ಹೊರಗೆ ಹಾಕ್ರಿ ಇವನ್ನ: ರಜತ್ ವಿರುದ್ಧ ಕೂಗಾಡಿದ ಮೋಕ್ಷಿತಾ
Bigg Boss Kannada: ಬಿಗ್ಬಾಸ್ ಮನೆ ಕೆಲ ದಿನದಿಂದ ಬಿಬಿ ರೆಸಾರ್ಟ್ ಆಗಿದೆ. ಬಿಗ್ಬಾಸ್ ಮನೆಯಲ್ಲಿ ಆಸಕ್ತಿಕರ ಟಾಸ್ಕ್ ನಡೆಯುತ್ತಿದೆ. ಇಷ್ಟು ದಿನ ಸಿಬ್ಬಂದಿ ಆಗಿದ್ದವರು ಈಗ ಅತಿಥಿಗಳಾಗಿದ್ದಾರೆ. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾಗಿದ್ದಾರೆ. ಆದರೆ ಒಂದೇ ತಂಡದಲ್ಲಿದ್ದರೂ ರಜತ್ ಮೇಲೆ ಮೋಕ್ಷಿತಾ ಕೂಗಾಡಿದ್ದಾರೆ. ಕಾರಣ ಏನು?
ಬಿಗ್ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಕಳೆದ ಕೆಲ ದಿನ ಚೈತ್ರಾ, ಮಂಜು, ಹನುಮಂತು, ಐಶ್ವರ್ಯಾ, ಗೌತಮಿ ಅವರುಗಳು ಅತಿಥಿಗಳಾಗಿ ಇದ್ದರು. ಸಿಬ್ಬಂದಿಗಳಾಗಿದ್ದ ಭವ್ಯಾ, ರಜತ್, ತ್ರಿವಿಕ್ರಮ್, ಮೋಕ್ಷಿತಾ ಅವರುಗಳಿಗೆ ಸಖತ್ ಟಾರ್ಚರ್ ಕೊಟ್ಟಿದ್ದರು. ಇಂದು (ಡಿಸೆಂಬರ್ 25)ರ ಎಪಿಸೋಡ್ನಲ್ಲಿ ಬಿಗ್ಬಾಸ್ ಆದೇಶದಂತೆ ಸಿಬ್ಬಂದಿಗಳು ಅತಿಥಿಗಳಾದರು. ಅತಿಥಿಗಳಾಗಿದ್ದವರು ಸಿಬ್ಬಂದಿಗಳಾದರು. ಆಗ ರಜತ್, ತ್ರಿವಿಕ್ರಮ್, ಮೋಕ್ಷಿತಾ ಇನ್ನಿತರರು ಮೊದಲೇ ಯೋಜನೆ ಹಾಕಿಕೊಂಡು ಚೈತ್ರಾ ಮತ್ತು ಗ್ಯಾಂಗ್ ಅನ್ನು ಗೋಳು ಹೊಯ್ದುಕೊಂಡರು.
ರಜತ್, ಪೈಲ್ವಾನನ ರೀತಿ ರೆಸಾರ್ಟ್ಗೆ ಎಂಟ್ರಿ ಕೊಟ್ಟಿದ್ದಲ್ಲದೆ ತನ್ನದೇ ತಂಡದ ಸದಸ್ಯರ ಮೇಲೆ ಸುಳ್ಳು ಜಗಳಗಳನ್ನು ಮಾಡಿಕೊಂಡರು. ರೆಸಾರ್ಟ್ಗೆ ಬಂದ ಮೋಕ್ಷಿತಾ ಮೈ ಮುಟ್ಟುವುದು, ಭವ್ಯಾ ಹೋಗುತ್ತಿದ್ದಾಗ ಹಿಂದಿನಿಂದ ಕಾಲು ಮುಟ್ಟುವುದು ಇಂಥಹಾ ಚೇಷ್ಟೆಗಳನ್ನು ಮಾಡಿದರು. ಕೆಲ ಸಮಯದಲ್ಲಿ ಮೋಕ್ಷಿತಾ ಮತ್ತು ಭವ್ಯಾ ನಿಜವಾಗಿಯೂ ರಜತ್ ಮೇಲೆ ಸಿಟ್ಟು ಮಾಡಿಕೊಂಡಂತೆ ಕಂಡು ಬಂತು.
ಇದನ್ನೂ ಓದಿ:ರಿವರ್ಸ್ ಆಯ್ತು ರೋಲ್, ಹೇಳಿದಂತೆ ಹಣ್ಣುಗಾಯಿ ಮಾಡಿದ ರಜತ್
ರಜತ್ ಅನ್ನು ರೆಸಾರ್ಟ್ಗೆ ಯಾಕೆ ಸೇರಿಸಿದಿರಿ ಎಂದು ಹಲವು ಬಾರಿ ಅತಿಥಿಗಳಾದ ಮೋಕ್ಷಿತಾ, ಭವ್ಯಾ ಅವರುಗಳು ಮ್ಯಾನೇಜರ್ ಗೌತಮಿ ಬಳಿ ಹೇಳಿದರು. ಗೌತಮಿ, ಚೈತ್ರಾ ಅವರುಗಳು ರಜತ್ ಬಳಿ ಸರ್, ಪ್ಲೀಸ್ ಸರ್ ಎನ್ನುತ್ತಾ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಆದರೆ ರಜತ್ ಸುಮ್ಮನಾಗಲಿಲ್ಲ. ತಮ್ಮದೇ ತಂಡದ ಸ್ಪರ್ಧಿಗಳನ್ನು ರೇಗಿಸುತ್ತಾ ಇದ್ದರು. ಒಂದು ಹಂತದಲ್ಲಿ ಮೋಕ್ಷಿತಾ, ಅವನನ್ನು ಮೊದಲು ಎತ್ತಿ ರೆಸಾರ್ಟ್ನಿಂದ ಹೊರಗೆ ಹಾಕಿ ಎಂದು ಕೂಗಾಡಿದರು.
ರಜತ್, ಸಿಬ್ಬಂದಿ ಆಗಿದ್ದಾಗ ಮೊದಲಿಗೆ ಚೆನ್ನಾಗಿ ಟಾಸ್ಕ್ ಮಾಡಿದರು. ಆದರೆ ಬರ ಬರುತ್ತಾ ಅವರ ತಾಳ್ಮೆ ಕಟ್ಟೆ ಒಡೆಯಿತು. ಎರಡನೇ ದಿನಕ್ಕೆ ಅವರು ನಿಯಮಗಳನ್ನು ಮುರಿಯಲು ಆರಂಭಿಸಿದ್ದರು. ಚೈತ್ರಾ ಇನ್ನಿತರೆಯವರಿಗೆ ಟಾಂಗ್ ಕೊಡುವುದಕ್ಕೆ ಆರಂಭ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ