IPL 2022: 74 ಪಂದ್ಯಗಳಿಗೆ ಪಿಚ್ ಸಿದ್ಧಪಡಿಸಿದ ಕ್ಯುರೇಟರ್‌ಗಳಿಗೆ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ!
IPL 2022: ಸೀಸನ್ನ 74 ಪಂದ್ಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಪಿಚ್ ಮತ್ತು ಮೈದಾನವನ್ನು ಸಿದ್ಧಪಡಿಸಿದ ಕ್ಯುರೇಟರ್‌ಗಳಿಗೆ ಬಿಸಿಸಿಐ 1.25 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
ಎರಡು ವರ್ಷಗಳ ಕಾಲ ಕಾಯುವಿಕೆಯ ನಂತರ, ಅಂತಿಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಂಪೂರ್ಣ ಸೀಸನ್ನನ್ನು ಭಾರತದಲ್ಲಿ ಆಯೋಜಿಸಲಾಯಿತು. ಐಪಿಎಲ್ 2022 (IPL 2022) ಮಾರ್ಚ್ 26 ರಂದು ಪ್ರಾರಂಭವಾಗಿ, ಮೇ 29 ರಂದು ಫೈನಲ್‌ನೊಂದಿಗೆ ಭವ್ಯವಾದ ಶೈಲಿಯಲ್ಲಿ ಕೊನೆಗೊಂಡಿತು. ಕೊರೊನಾ ವೈರಸ್ ಸೋಂಕಿನ ಬಿಕ್ಕಟ್ಟಿನ ಕಾರಣ, ಕಳೆದ ಎರಡು ಸೀಸನ್ಗಳನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಕಳೆದ ವರ್ಷ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದನ್ನು ದೇಶದಲ್ಲಿಯೇ ಆಯೋಜಿಸಲು ಪ್ರಯತ್ನಿಸಿತ್ತು, ಆದರೆ ನಂತರ ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಈಗ ಈ ಬಾರಿ ಬಿಸಿಸಿಐ ಇದರಲ್ಲಿ ಯಶಸ್ಸು ಸಾಧಿಸಿದೆ. ಅಹಮದಾಬಾದ್ ಮತ್ತು ಕೋಲ್ಕತ್ತಾದ ಹೊರತಾಗಿ ಮುಂಬೈನ ಮೂರು ಮತ್ತು ಪುಣೆಯ ಒಂದು ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಮೈದಾನಗಳು ರೋಚಕ ಪಂದ್ಯಗಳಿಗೆ ಸಾಕ್ಷಿಯಾದವು. ಸೀಸನ್ನ 74 ಪಂದ್ಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಪಿಚ್ ಮತ್ತು ಮೈದಾನವನ್ನು ಸಿದ್ಧಪಡಿಸಿದ ಕ್ಯುರೇಟರ್‌ಗಳಿಗೆ ಬಿಸಿಸಿಐ 1.25 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರು ಪಂದ್ಯಾವಳಿ ಮುಗಿದ ಒಂದು ದಿನದ ನಂತರ ಸೋಮವಾರ, ಮೇ 30 ರಂದು ಎಲ್ಲಾ ಆರು ಸ್ಥಳಗಳ ಕ್ಯುರೇಟರ್‌ಗಳಿಗೆ ಪ್ರಶಸ್ತಿಯನ್ನು ಘೋಷಿಸಿದರು. ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದ ಶಾ, “ಐಪಿಎಲ್ 2022 ರಲ್ಲಿ ನಮಗೆ ಅತ್ಯುತ್ತಮ ಪಂದ್ಯಗಳನ್ನು ಆಡಲು ಸಹಕರಿಸಿದವರಿಗೆ ರೂ 1.25 ಕೋಟಿ ಬಹುಮಾನವನ್ನು ಘೋಷಿಸಲು ನನಗೆ ಅಪಾರ ಸಂತೋಷವಾಗಿದೆ. ನಮ್ಮ ಅಜ್ಞಾತ ಹೀರೋಗಳು – ಎಲ್ಲಾ 6 ಐಪಿಎಲ್ ಸ್ಥಳಗಳ ಕ್ಯುರೇಟರ್‌ಗಳು ಮತ್ತು ಗ್ರೌಂಡ್ಸ್‌ಮನ್‌ಗಳು ಎಂದು ಬರೆದುಕೊಂಡಿದ್ದಾರೆ.
We’ve witnessed some high octane games and I would like thank each one of them for their hardwork. 25 lacs each for CCI, Wankhede, DY Patil and MCA, Pune 12.5 lacs each for Eden and Narendra Modi Stadium
— Jay Shah (@JayShah) May 30, 2022
ಐಪಿಎಲ್ 2022 ರಲ್ಲಿ, 10 ತಂಡಗಳು ಕಳೆದ 64 ದಿನಗಳಲ್ಲಿ ಒಟ್ಟು 74 ಪಂದ್ಯಗಳನ್ನು ಆಡಿವೆ, ಇದಕ್ಕಾಗಿ 6 ಮೈದಾನಗಳನ್ನು ಬಳಸಲಾಗಿದೆ. ಈ ಪೈಕಿ ಮೂರು ಮುಂಬೈನಲ್ಲಿದ್ದರೆ, ತಲಾ ಒಂದು ಪುಣೆ, ಅಹಮದಾಬಾದ್ ಮತ್ತು ಕೋಲ್ಕತ್ತಾದಲ್ಲಿವೆ. ಅವರೆಲ್ಲರಿಗೂ ಬಹುಮಾನವನ್ನು ಘೋಷಿಸಿದ ಶಾ, “ನಾವು ಅನೇಕ ರೋಚಕ ಪಂದ್ಯಗಳನ್ನು ನೋಡಿದ್ದೇವೆ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಸಿಸಿಐ (Cricket Club of India – Brabourne Stadium), ವಾಂಖೆಡೆ, ಡಿವಿಐ ಪಾಟೀಲ್ ಮತ್ತು ಎಂಸಿಎ ಪುಣೆಗೆ ತಲಾ 25 ಲಕ್ಷ ರೂ. ಈಡನ್ ಮತ್ತು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಲಾ 12.5 ಲಕ್ಷ ರೂ. ನೀಡಿರುವುದಾಗಿ ಜೈ ಶಾ ಘೋಷಿಸಿದ್ದಾರೆ.
Published On - 8:39 pm, Mon, 30 May 22