IND vs SA: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ 2 ಬದಲಾವಣೆ ಸಾಧ್ಯತೆ

South Africa vs India: ಸೌತ್ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಇನ್ನು ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿದೆ. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು.

IND vs SA: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ 2 ಬದಲಾವಣೆ ಸಾಧ್ಯತೆ
Team India
Follow us
ಝಾಹಿರ್ ಯೂಸುಫ್
|

Updated on: Nov 13, 2024 | 7:29 AM

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಇಂದು (ನ.13) ನಡೆಯಲಿದೆ. ಸೆಂಚುರಿಯನ್​ನ ಸೂಪರ್​​ ಸ್ಪೋರ್ಟ್ಸ್​ ಪಾರ್ಕ್​ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದ್ದು, ಹೀಗಾಗಿ ಈ ಪಂದ್ಯದಿಂದ ಇಬ್ಬರನ್ನು ಕೈ ಬಿಡಬಹುದು.

ಅದರಂತೆ ಈ ಬಾರಿ ಅಕ್ಷರ್ ಪಟೇಲ್​ ಬದಲಿಗೆ ರಮಣ್​ದೀಪ್ ಸಿಂಗ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಹಾಗೆಯೇ ಅವೇಶ್ ಖಾನ್ ಸ್ಥಾನದಲ್ಲಿ ಯಶ್ ದಯಾಳ್ ಕಣಕ್ಕಿಳಿಯಬಹುದು.

ಇದಾಗ್ಯೂ ಟೀಮ್ ಇಂಡಿಯಾ ಆರಂಭಿಕನಾಗಿ ಸಂಜು ಸ್ಯಾಮ್ಸನ್​ ಜೊತೆ ಅಭಿಷೇಕ್ ಶರ್ಮಾ ಮುಂದುವರೆಯಬಹುದು. ಇನ್ನು ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದಾರೆ.

ಐದನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದು, ಆರನೇ ಕ್ರಮಾಂಕವು ರಿಂಕು ಸಿಂಗ್ ಪಾಲಾಗಲಿದೆ. ಹಾಗೆಯೇ ಏಳನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಆಗಿ ಅಕ್ಷರ್ ರಮಣ್​ದೀಪ್​ ಸಿಂಗ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಇನ್ನು ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಹಾಗೂ ಯಶ್ ದಯಾಳ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ಅಭಿಷೇಕ್ ಶರ್ಮಾ
  2. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  3. ಸೂರ್ಯಕುಮಾರ್ ಯಾದವ್ (ನಾಯಕ)
  4. ತಿಲಕ್ ವರ್ಮಾ
  5. ಹಾರ್ದಿಕ್ ಪಾಂಡ್ಯ
  6. ರಿಂಕು ಸಿಂಗ್
  7. ರಮಣ್​ದೀಪ್ ಸಿಂಗ್
  8. ಅರ್ಷದೀಪ್ ಸಿಂಗ್
  9. ವರುಣ್ ಚಕ್ರವರ್ತಿ
  10. ರವಿ ಬಿಷ್ಣೋಯ್
  11. ಯಶ್ ದಯಾಳ್

ಇದನ್ನೂ ಓದಿ: ಅಮೋಘ ಗೆಲುವಿನೊಂದಿಗೆ ಭಾರತದ ದಾಖಲೆ ಮುರಿದ ಪಾಕಿಸ್ತಾನ್

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್, ರಮಣ್​ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.

ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ
ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ