‘ಯಾರೂ ಇಷ್ಟಪಡುವುದಿಲ್ಲ’; ಐಪಿಎಲ್ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ರಾಹುಲ್

KL Rahul on IPL controversy: ಕಳೆದ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರಾದ ಸಂಜೀವ್ ಗೋಯಾಂಕಾ ಅವರೊಂದಿಗಿನ ಜಗಳದ ಬಗ್ಗೆ ಕೆಎಲ್ ರಾಹುಲ್ ಅವರು ಮೌನ ಮುರಿದಿದ್ದಾರೆ. ಈ ಘಟನೆಯು ಇಡೀ ತಂಡದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Nov 13, 2024 | 9:18 PM

ಕಳೆದ ಐಪಿಎಲ್‌ ವೇಳೆ ಅಂದರೆ 2024 ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯಾಂಕಾ ಹಾಗೂ ಆಗಿನ ತಂಡದ ನಾಯಕ ಕೆಎಲ್ ರಾಹುಲ್ ನಡುವೆ ಬಹಿರಂಗವಾಗಿ ನಡೆದಿದ್ದ ಮಾತಿನ ಚಕಮಕಿಯ ಬಗ್ಗೆ ರಾಹುಲ್ ಕೊನೆಗೂ ಮೌನ ಮುರಿದಿದ್ದು, ಅಂದು ನಡೆದ ಘಟನೆ ಇಡೀ ತಂಡದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ.

1 / 7
ವಾಸ್ತವವಾಗಿ 2022 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಾಹುಲ್, ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಪ್ರತಿನಿಧಿಸಿದಲ್ಲದೆ, ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ಕೂಡ ಆಟಗಾರನಾಗಿ ಮತ್ತು ನಾಯಕನಾಗಿ ಎಡವಿದ್ದರು.

2 / 7
ಇದರ ಜೊತೆಗೆ ಕಳೆದ ಆವೃತ್ತಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ತಂಡದ ಮಾಲೀಕ ಸಂಜೀವ್ ಗೋಯಾಂಕ, ನಾಯಕ ರಾಹುಲ್​ರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

3 / 7
ಇದೀಗ ತಂಡದಿಂದ ಹೊರಬಂದ ಆ ಬಗ್ಗೆ ಮಾತನಾಡಿರುವ ರಾಹುಲ್, ‘ಪಂದ್ಯದ ನಂತರ ಮೈದಾನದಲ್ಲಿ ಏನೇ ನಡೆದರೂ ಅದು ಒಳ್ಳೆಯದಲ್ಲ. ಅಂತಹದನ್ನು ಮೈದಾನದ ಒಳಗೆ ಅಥವಾ ಹೊರಗೆ ನೋಡಲು ಯಾರೂ ಇಷ್ಟಪಡುವುದಿಲ್ಲ. ಇದು ಇಡೀ ಗುಂಪಿನ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

4 / 7
ಇನ್ನು ಲಕ್ನೋ ತಂಡವನ್ನು ತೊರೆಯುವ ಬಗ್ಗೆ ಹೇಳಿಕೆ ನೀಡಿರುವ ರಾಹುಲ್, ಕಳೆದ ಸೀಸನ್ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ನನಗೆ ಉತ್ತಮವಾಗಿಲ್ಲ. ಕಳೆದ ಮೂರು ಸೀಸನ್‌ಗಳಲ್ಲಿ ಮೊದಲ ಬಾರಿಗೆ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟದಲ್ಲಿ ಸ್ವಾತಂತ್ರ್ಯ ಬೇಕು ಎಂಬ ಕಾರಣಕ್ಕೆ ಲಕ್ನೋ ತಂಡವನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

5 / 7
ಮುಂದುವರೆದು ಮಾತನಾಡಿದ ಅವರು, ‘ನಾನು ಹೊಸ ಆರಂಭವನ್ನು ಮಾಡಲು ಬಯಸುತ್ತೇನೆ. ನಾನು ನನ್ನ ಆಟವನ್ನು ಸ್ವತಂತ್ರವಾಗಿ ಆಡಬಹುದಾದ ನನ್ನ ಸ್ವಂತ ಆಯ್ಕೆಗಳನ್ನು ಹುಡುಕಲು ನಾನು ಬಯಸುತ್ತೇನೆ. ಲಕ್ನೋ ತಂಡದಲ್ಲಿ ನಾನು ಬಯಸಿದ ವಾತಾವರಣವಿರಲಿಲ್ಲ. ಹೀಗಾಗಿ ನಾನು ಮುಂದಾಲೋಚನೆ ಮಾಡಿ ಹೊಸ ದಾರಿ ಕಂಡಿಕೊಂಡೆ.

6 / 7
ನಾನು ಕೆಲವು ಸಮಯದಿಂದ ಟಿ20 ತಂಡದಿಂದ ಹೊರಗುಳಿದಿದ್ದೇನೆ. ಆಟಗಾರನಾಗಿ ನಾನು ಎಲ್ಲಿ ನಿಲ್ಲುತ್ತೇನೆ ಎಂದು ನನಗೆ ತಿಳಿದಿದೆ. ಪುಟಿದೇಳಲು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ಹಾಗಾಗಿ ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ನಾನು ಎದುರು ನೋಡುತ್ತಿದ್ದೇನೆ. ಅದು ನನಗೆ ಕ್ರಿಕೆಟ್‌ಗೆ ಹೋಗಲು ಮತ್ತು ಆನಂದಿಸಲು ವೇದಿಕೆಯನ್ನು ನೀಡುತ್ತದೆ. ಭಾರತ ಟಿ20 ತಂಡದಲ್ಲಿ ಪುನರಾಗಮನ ಮಾಡುವುದು ನನ್ನ ಗುರಿ ಎಂದು ರಾಹುಲ್ ಹೇಳಿದ್ದಾರೆ.

7 / 7
Follow us