India vs Sri Lanka 3rd ODI: ಭಾರತ-ಶ್ರೀಲಂಕಾ ಮೂರನೇ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
India vs Sri Lanka 3rd ODI: ಜುಲೈ 23 ರ ಶುಕ್ರವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲಿದೆ.

ಜುಲೈ 23 ರ ಶುಕ್ರವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲಿದೆ. ಜುಲೈ 20 ರ ಮಂಗಳವಾರ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 2-0 ಅಂತರದಲ್ಲಿ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ ಎಂಟನೇ ವಿಕೆಟ್‌ಗೆ 84 ರನ್ ಸೇರಿಸಿ ಭಾರತಕ್ಕೆ ಅದ್ಭುತ ಜಯ ತಂದುಕೊಟ್ಟರು.ಎರಡನೇ ಪಂದ್ಯದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಶ್ರೀಲಂಕಾ ತಂಡಕ್ಕೆ ಇದು ಆಘಾತ ನೀಡಿತ್ತು. 3 ನೇ ಏಕದಿನ ಪಂದ್ಯಕ್ಕೂ ಮುಂಚಿತವಾಗಿ ಎರಡೂ ತಂಡಗಳಲ್ಲಿ ಕೆಲವು ಚೊಚ್ಚಲ ಆಟಗಾರರು ಮೈದಾನಕ್ಕಿಳಿಯುವುದನ್ನು ನಾವು ನೋಡಬಹುದು.
ಶ್ರೀಲಂಕಾ- ಭಾರತ ಮೂರನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ? ಶ್ರೀಲಂಕಾ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯವನ್ನು 2021 ಜುಲೈ 22 ರಂದು ಮಂಗಳವಾರ ಆಡಲಾಗುವುದು.
ಮೂರನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ? ಶ್ರೀಲಂಕಾ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? ಶ್ರೀಲಂಕಾ ವರ್ಸಸ್ ಇಂಡಿಯಾ ಮೂರನೇ ಏಕದಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ.
ಆಟವನ್ನು ಹೇಗೆ ವೀಕ್ಷಿಸಬಹುದು? ಸೋನಿ ಸಿಕ್ಸ್ / ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3 / ಸೋನಿ ಟೆನ್ 3 ಎಚ್ಡಿ ಯಲ್ಲಿ ಶ್ರೀಲಂಕಾ ವರ್ಸಸ್ ಇಂಡಿಯಾ ಎರಡನೇ ಏಕದಿನ ಪಂದ್ಯವನ್ನು ನೀವು ವೀಕ್ಷಿಸಬಹುದು, ಸೋನಿ ಎಲ್ಐವಿ ಯಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ತಂಡಗಳು: ಶ್ರೀಲಂಕಾ: ದಾಸುನ್ ಶಾನಕಾ (ಕ್ಯಾಪ್ಟನ್), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ಚಮೇಮರಾಮಾನಾ ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಅಸಿಥಾ ಫರ್ನಾಂಡೊ, ಕಸುನ್ ರಾಜಿತಾ, ಲಹೀರು ಕುಮಾರ, ಇಸುರು ಉದಾನ.
ಭಾರತ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗೈಕ್ವಾಡ್, ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್-ಕೀಪರ್),ಕೆ ಗೌತಮ್, ಕ್ರುನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ಕುಲದೀಪ್ ಯಾದವ್, ನವದೀಪ್ ಸೈನಿ, ಚೇತನ್ ಸಕರಿಯಾ
ಇದನ್ನೂ ಓದಿ: IND vs ENG: ಇಂಗ್ಲೆಂಡ್ನಲ್ಲಿ ಮುಂದುವರೆದ ಕೊಹ್ಲಿ ಪಡೆಯ ಇಂಜುರಿ ಸಮಸ್ಯೆ; ಸರಣಿಯಿಂದ ಈ ಯುವ ಬೌಲರ್ ಔಟ್!
ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್
Published On - 9:09 am, Fri, 23 July 21
