IND vs SA: ಗೆದ್ದರೂ ದೂರವಾಗಿಲ್ಲ ಟೀಮ್ ಇಂಡಿಯಾ ಚಿಂತೆ..!

IND vs SA 4th T20: ಮೊದಲ ಮೂರು ಪಂದ್ಯಗಳಲ್ಲೂ ಆರಂಭಿಕನಾಗಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ರುತುರಾಜ್ ಗಾಯಕ್ವಾಡ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

IND vs SA: ಗೆದ್ದರೂ ದೂರವಾಗಿಲ್ಲ ಟೀಮ್ ಇಂಡಿಯಾ ಚಿಂತೆ..!
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 16, 2022 | 11:28 AM

ಭಾರತ-ಸೌತ್ ಆಫ್ರಿಕಾ (India vs South Africa 4th T20) ನಡುವಣ 4ನೇ ಟಿ20 ಪಂದ್ಯವು ರಾಜ್​ಕೋಟ್​ನಲ್ಲಿ ನಾಳೆ ನಡೆಯಲಿದೆ. ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಏಕೆಂದರೆ 5 ಪಂದ್ಯಗಳ ಸರಣಿಯು 2-1 ಅಂತರದಲ್ಲಿದ್ದು, ಮುಂದಿನ ಪಂದ್ಯವನ್ನು ಗೆದ್ದರೆ ಸರಣಿ ಸೌತ್ ಆಫ್ರಿಕಾ ವಶವಾಗಲಿದೆ. ಇನ್ನೊಂದೆಡೆ ಸರಣಿಯಲ್ಲಿ ಸಮಬಲ ಸಾಧಿಸಲು ಟೀಮ್ ಇಂಡಿಯಾ (Team India) ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡವು 3ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡಿದೆ. ಇದಾಗ್ಯೂ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗವು ಇನ್ನೂ ಕೂಡ ಟ್ರ್ಯಾಕ್​ಗೆ ಮರಳಿಲ್ಲ ಎಂದೇ ಹೇಳಬಹುದು.

ಏಕೆಂದರೆ ಮೊದಲ ಮೂರು ಪಂದ್ಯಗಳಲ್ಲೂ ಆರಂಭಿಕನಾಗಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ರುತುರಾಜ್ ಗಾಯಕ್ವಾಡ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹಾಗೆಯೇ ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಅಬ್ಬರಿಸುವ ಮೂಲಕ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾಗಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ರನ್​ಗಳಿಸಲು ಪರದಾಡುತ್ತಿರುವುದು ಇದೀಗ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಏಕೆಂದರೆ ಶ್ರೇಯಸ್ ಅಯ್ಯರ್ 3ನೇ ಕ್ರಮಾಂಕದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಹಾಗೆಯೇ ರಿಷಭ್ ಪಂತ್ ಕಡೆಯಿಂದ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ 3ನೇ ಟಿ20 ಪಂದ್ಯದಲ್ಲಿ ಮಧ್ಯಮ ಕ್ರಮಾಂಕವು ಸಂಪೂರ್ಣವಾಗಿ ಕೈಕೊಟ್ಟಿತ್ತು. ಏಕೆಂದರೆ ಆ ಪಂದ್ಯದಲ್ಲಿ 12 ಓವರ್​ಗಳಲ್ಲಿ ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ 126 ರನ್​ ಕಲೆಹಾಕಿತ್ತು. ಆದರೆ ಉಳಿದ 8 ಓವರ್​ಗಳಲ್ಲಿ ಗಳಿಸಿದ್ದು ಕೇವಲ 53 ರನ್​ ಮಾತ್ರ. ಅದರಂತೆ ಟೀಮ್ ಇಂಡಿಯಾ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 179 ರನ್​ಗಳಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಟೀಮ್ ಇಂಡಿಯಾ ಬೌಲರ್​ಗಳ ಸಾಂಘಿಕ ಪ್ರದರ್ಶನದ ಫಲವಾಗಿ 48 ರನ್​ಗಳ ಜಯ ಸಾಧಿಸಿತ್ತು.

ಇದನ್ನೂ ಓದಿ
Image
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Image
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಅಂದರೆ ಇಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ವಿಫಲರಾಗುತ್ತಿರುವುದು ಟೀಮ್ ಇಂಡಿಯಾ ರನ್​ಗತಿಯನ್ನು ಕುಂಠಿತಗೊಳಿಸುತ್ತಿರುವುದು ಸ್ಪಷ್ಟ. ಏಕೆಂದರೆ ಮೊದಲ ಪಂದ್ಯದಲ್ಲಿ ಅಯ್ಯರ್ 27 ಎಸೆತಗಳಲ್ಲಿ ಕೇವಲ 36 ರನ್​ ಬಾರಿಸಿದ್ದರು. ಇನ್ನು ರಿಷಭ್ ಪಂತ್ ಕಲೆಹಾಕಿದ್ದು ಕೇವಲ 29 ರನ್​ ಮಾತ್ರ. ಇನ್ನು 2ನೇ ಪಂದ್ಯದಲ್ಲೂ 35 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಬಾರಿಸಿದ್ದು 40 ರನ್​ ಮಾತ್ರ. ಹಾಗೆಯೇ ಪಂತ್ 7 ಎಸೆತಗಳಲ್ಲಿ 5 ರನ್​ ಬಾರಿಸಿ ಔಟಾಗಿದ್ದರು. ಮೂರನೇ ಪಂದ್ಯದಲ್ಲಿ ಪಂತ್ 6 ರನ್​ ಬಾರಿಸಿದರೆ, ಶ್ರೇಯಸ್ ಅಯ್ಯರ್ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಬೇಕಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಒಬ್ಬರು ಸ್ಪೋಟಕ ಇನಿಂಗ್ಸ್ ಆಡಲೇಬೇಕಾಗುತ್ತದೆ.

ಈಗಾಗಲೇ ರುತುರಾಜ್ ಹಾಗೂ ಇಶಾನ್ ಕಿಶನ್ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಹಾಗೆಯೇ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇದರ ನಡುವೆ ನಾಯಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಕೈಕೊಡುತ್ತಿರುವುದು, ಅದರಲ್ಲೂ ಹೆಚ್ಚಿನ ಎಸೆತಗಳನ್ನು ಎದುರಿಸಿ ಕಡಿಮೆ ರನ್​ ಕಲೆಹಾಕುತ್ತಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

ಟೀಮ್ ಇಂಡಿಯಾ ಟಿ20 ತಂಡ: ರುತುರಾಜ್ ಗಾಯಕ್ವಾಡ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ರಿಷಭ್ ಪಂತ್ (ನಾಯಕ) , ಹಾರ್ದಿಕ್ ಪಾಂಡ್ಯ , ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್ , ಹರ್ಷಲ್ ಪಟೇಲ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಾಹಲ್ , ಅವೇಶ್ ಖಾನ್.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.