AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಸಿರಾಜ್ ದಾಳಿಗೆ ತತ್ತರಿಸಿದ ಆಫ್ರಿಕಾ; ಕೇವಲ 55 ರನ್​ಗಳಿಗೆ ಆಲೌಟ್​..!

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೇಪ್​ ಟೌನ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಕ 55 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.

IND vs SA: ಸಿರಾಜ್ ದಾಳಿಗೆ ತತ್ತರಿಸಿದ ಆಫ್ರಿಕಾ; ಕೇವಲ 55 ರನ್​ಗಳಿಗೆ ಆಲೌಟ್​..!
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on:Jan 03, 2024 | 4:15 PM

Share

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ಕೇಪ್​ ಟೌನ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಕ 55 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಭಾರತದ ಬೌಲರ್​ಗಳ ದಾಳಿಗೆ ನಲುಗಿದ ಆಫ್ರಿಕಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡದ ಪರ ಇಬ್ಬರು ಆಟಗಾರರು ಎರಡಂಕಿ ಮೊತ್ತವನ್ನು ದಾಟಿದ್ದನ್ನು ಬಿಟ್ಟರೆ, ಮತ್ತ್ಯಾವ ಆಟಗಾರನಿಗೂ ಒಂದಂಕಿ ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ತಂಡದ ಪರ ಕೈಲ್ ವೆರ್ರೆನ್ನೆ ಅತ್ಯಧಿಕ 15 ರನ್ ಬಾರಿಸಿದರೆ, 12 ರನ್ ಕಲೆಹಾಕಿದ ಡೇವಿಡ್ ಬೆಡಿಂಗ್ಹ್ಯಾಮ್ ತಂಡದ ಪರ ಅಧಿಕ ರನ್ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡರು. ಇನ್ನು ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಸುನಾಮಿ ಎಬ್ಬಿಸಿದ ಮೊಹಮ್ಮದ್ ಸಿರಾಜ್ (Mohammed Siraj) 6 ವಿಕೆಟ್​ ಪಡೆದು ಐತಿಹಾಸಿಕ ಸಾಧನೆ ಮಾಡಿದರೆ, ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದರು.

ಟೀಂ ಇಂಡಿಯಾದ ದಾಖಲೆ

ಮೊದಲ ಬಾರಿಗೆ ಟೀಂ ಇಂಡಿಯಾ ಯಾವುದೇ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಔಟ್ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ 2021ರಲ್ಲಿ ವಾಂಖೆಡೆಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 61 ರನ್‌ಗಳಿಗೆ ಆಲೌಟ್ ಮಾಡಿತ್ತು. ಆದರೆ ಇದೀಗ ಈ ಅನಗತ್ಯ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿ ದಾಖಲಾಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗೆ ಕೇಪ್ ಟೌನ್‌ನಲ್ಲಿ ಊಟದವರೆಗೂ ಇನ್ನಿಂಗ್ಸ್ ನಿಭಾಯಿಸಲು ಸಾಧ್ಯವಾಗಲಿಲ್ಲ. ಇಡೀ ತಂಡಕ್ಕೆ ಕೇವಲ 23.2 ಓವರ್‌ಗಳಿಗೆ ಮಾತ್ರ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಯಿತು.

ICC Test Rankings: ಟಾಪ್ 10 ರೊಳಗೆ ಕಿಂಗ್ ಕೊಹ್ಲಿ; 4 ಸ್ಥಾನ ಕುಸಿದ ರೋಹಿತ್..! ಪಂತ್​ಗೆ ಯಾವ ಸ್ಥಾನ ಗೊತ್ತಾ?

ಸಿರಾಜ್ ಮಾರಕ ದಾಳಿ

ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಸ್ವಿಂಗ್ ಮತ್ತು ವೇಗದ ದಾಳಿಯ ಆಧಾರದ ಮೇಲೆ ಇಡೀ ದಕ್ಷಿಣ ಆಫ್ರಿಕಾ ತಂಡವನ್ನು ಆರಂಭದಲ್ಲೇ ಆಘಾತಕ್ಕೀಡುಮಾಡಿದರು. ಈ ಬಲಗೈ ವೇಗಿ ಏಕಾಂಗಿಯಾಗಿ ಅಗ್ರ 6 ಬ್ಯಾಟ್ಸ್‌ಮನ್‌ಗಳಲ್ಲಿ ಐದು ಮಂದಿಯನ್ನು ಬೇಟೆಯಾಡಿದರು. ಅಲ್ಲೆ ಸಿರಾಜ್ ಕೇವಲ 9 ರನ್‌ ನೀಡಿ ಐದು ವಿಕೆಟ್‌ ಪಡೆದ ಸಾಧನೆಯನ್ನು ಪೂರ್ಣಗೊಳಿಸಿದರು. ಇದರ ನಂತರ, ಅವರು ಕೈಲ್ ವೆರ್ರೆನ್ನೆ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದರು. ಸಿರಾಜ್ ಕೇವಲ 15 ರನ್ ನೀಡಿ 6 ವಿಕೆಟ್ ಪಡೆದರು. ಸಿರಾಜ್ ಹೊರತುಪಡಿಸಿ, ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದರು.

ಆಫ್ರಿಕಾದ ಬ್ಯಾಟಿಂಗ್ ಹೀಗಿತ್ತು

ದಕ್ಷಿಣ ಆಫ್ರಿಕಾ ತಂಡದ ಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ ಅದರ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ವಿಕೆಟ್ ಕೀಪರ್ ಕೈಲ್ ವಿರೇನ್ 15 ರನ್​ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಬೆಡಿಂಗ್ಹ್ಯಾಮ್ 12 ರನ್ಗಳ ಕೊಡುಗೆ ನೀಡಿದರು. ಇವರಲ್ಲದೆ ಮಾರ್ಕ್ರಾಮ್ 2 ರನ್, ನಾಯಕ ಎಲ್ಗರ್ 4, ಜಾರ್ಜಿ 2, ಸ್ಟಂಬ್ಸ್ 2 ರನ್ ಗಳಿಸಿ ಔಟಾದರು. ಆಲ್​ರೌಂಡರ್​ ಯಾನ್ಸನ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮಹಾರಾಜ್ 3 ರನ್ ಕೊಡುಗೆ ನೀಡಿದರೆ, ರಬಾಡ 5 ರನ್ ಮತ್ತು ಬರ್ಗರ್ 4 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Wed, 3 January 24