IND vs SA: ರಾಹುಲ್ ಪಡೆಗೆ ಸಿಹಿ ಸುದ್ದಿ; ಬಯೋ ಬಬಲ್​ ನಿಯಮಗಳಿಂದ ಟೀಂ ಇಂಡಿಯಾ ಆಟಗಾರರು ಮುಕ್ತ!

| Updated By: ಪೃಥ್ವಿಶಂಕರ

Updated on: Jun 01, 2022 | 5:07 PM

IND vs SA: ಟೀಂ ಇಂಡಿಯಾದಲ್ಲಿ ಇಷ್ಟು ದಿನ ಆಟಗಾರರಿಗೆ ವಿಧಿಸಿದ್ದ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲು ಬಿಸಿಸಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗರಿಗೆ ಬಯೋ ಬಬಲ್​ನ ಅಗತ್ಯ ಅಂತ್ಯ ಕಾಣುತ್ತಿದೆ.

IND vs SA: ರಾಹುಲ್ ಪಡೆಗೆ ಸಿಹಿ ಸುದ್ದಿ; ಬಯೋ ಬಬಲ್​ ನಿಯಮಗಳಿಂದ ಟೀಂ ಇಂಡಿಯಾ ಆಟಗಾರರು ಮುಕ್ತ!
Team India
Follow us on

ಕಳೆದ ಕೆಲವು ವರ್ಷಗಳಿಂದ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಮಹಾಮಾರಿ ಈಗ ತನ್ನ ಪ್ರಭಾವವನ್ನು ಕಡಿಮೆ ಮಾಡಿದೆ. ಹೀಗಾಗಿ ಇದರ ನಿಯಂತ್ರಣಕ್ಕಾಗಿ ವಿಧಿಸಿದ್ದ ಕೆಲವು ನಿಯಮಗಳು ಈಗ ಸಡಿಲಗೊಳ್ಳಲು ಪ್ರಾರಂಭವಾಗಿವೆ. ಇದಕ್ಕೆ ಪೂರಕವೆಂಬಂತೆ ಟೀಂ ಇಂಡಿಯಾದಲ್ಲಿ ಇಷ್ಟು ದಿನ ಆಟಗಾರರಿಗೆ ವಿಧಿಸಿದ್ದ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲು ಬಿಸಿಸಿಐ (BCCI) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗರಿಗೆ ಬಯೋ ಬಬಲ್​ (bio-bubble)ನ ಅಗತ್ಯ ಅಂತ್ಯ ಕಾಣುತ್ತಿದೆ. ಇದು ದೆಹಲಿಯಿಂದ ಆರಂಭವಾಗಲಿದೆ. ಐಪಿಎಲ್ 2022 (IPL 2022) ಸೀಸನ್ ಮುಗಿದ ನಂತರ ಟೀಂ ಇಂಡಿಯಾ (Team India) ಅಂತರಾಷ್ಟ್ರೀಯ ಸರಣಿಗೆ ತಯಾರಿ ನಡೆಸುತ್ತಿದೆ. ಇದರ ಭಾಗವಾಗಿ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟಿ20 ಸರಣಿಯಲ್ಲಿ ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಟಿ20 ಪಂದ್ಯದಿಂದ ಬಯೋ ಬಬಲ್ ಸೇರಿದಂತೆ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

2 ತಿಂಗಳ ಐಪಿಎಲ್ ನಂತರ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟ್ ಮೇಲೆ ಗಮನ ಹರಿಸಿದೆ. ಸರಣಿಯಲ್ಲಿ ಭಾಗವಹಿಸುವ ಎಲ್ಲಾ ಭಾರತೀಯ ಆಟಗಾರರು ಜೂನ್ 5 ರೊಳಗೆ ದೆಹಲಿಗೆ ಮರಳಲು ಮಂಡಳಿಯು ಕೇಳಿದೆ. ದಕ್ಷಿಣ ಆಫ್ರಿಕಾ ತಂಡವು ಜೂನ್ 2 ರಂದು ಮೊದಲು ದೆಹಲಿಗೆ ಆಗಮಿಸಲಿದೆ. ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್ ದೆಹಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಬೇಕಿದೆ ಎಂಬುದು ಗೊತ್ತೇ ಇದೆ. ಜೂನ್ 19 ರವರೆಗೆ ಟೀಂ ಇಂಡಿಯಾ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ನಂತರ ಅವರು ಈ ತಿಂಗಳ ಕೊನೆಯಲ್ಲಿ ಐರ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಎರಡು ಟಿ20 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು

ಇದನ್ನೂ ಓದಿ
ಭಾರತದ ವಿರುದ್ಧ 23 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಡೇವಿಡ್ ಹೋಲ್ಫೋರ್ಡ್ ನಿಧನ
IPL 2022: ಹರಾಜಿನಲ್ಲಿ ಕಡಿಮೆ ಹಣ.. ಆದರೂ ಚೊಚ್ಚಲ ಐಪಿಎಲ್​ನಲ್ಲೇ ಅದ್ಭುತ ಪ್ರದರ್ಶನ ತೋರಿದ ಯುವ ಕ್ರಿಕೆಟಿಗರಿವರು

ಜೂನ್ 16 ರಂದು ಇಂಗ್ಲೆಂಡ್ ಪ್ರವಾಸ ..

ತಂಡದಲ್ಲಿರುವ ಎರಡನೇ ತಂಡವು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ಪ್ರಯಾಣಿಸಲಿದ್ದು, ನಂತರ ವೈಟ್ ಬಾಲ್ ಸರಣಿಗೆ ತೆರಳಲಿದೆ. ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಸಹ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದ್ದು, ಈ ಮೂವರು ಭಾರತ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಜೂನ್ 19 ರಂದು ಅಂತಿಮ ಟಿ20 ನಂತರ ಈ ಮೂವರು ಬೆಂಗಳೂರಿನಿಂದ ನೇರವಾಗಿ ಲಂಡನ್‌ಗೆ ಹಾರಲಿದ್ದಾರೆ.

ನಾಯಕನಾಗಿ ಕಣಕ್ಕೆ ಇಳಿದ ರಾಹುಲ್..!

ಬಿಸಿಸಿಐ ಆಯ್ಕೆಗಾರರು ಕಳೆದ ವಾರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸಿದರು. ಟೀಂ ಇಂಡಿಯಾ ಕಮಾಂಡ್ ಕೆಎಲ್ ರಾಹುಲ್​ಗೆ ಹಸ್ತಾಂತರ ಮಾಡಲಾಗಿದೆ. ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ವೇಗದ ಬೌಲರ್‌ಗಳಾದ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಜೊತೆಗೆ ಈ ತಂಡದಲ್ಲಿ ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಸೇರಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ T20 ಸರಣಿ ವೇಳಾಪಟ್ಟಿ:

ಮೊದಲ ಟಿ20 – ಜೂನ್ 9, ದೆಹಲಿ

ಎರಡನೇ ಟಿ20 – ಜೂನ್ 12, ಕಟಕ್

ಮೂರನೇ ಟಿ20 – ಜೂನ್ 14, ವಿಶಾಖಪಟ್ಟಣ

ನಾಲ್ಕನೇ T20 – ಜೂನ್ 17, ರಾಜ್ಕೋಟ್

ಐದನೇ ಟಿ20-ಜೂನ್ 19, ಬೆಂಗಳೂರು