ಸ್ಯಾಮ್ಸನ್​ನ ಕೆಣಕಿದ ಯಾನ್ಸೆನ್​ಗೆ ಚಳಿ ಬಿಡಿಸಿದ ಸೂರ್ಯಕುಮಾರ್ ಯಾದವ್

ಸ್ಯಾಮ್ಸನ್​ನ ಕೆಣಕಿದ ಯಾನ್ಸೆನ್​ಗೆ ಚಳಿ ಬಿಡಿಸಿದ ಸೂರ್ಯಕುಮಾರ್ ಯಾದವ್
|

Updated on:Nov 09, 2024 | 12:17 PM

South Africa vs India: ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 17.5 ಓವರ್​ಗಳಲ್ಲಿ 141 ರನ್​ಗಳಿಸಿ ಆಲೌಟ್ ಆಗಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಡರ್ಬನ್​ನ ಕಿಂಗ್ಸ್​ಮೇಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 87 ರನ್​ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಮಾರ್ಕೊ ಯಾನ್ಸೆನ್ ವಿನಾಕಾರಣ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಜೊತೆ ಜಗಳಕ್ಕಿಳಿದ್ದಾರೆ.

ಸೌತ್ ಆಫ್ರಿಕಾ ಇನಿಂಗ್ಸ್​ನ 15ನೇ ಓವರ್​ನಲ್ಲಿ ಫೀಲ್ಡರ್ ಎಸೆದ ಚೆಂಡನ್ನು ಹಿಡಿಯಲು ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಪಿಚ್ ಬಳಿ ಬಂದಿದ್ದಾರೆ. ಇದೇ ವೇಳೆ ಅಡ್ಡಿಪಡಿಸಿದ ಮಾರ್ಕೊ ಯಾನ್ಸೆನ್, ಸ್ಯಾಮ್ಸನ್ ಜೊತೆ ತಗಾದೆ ತೆಗೆದಿದ್ದಾರೆ. ಇದನ್ನು ಗಮನಿಸಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನೇರವಾಗಿ ಯಾನ್ಸೆನ್ ಬಳಿ ಬಂದು ವಾಗ್ವಾದಕ್ಕಿಳಿದರು.

ಸೂರ್ಯಕುಮಾರ್ ಯಾದವ್ ಅವರ ಎಂಟ್ರಿಯಿಂದಾಗಿ ಮಾರ್ಕೊ ಯಾನ್ಸೆಲ್ ಗಲಿಬಿಲಿಗೊಂಡರು. ಅತ್ತ ಕೋಪ ನೆತ್ತಿಗೇರಿಸಿಕೊಂಡಿದ್ದ ಸೂರ್ಯ ಖಡಕ್ ಸೂಚನೆಗಳೊಂದಿಗೆ ಯಾನ್ಸೆನ್​ಗೆ ಚಳಿ ಬಿಡಿಸಿದ್ದಾರೆ. ಅಷ್ಟರಲ್ಲಿ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 17.5 ಓವರ್​ಗಳಲ್ಲಿ 141 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 61 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On - 12:17 pm, Sat, 9 November 24

Follow us
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮನೆ ಮಂದಿ ಮೇಲೆ ಬೆಂಕಿ ಉಂಡೆ ಉಗುಳಿದ ಗೋಲ್ಡ್ ಸುರೇಶ್, ಸಿಟ್ಟಿಗೆ ಕಾರಣವೇನು?
ಮನೆ ಮಂದಿ ಮೇಲೆ ಬೆಂಕಿ ಉಂಡೆ ಉಗುಳಿದ ಗೋಲ್ಡ್ ಸುರೇಶ್, ಸಿಟ್ಟಿಗೆ ಕಾರಣವೇನು?
ಅಂಬೇಡ್ಕರ್ ಯಾವತ್ತೂ ಇಸ್ಲಾಂಗೆ ಮತಾಂತರಗೊಳ್ಳುವುದು ಬಯಸಿರಲಿಲ್ಲ: ರವಿ
ಅಂಬೇಡ್ಕರ್ ಯಾವತ್ತೂ ಇಸ್ಲಾಂಗೆ ಮತಾಂತರಗೊಳ್ಳುವುದು ಬಯಸಿರಲಿಲ್ಲ: ರವಿ
ಹೆಚ್​​ಡಿ ಕುಮಾರಸ್ವಾಮಿಗೆ ಕರಿಯ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಜಮೀರ್​​​
ಹೆಚ್​​ಡಿ ಕುಮಾರಸ್ವಾಮಿಗೆ ಕರಿಯ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಜಮೀರ್​​​
ಹೆದ್ದಾರಿ ಕಾಮಗಾರಿ ವಿಳಂಬ, ಸಚಿವ ಸೋಮಣ್ಣರಿಂದ ಅಧಿಕಾರಿಗಳ ತರಾಟೆ
ಹೆದ್ದಾರಿ ಕಾಮಗಾರಿ ವಿಳಂಬ, ಸಚಿವ ಸೋಮಣ್ಣರಿಂದ ಅಧಿಕಾರಿಗಳ ತರಾಟೆ