AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀರ್ತಿ ಸುರೇಶ್ ಡೇಟಿಂಗ್ ಬಗ್ಗೆ ಹರಿದಾಡಿತ್ತು ಸುದ್ದಿ; ಹುಡುಗ ಯಾರು?

ಕೀರ್ತಿ ಸುರೇಶ್ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಅವರು ‘ಮಹಾನಟಿ’ ಚಿತ್ರದಿಂದ ದೊಡ್ಡ ಹೆಸರು ಮಾಡಿದರು. ಇದಕ್ಕೆ ಅವರು ರಾಷ್ಟ್ರಪ್ರಶಸ್ತಿ ಕೂಡ ಪಡೆದರು. ಕೀರ್ತಿ ಸುರೇಶ್ ಅವರ ವೈಯಕ್ತಿಕ ಜೀವನ ಕೂಡ ಸಖತ್ ಚರ್ಚೆ ಆಗಿತ್ತು.

ಕೀರ್ತಿ ಸುರೇಶ್ ಡೇಟಿಂಗ್ ಬಗ್ಗೆ ಹರಿದಾಡಿತ್ತು ಸುದ್ದಿ; ಹುಡುಗ ಯಾರು?
ಕೀರ್ತಿ ಸುರೇಶ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 14, 2024 | 7:40 AM

Share

ನಟಿ ಕೀರ್ತಿ ಸುರೇಶ್ ಅವರಿಗೆ ಈಗ 32 ವರ್ಷ. ಅವರ ಮದುವೆ ವಿಚಾರ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಅವರ ಹೆಸರು ಹಲವರ ಜೊತೆ ತಳುಕು ಹಾಕಿಕೊಂಡಿದ್ದು ಇದೆ. ವಿಶೇಷ ಎಂದರೆ ಕೀರ್ತಿ ಸುರೇಶ್ ಅವರ ಹೆಸರು ಪ್ರಮುಖವಾಗಿ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಜೊತೆ ಸೇರಿಕೊಂಡಿತ್ತು. ಈ ವಿಚಾರವಾಗಿ ಅವರು ಸ್ಪಷ್ಟನೆ ಕೊಟ್ಟಿದ್ದರು.

ಕೀರ್ತಿ ಸುರೇಶ್ ಅವರು ಬಾಲ ಕಲಾವಿದೆಯಾಗಿ ಕಾಣಿಸಿಕೊಂಡವರು. 2013ರಲ್ಲಿ ‘ಗೀತಾಂಜಲಿ’ ಸಿನಿಮಾ ಮೂಲಕ ಅವರು ಹೀರೋಯಿನ್ ಆದರು. ಇದು ಮಲಯಾಳಂ ಚಿತ್ರ. ಆ ಬಳಿಕ ಕೀರ್ತಿ ಸುರೇಶ್ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಅವರು ‘ಮಹಾನಟಿ’ ಚಿತ್ರದಿಂದ ದೊಡ್ಡ ಹೆಸರು ಮಾಡಿದರು. ಇದಕ್ಕೆ ಅವರು ರಾಷ್ಟ್ರಪ್ರಶಸ್ತಿ ಕೂಡ ಪಡೆದರು. ಕೀರ್ತಿ ಸುರೇಶ್ ಅವರ ವೈಯಕ್ತಿಕ ಜೀವನ ಕೂಡ ಸಖತ್ ಚರ್ಚೆ ಆಗಿತ್ತು.

ಕೀರ್ತಿ ಸುರೇಶ್ ಅವರ ಹೆಸರು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಜೊತೆ ಸೇರಿಕೊಂಡಿತ್ತು. ಇಬ್ಬರೂ ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಕೀರ್ತಿ ಸುರೇಶ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. ‘ಆ ಸುದ್ದಿ ಸುಳ್ಳು. ನಾನು ಹಾಗೂ ಅನಿರುದ್ಧ್ ಒಳ್ಳೆಯ ಗೆಳೆಯರು’ ಎಂದಷ್ಟೇ ಹೇಳಿದ್ದರು.

ಕೀರ್ತಿ ಸುರೇಶ್​ಗೆ ‘ಮಹಾನಟಿ’ ಚಿತ್ರದಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಇತ್ತೀಚೆಗೆ ಸಿಕ್ಕಿಲ್ಲ. ಅವರು ಚಿತ್ರರಂಗದಲ್ಲಿ ಇನ್ನೂ ಮಿಂಚುವ ಉದ್ದೇಶ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಸದ್ಯಕ್ಕೆ ಮದುವೆ ಆಲೋಚನೆಯಿಂದ ದೂರ ಇದ್ದಾರೆ. ಅವರು ಯಾರ ಜೊತೆಯಾದರೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಂತೆ ಸಖತ್​ ಕ್ಯೂಟ್ ಆಗಿ ಪೋಸ್​ ನೀಡುವ ‘ಮಹಾನಟಿ’ ಕೀರ್ತಿ ಸುರೇಶ್​

ಕೀರ್ತಿ ಸುರೇಶ್ ಈಗ ಹಿಂದಿಯಲ್ಲೂ ಬ್ಯುಸಿ ಆಗುತ್ತಿದ್ದಾರೆ. ‘ರಿವಾಲ್ವರ್ ರೀಟಾ’, ‘ಕನ್ನೇವೇಡಿ’ ಹೆಸರಿನ ತಮಿಳು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಬೇಬಿ ಜಾನ್’ ಹೆಸರಿನ ಹಿಂದಿ ಸಿನಿಮಾದಲ್ಲಿ ವರುಣ್ ಧವನ್​ಗೆ ಜೊತೆಯಾಗಿದ್ದಾರೆ. ಇದು ತಮಿಳಿನ ‘ಥೇರಿ’ ಚಿತ್ರದ ಹಿಂದಿ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಚಿತ್ರ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us