AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಸ್ಪರ್ಧಿಗಳ ಊಟದಲ್ಲಿ ಹುಳ; ಕಂಗಾಲಾದ ರಜತ್, ಮೋಕ್ಷಿತಾ

ರಜತ್ ಅವರು ಊಟ ಕೇಳಿದರು. ಅಡುಗೆ ಮನೆಗೆ ಹೋಗಿ ಉಗ್ರಂ ಮಂಜು ಊಟ ತಂದುಕೊಟ್ಟರು. ಅದರಲ್ಲಿ ಹುಳ ಇದ್ದಿದ್ದು ನೋಡಿ ಎಲ್ಲರಿಗೂ ಶಾಕ್ ಆಯಿತು. ಅಂದಹಾಗೆ, ಈ ಘಟನೆ ನಡೆದಿದ್ದು ರೆಸಾರ್ಟ್​ ಟಾಸ್ಕ್​ ನಿಭಾಯಿಸುವಾಗ. ಊಟದಲ್ಲಿ ಹುಳವನ್ನು ನೋಡಿ ಮೋಕ್ಷಿತಾ ಪೈ, ರಜತ್, ಧನರಾಜ್, ತ್ರಿವಿಕ್ರಮ್​, ಭವ್ಯಾ ಗೌಡ ಅವರು ಕಂಗಾಲಾಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳ ಊಟದಲ್ಲಿ ಹುಳ; ಕಂಗಾಲಾದ ರಜತ್, ಮೋಕ್ಷಿತಾ
Bigg Boss Kannada 11
ಮದನ್​ ಕುಮಾರ್​
|

Updated on: Dec 26, 2024 | 10:09 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಬೇರೆ ರೀತಿಯ ಟಾಸ್ಕ್​ ನೀಡಲಾಗಿದೆ. ಇಡೀ ಮನೆಯನ್ನು ರೆಸಾರ್ಟ್​ ರೀತಿ ಮಾಡಲಾಗಿದೆ. ಒಂದು ತಂಡದವರು ರೆಸಾರ್ಟ್​ ಸಿಬ್ಬಂದಿಗಳಾಗಿ, ಇನ್ನೊಂದು ತಂಡದವರು ರೆಸಾರ್ಟ್​ಗೆ ಬಂದ ಅತಿಥಿಗಳಾಗಿ ಟಾಸ್ಕ್​ ನಿಭಾಯಿಸಬೇಕು. ಅತಿಥಿಗಳು ಕೇಳಿದ್ದೆಲ್ಲವನ್ನೂ ಸಿಬ್ಬಂದಿ ನೀಡಬೇಕು. ಅತಿಥಿಗಳ ತಂಡದಲ್ಲಿ ರಜತ್, ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಇವರು ಕೇಳಿ ತರಿಸಿಕೊಂಡ ಊಟದಲ್ಲಿ ಹುಳ ಸಿಕ್ಕಿದೆ!

ಭವ್ಯಾ ಗೌಡ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಧನರಾಜ್​ ಅವರು ಒಂದು ಟೇಬಲ್​ನಲ್ಲಿ ಕುಳಿತು ಊಟ ಆರ್ಡರ್​ ಮಾಡಿದರು. ಉಗ್ರಂ ಮಂಜು ಅದನ್ನು ತಂದುಕೊಟ್ಟರು. ಇನ್ನೇನು ಅದನ್ನು ತಿನ್ನಬೇಕು ಎನ್ನುವಾಗ ಹುಳ ಕಾಣಿಸಿತು. ಊಟದಲ್ಲಿ ಹುಳವಿದ್ದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ. ಅತಿಥಿಗಳ ತಂಡಕ್ಕೆ ಕೂಡ ಹಾಗೆಯೇ ಆಯಿತು. ಎಲ್ಲರೂ ಬಾಯಿ ಬಡಿದುಕೊಂಡರು.

ಹುಳು ಇದೆ ಎಂದು ಹೇಳಿದರೂ ಕೂಡ ಸಿಬ್ಬಂದಿ ತಂಡದ ಉಗ್ರಂ ಮಂಜು ಅವರು ಅದನ್ನು ಕೊತ್ತಂಬರಿ ಸೊಪ್ಪು ಎಂದು ವಾಸಿಸಲು ಶುರು ಮಾಡಿದರು. ‘ಇಲ್ಲಿ ನೋಡು.. ಕೊತ್ತಂಬರಿ ಸೊಪ್ಪಿಗೆ ಕೈ ಕಾಲು ಇದೆ’ ಎಂದು ಹೇಳುವ ಮೂಲಕ ರಜತ್ ಅವರು ಹುಳ ಇರುವುದನ್ನು ಖಚಿತಪಡಿಸಿದರು. ಆ ಆಹಾರವನ್ನು ಉಗ್ರಂ ಮಂಜು ವಾಪಸ್​ ತೆಗೆದುಕೊಂಡು ಹೋದರು.

ಇದನ್ನೂ ಓದಿ: ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ

ಸಿಬ್ಬಂದಿ ತಂಡದ ಮ್ಯಾನೇಜರ್​ ಆಗಿ ಗೌತಮಿ ಜಾದವ್ ಟಾಸ್ಕ್​ ನಿಭಾಯಿಸುತ್ತಿದ್ದಾರೆ. ಅತಿಥಿಗಳು ನೀಡುತ್ತಿರುವ ಟಾರ್ಚರ್​ಗೆ ಅವರು ಸುಸ್ತಾಗಿದ್ದಾರೆ. ಮಧ್ಯರಾತ್ರಿ ಬಾತ್​ ರೂಮ್​ಗೆ ತೆರಳಿ ಗೌತಮಿ ಅವರು ಅಳುತ್ತಾ ಕುಳಿತಿದ್ದಾರೆ. ಎಷ್ಟೇ ಆದರೂ ರಜತ್ ಅವರ ಕ್ವಾಟ್ಲೆ ಕಡಿಮೆ ಆಗುತ್ತಿಲ್ಲ. ಸಿಬ್ಬಂದಿಗಳಿಗೆ ಇನ್ನಷ್ಟು ಕಷ್ಟ ಕೊಡಲು ಅವರು ಹೊಸ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಮೊದಲು ಭವ್ಯಾ ಗೌಡ ಅವರು ಸಿಬ್ಬಂದಿಗಳ ತಂಡದಲ್ಲಿ ಇದ್ದರು. ಅವರು ಕೂಡ ಟಾಸ್ಕ್​ ನಿಭಾಯಿಸಲು ಕಷ್ಟವಾಗಿದ್ದಕ್ಕೆ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್

ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ 88 ದಿನಗಳು ಕಳೆದಿವೆ. ಈಗ ಆಟದಲ್ಲಿ ಪೈಪೋಟಿ ಜೋರಾಗಿದೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಫಿನಾಲೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ವಾರ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.