‘ಪುಷ್ಪ 2’ ಟಿಕೆಟ್​ ಕೊಟ್ಟು ‘ಬೇಬಿ ಜಾನ್’ ನೋಡುವಂತೆ ಒತ್ತಾಯಿಸಿದ ಪ್ರದರ್ಶಕರು

ಪ್ರೇಕ್ಷಕರು ಟಿಕೆಟ್ ಬುಕ್ ಮಾಡಿದ್ದು ‘ಪುಷ್ಪ 2’ ಚಿತ್ರಕ್ಕೆ. ಆದರೆ ಚಿತ್ರಮಂದಿರದ ಒಳಗೆ ಹೋಗಿ ಕುಳಿತಾಗ ಪ್ರದರ್ಶನ ಆಗಿದ್ದು ‘ಬೇಬಿ ಜಾನ್’ ಸಿನಿಮಾ. ಇದರಿಂದಾಗಿ ಪ್ರೇಕ್ಷಕರಿಗೆ ಸಖತ್ ನಿರಾಸೆ ಆಗಿದೆ. ‘ಪುಷ್ಪ 2’ ಬದಲು ‘ಬೇಬಿ ಜಾನ್’ ಸಿನಿಮಾವನ್ನು ಪ್ರದರ್ಶನ ಮಾಡಿ, ಅದನ್ನೇ ನೋಡುವಂತೆ ಒತ್ತಾಯಿಸಿದ ಚಿತ್ರಮಂದಿರದವರ ವಿರುದ್ಧ ಪ್ರೇಕ್ಷಕರು ಕೆಂಡಾಮಂಡಲ ಆಗಿದ್ದಾರೆ.

‘ಪುಷ್ಪ 2’ ಟಿಕೆಟ್​ ಕೊಟ್ಟು ‘ಬೇಬಿ ಜಾನ್’ ನೋಡುವಂತೆ ಒತ್ತಾಯಿಸಿದ ಪ್ರದರ್ಶಕರು
Allu Arjun, Varun Dhawan
Follow us
ಮದನ್​ ಕುಮಾರ್​
|

Updated on: Dec 26, 2024 | 6:38 PM

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ 2’ ಸಿನಿಮಾ ತೆರೆಕಂಡು 20 ದಿನದ ಮೇಲಾಗಿದೆ. ಇನ್ನೂ ಕೂಡ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ 1500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಈ ಸಿನಿಮಾ ಮುನ್ನುಗ್ಗುತ್ತಿದೆ. ‘ಪುಷ್ಪ 2’ ನೋಡಲು ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಭಾರಿ ಆಸೆಯಿಂದ ಸಿನಿಮಾ ನೋಡಲು ಬಂದ ಕೆಲವು ಪ್ರೇಕ್ಷಕರಿಗೆ ನಿರಾಸೆ ಆಗಿದೆ. ‘ಪುಷ್ಪ 2’ ಬದಲಿಗೆ ವರುಣ್ ಧವನ್​ ನಟನೆಯ ‘ಬೇಬಿ ಜಾನ್’ ಸಿನಿಮಾವನ್ನು ನೋಡುವಂತೆ ಚಿತ್ರಮಂದಿರದವರು ಒತ್ತಾಯ ಮಾಡಿದ್ದಾರೆ.

ಈ ಘಟನೆ ನಡೆದಿರುವುದು ಜೈಪುರದ ‘ರಾಜ್ ಮಂದಿರ್’ ಥಿಯೇಟರ್​ನಲ್ಲಿ. ಡಿಸೆಂಬರ್​ 25ರಂದು ಬೆಳಗ್ಗೆ 10.45ರ ಪ್ರದರ್ಶನದಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಅನೇಕ ಪ್ರೇಕ್ಷಕರು ಟಿಕೆಟ್​ ಬುಕ್ ಮಾಡಿದ್ದರು. ಚಿತ್ರಮಂದಿರದ ಒಳಗೆ ಹೋಗಿ ಕುಳಿತ ಬಳಿಕ ಎಲ್ಲರಿಗೂ ಶಾಕ್ ಆಯಿತು. ಯಾಕೆಂದರೆ, ‘ಪುಷ್ಪ 2’ ಪ್ರದರ್ಶನ ಆಗುವ ಬದಲು ಬಾಲಿವುಡ್​ನ ‘ಬೇಬಿ ಜಾನ್’ ಸಿನಿಮಾ ಶುರು ಆಯಿತು!

ಪರದೆ ಮೇಲೆ ಅಲ್ಲು ಅರ್ಜುನ್ ಅವರನ್ನು ನೋಡಲು ಬಂದಿದ್ದ ಪ್ರೇಕ್ಷಕರು ವರುಣ್ ಧವನ್​ ಅವರನ್ನು ನೋಡಿ ಕಂಗಾಲಾದರು. ಕೂಡಲೇ ಕೆಲವರು ಗಲಾಟೆ ಮಾಡಿದರು. ವಿಧಿ ಇಲ್ಲದೇ ಕೆಲವು ಪ್ರೇಕ್ಷಕರು ‘ಬೇಬಿ ಜಾನ್’ ಸಿನಿಮಾವನ್ನೇ ನೋಡಿದರು. ಇನ್ನು ಕೆಲವರು ಬೇಸರ ಮಾಡಿಕೊಂಡು ಮನೆಗೆ ಹೋದರು. ಇನ್ನುಳಿದ ಪ್ರೇಕ್ಷಕರು ಚಿತ್ರಮಂದಿರದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  ‘ಪುಷ್ಪ 2’ ನೋಡಲು ಬಂದು ಪೊಲೀಸರ ಬಲೆಗೆ ಬಿದ್ದ ರಿಯಲ್ ಗ್ಯಾಂಗ್​ಸ್ಟರ್

ನಿರ್ಮಾಪಕರು ಹೇಳಿದ್ದರಿಂದ ಈ ರೀತಿ ಬದಲಾವಣೆ ಆಗಿದೆ ಎಂದು ಚಿತ್ರಮಂದಿರದವರು ಸಮರ್ಥನೆ ನೀಡಿದ್ದಾರೆ. ಆದರೆ ಶೋ ಬದಲಾವಣೆ ಬಗ್ಗೆ ತಮಗೆ ಬುಕ್ ಮೈ ಶೋ ಕಡೆಯಿಂದ ಯಾವುದೇ ಮೆಸೇಜ್​ ಬಂದಿಲ್ಲ ಹಾಗೂ ಟಿಕೆಟ್​ಗೆ ನೀಡಿದ ಹಣ ರೀಫಂಡ್​ ಕೂಡ ಆಗಿಲ್ಲ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ಈ ಘಟನೆಯಿಂದಾಗಿ ‘ರಾಜ್ ಮಂದಿರ್’ ಥಿಯೇಟರ್​ನ ಎದುರು ಗೊಂದಲ ಉಂಟಾಗಿತ್ತು.

ಇದನ್ನೂ ಓದಿ: ಸಂಧಾನ ಸಭೆ ಬಳಿಕವೂ ತೆಲುಗು ಚಿತ್ರರಂಗಕ್ಕೆ ಖಡಕ್ ಸಂದೇಶ ನೀಡಿದ ರೇವಂತ್ ರೆಡ್ಡಿ

‘ಬೇಬಿ ಜಾನ್’ ಸಿನಿಮಾದಲ್ಲಿ ವರುಣ್​ ಧವನ್, ಕೀರ್ತಿ ಸುರೇಶ್ ಮುಂತಾದವರು ನಟಿಸಿದ್ದಾರೆ. ತಮಿಳಿನ ‘ಥೇರಿ’ ಸಿನಿಮಾದ ಬಾಲಿವುಡ್ ರಿಮೇಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಡಿಸೆಂಬರ್​ 25ರಂದು ಈ ಸಿನಿಮಾ ಬಿಡುಗಡೆ ಆಗಿದೆ. ವಿಮರ್ಶೆಯ ದೃಷ್ಟಿಯಿಂದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ