AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಅತಿ ಹೆಚ್ಚು ರನ್, ಶತಕ, ಅರ್ಧಶತಕ, ವಿಕೆಟ್; ಈ ಐಪಿಎಲ್​ನ ಹಲವು ವೈಯಕ್ತಿಕ ದಾಖಲೆಗಳ ವಿವರವಿದು

IPL 2022: ರಾಜಸ್ಥಾನ್ ರಾಯಲ್ಸ್ ನಂತರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಿ ಚಾಂಪಿಯನ್ ಆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಗುಜರಾತ್ ಟೈಟಾನ್ಸ್ ಪಾತ್ರವಾಯಿತು.

IPL 2022: ಅತಿ ಹೆಚ್ಚು ರನ್, ಶತಕ, ಅರ್ಧಶತಕ, ವಿಕೆಟ್; ಈ ಐಪಿಎಲ್​ನ ಹಲವು ವೈಯಕ್ತಿಕ ದಾಖಲೆಗಳ ವಿವರವಿದು
Ipl 2022 Players Stats And Records
TV9 Web
| Updated By: ಪೃಥ್ವಿಶಂಕರ|

Updated on:May 30, 2022 | 6:14 PM

Share

ಗುಜರಾತ್ ಟೈಟಾನ್ಸ್ ಐಪಿಎಲ್ 2022 ರ ಫೈನಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ (GT vs RR) ವಿರುದ್ಧ 7 ವಿಕೆಟ್‌ಗಳಿಂದ ಜಯಗಳಿಸಿತು. ಇದರೊಂದಿಗೆ 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ರಾಜಸ್ಥಾನ್ ರಾಯಲ್ಸ್ ಕನಸು ಭಗ್ನಗೊಂಡಿತು. ರಾಜಸ್ಥಾನ್ ರಾಯಲ್ಸ್ ನಂತರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಿ ಚಾಂಪಿಯನ್ ಆದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಗುಜರಾತ್ ಟೈಟಾನ್ಸ್ ಪಾತ್ರವಾಯಿತು. ಈ ಲೀಗ್‌ನಲ್ಲಿ ಹಲವು ಆಟಗಾರರು ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ್ದಾರೆ. ಈ ಋತುವಿನಲ್ಲಿ ವೈಯಕ್ತಿಕ ದಾಖಲೆಗಳನ್ನು ಮುರಿದ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ:IPL 2022 Final: ಐಪಿಎಲ್ ಚಾಂಪಿಯನ್ ಆದ 7ನೇ ತಂಡ ಗುಜರಾತ್; ಉಳಿದ 6 ತಂಡಗಳ ವಿವರ ಹೀಗಿದೆ ನೋಡಿ

ಈ ಸೀಸನ್​ನ ಅತಿ ಹೆಚ್ಚು ಶತಕ

ಇದನ್ನೂ ಓದಿ
Image
IPL 2022 Final: ಐಪಿಎಲ್ ಚಾಂಪಿಯನ್ ಆದ 7ನೇ ತಂಡ ಗುಜರಾತ್; ಉಳಿದ 6 ತಂಡಗಳ ವಿವರ ಹೀಗಿದೆ ನೋಡಿ
Image
GT vs RR Final: ಕೊಹ್ಲಿ ದಾಖಲೆ ಮುರಿಯಲ್ಲಾಗಲಿಲ್ಲ! ಈ ಐಪಿಎಲ್​ನಲ್ಲಿ ಬಟ್ಲರ್ ಸೃಷ್ಟಿಸಿದ ಪ್ರಮುಖ ದಾಖಲೆಗಳಿವು
Image
GT vs RR Final: ಹಾರ್ದಿಕ್ ಸುಳ್ಳು ಹೇಳುತ್ತಿದ್ದಾನೆ ಎಂದ ನೆಹ್ರಾ! ಪ್ರಶಸ್ತಿ ಬಳಿಕ ಪಾಂಡ್ಯ- ನೆಹ್ರಾ ಮನದಾಳದ ಮಾತು ಹೀಗಿತ್ತು

ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ 4 ಶತಕಗಳನ್ನು ಗಳಿಸಿದರು.

ಬಿಗ್ ಇನ್ನಿಂಗ್ಸ್..

ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 140 ರನ್​ಗಳ ಅಜೇಯ ಬಿಗ್ ಇನ್ನಿಂಗ್ಸ್ ಆಡಿದರು.

ಡಾಟ್ ಬಾಲ್‌ಗಳು..

ರಾಜಸ್ಥಾನ ರಾಯಲ್ಸ್‌ನ ಪ್ರಸಿದ್ಧ್ ಕೃಷ್ಣ ಅವರು ಅತಿ ಹೆಚ್ಚು 200 ಡಾಟ್ ಬಾಲ್‌ಗಳನ್ನು ಎಸೆದರು.

ಅತ್ಯುತ್ತಮ ಬೌಲರ್ ಸರಾಸರಿ..

5ಕ್ಕಿಂತ ಹೆಚ್ಚು ಇನ್ನಿಂಗ್ಸ್‌ಗಳನ್ನು ಬೌಲ್ ಮಾಡಿದ ಬೌಲರ್‌ಗಳ ಪೈಕಿ ಲಕ್ನೋ ಸೂಪರ್ ಜೈಂಟ್ಸ್‌ನ ಮೊಹ್ಸಿನ್ ಖಾನ್ ತಮ್ಮ ಅತ್ಯುತ್ತಮ ಸರಾಸರಿಯೊಂದಿಗೆ (14.07) ಪ್ರಭಾವ ಬೀರಿದರು.

ಒಂದು ಪಂದ್ಯದಲ್ಲಿ ಅತ್ಯಂತ ದುಬಾರಿ ಬೌಲರ್..

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಜೋಸ್ ಹೇಜಲ್‌ವುಡ್ 4 ಓವರ್‌ಗಳಲ್ಲಿ 64 ರನ್‌ ನೀಡಿ ದುಬಾರಿ ಎನಿಸಿಕೊಂಡಿದ್ದರು.

ಅತ್ಯುತ್ತಮ ಪ್ರದರ್ಶನ ..

ಮುಂಬೈ ಇಂಡಿಯನ್ಸ್ ತಂಡದ ಜಸ್ಪ್ರೀತ್ ಬುಮ್ರಾ ಕೆಕೆಆರ್ ವಿರುದ್ಧ 10 ರನ್ ನೀಡಿ 5 ವಿಕೆಟ್ ಪಡೆದರು.

ಅತ್ಯುತ್ತಮ ಸ್ಟ್ರೈಕ್ ರೇಟ್..

5ಕ್ಕಿಂತ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದವರಲ್ಲಿ ಕೆಕೆಆರ್‌ನ ಆಂಡ್ರೆ ರಸೆಲ್ 9.94 ಸ್ಟ್ರೈಕ್ ರೇಟ್‌ನೊಂದಿಗೆ ವಿಕೆಟ್ ಪಡೆದರು.

ಅತ್ಯುತ್ತಮ ಎಕಾನಮಿ ರೇಟ್..

ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪಿನ್ನರ್ ಸುನಿಲ್ ನರೈನ್ 5.57 ರ ಎಕಾನಮಿ ರೇಟ್​ನೊಂದಿಗೆ 14 ಪಂದ್ಯಗಳಲ್ಲಿ ಬೌಲ್ ಮಾಡಿದ್ದಾರೆ.

ಅತಿ ಹೆಚ್ಚು ವಿಕೆಟ್..

ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 27 ವಿಕೆಟ್‌ಗಳಿಂದ ಪರ್ಪಲ್ ಕ್ಯಾಪ್ ಗೆದ್ದರು.

ವೇಗದ ಶತಕ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದಾರ್ ಈ ಬಾರಿಯ ಐಪಿಎಲ್ ಋತುವಿನಲ್ಲಿ ಕೇವಲ 49 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದರು.

ಹೆಚ್ಚು ಅರ್ಧ ಶತಕಗಳು..

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಐಪಿಎಲ್ 2022 ರಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು ತಮ್ಮ ಬ್ಯಾಟ್‌ನಿಂದ 12 ಪಂದ್ಯಗಳಲ್ಲಿ 5 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಹೆಚ್ಚಿನ ಬೌಂಡರಿ, ಸಿಕ್ಸರ್..

ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ ಗರಿಷ್ಠ 83 ಬೌಂಡರಿ ಮತ್ತು 45 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಹೆಚ್ಚಿನ ರನ್..

ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ 863 ರನ್‌ಗಳೊಂದಿಗೆ ಐಪಿಎಲ್ 2022 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

Published On - 6:14 pm, Mon, 30 May 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ