರೆ.
ಭಾರತಕ್ಕೆ ಇಶಾಂತ್ ಮುಖ್ಯ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಇನ್ನೂ ಎರಡನೇ ಟೆಸ್ಟ್ ಆಡಬೇಕಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದೆ. ಅಲ್ಲಿ ಮೂರು ಟೆಸ್ಟ್‌ಗಳ ಸರಣಿ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಇಶಾಂತ್ ಉಪಸ್ಥಿತಿಯು ಬಹಳ ಮುಖ್ಯವಾಗಿದೆ. ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ಭಾರತವು ಇಶಾಂತ್ ಮತ್ತು ಉಮೇಶ್ ಯಾದವ್ ರೂಪದಲ್ಲಿ ಇಬ್ಬರು ವೇಗದ ಬೌಲರ್‌ಗಳೊಂದಿಗೆ ಇಳಿದಿದೆ. ಭಾರತದ ಉಳಿದ ಪಿಚ್‌ಗಳು ಸ್ಪಿನ್‌ಗೆ ಸಹಾಯ ಮಾಡುತ್ತವೆ, ಆದ್ದರಿಂದ ಟೀಂ ಇಂಡಿಯಾ ಅಕ್ಷರ್ ಪಟೇಲ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದೆ.
ಇಶಾಂತ್ ಭಾರತದ ಹಿರಿಯ ಬೌಲರ್ ಇಶಾಂತ್ ಶರ್ಮಾ ಇದುವರೆಗೆ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 311 ವಿಕೆಟ್ ಪಡೆದಿದ್ದಾರೆ. ಅವರು 2007 ರಲ್ಲಿ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಕಳೆದ ಕೆಲ ವರ್ಷಗಳಲ್ಲಿ ಇಶಾಂತ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅವರು ಭಾರತದ ಅನೇಕ ವಿಜಯಗಳ ನಾಯಕರಾಗಿದ್ದಾರೆ.