IND vs SL: ಭಾರತ- ಶ್ರೀಲಂಕಾ ಸರಣಿಯ ನೂತನ ವೇಳಾಪಟ್ಟಿ ಪ್ರಕಟ; ಪಂದ್ಯ ಆರಂಭವಾಗುವ ಸಮಯವೂ ಬದಲಾಗಿದೆ
IND vs SL: ದ್ವಿಪಕ್ಷೀಯ ಸರಣಿಯ ಏಕದಿನ ಪಂದ್ಯಗಳು ಮಧ್ಯಾಹ್ನ 2: 30 ಕ್ಕೆ ಬದಲಾಗಿ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗುತ್ತವೆ. ಟಿ 20 ಐ ಪಂದ್ಯಗಳು ರಾತ್ರಿ 8:00 ಗಂಟೆಗೆ ಆರಂಭವಾಗಲಿವೆ.
ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಉಭಯ ತಂಡಗಳ ನಡುವೆ ನಡೆಯಲಿರುವ ಟಿ 20 ಅಂತರರಾಷ್ಟ್ರೀಯ ಮತ್ತು ಏಕದಿನ ಪಂದ್ಯಗಳು (ಒಡಿಐ) ನಡೆಯುವ ಬದಲಿ ಸಮಯವನ್ನು ಹಂಚಿಕೊಂಡಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಶಿಬಿರದಲ್ಲಿ ಕೋವಿಡ್-19 ಸೋಂಕು ಏಕಾಏಕಿ ಕಂಡುಬಂದ ನಂತರ ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಮುಂದೂಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ದೃಢಪಡಿಸಿತ್ತು.
ಸೋಮವಾರ, ಶ್ರೀಲಂಕಾ ಕ್ರಿಕೆಟ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ, ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಮತ್ತು ಆತಿಥೇಯ ಶ್ರೀಲಂಕಾ ನಡುವೆ ನಡೆಯಲಿರುವ ಪಂದ್ಯಗಳ ಸಮಯದ ಬದಲಾವಣೆಯನ್ನು ಬಹಿರಂಗಪಡಿಸಿದೆ. ಪೋಸ್ಟ್ ಪ್ರಕಾರ, ದ್ವಿಪಕ್ಷೀಯ ಸರಣಿಯ ಏಕದಿನ ಪಂದ್ಯಗಳು ಮಧ್ಯಾಹ್ನ 2: 30 ಕ್ಕೆ ಬದಲಾಗಿ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗುತ್ತವೆ. ಟಿ 20 ಐ ಪಂದ್ಯಗಳು ರಾತ್ರಿ 8:00 ಗಂಟೆಗೆ ಆರಂಭವಾಗಲಿವೆ.
ಟಿ 20 ಪಂದ್ಯಗಳು ಸಂಜೆ 7:00 ಗಂಟೆಗೆ ನಡೆಯಬೇಕಿತ್ತು ಈ ಮೊದಲು ಉಭಯ ರಾಷ್ಟ್ರಗಳ ನಡುವಿನ ಟಿ 20 ಪಂದ್ಯಗಳು ಸಂಜೆ 7:00 ಗಂಟೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕು ಪತ್ತೆಯಾದ ನಂತರ ಉಭಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯನ್ನು ಮುಂದೂಡಿದ ನಂತರ ಏಕದಿನ ಮತ್ತು ಟಿ 20 ಐ ಸರಣಿಯ ಬಗ್ಗೆ ಇತ್ತೀಚಿನ ಬೆಳವಣಿಗೆಗಳು ಈಗ ಹೊರ ಬಂದಿವೆ. ರಾಹುಲ್ ದ್ರಾವಿಡ್ ತರಬೇತುದಾರರಾಗಿ, ಧವನ್ ನೇತೃತ್ವದ ಎರಡನೇ ದರ್ಜೆ ತಂಡವು ಜುಲೈ 18 ರಿಂದ ಮೂರು ಟಿ 20 ಐ ಮತ್ತು ಆತಿಥೇಯ ಶ್ರೀಲಂಕಾದೊಂದಿಗೆ ಏಕದಿನ ಪಂದ್ಯಗಳನ್ನು ಆಡಲಿದೆ.
#SLvIND pic.twitter.com/LQSJT5tDmM
— Sri Lanka Cricket ?? (@OfficialSLC) July 12, 2021
ನಮ್ಮ ವೈದ್ಯಕೀಯ ತಂಡವು ಎಸ್‌ಎಲ್‌ಸಿಯ ವೈದ್ಯರ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಸರಣಿಯು ನಡೆಯಲು ಸಹಾಯ ಮಾಡುವ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದೆ. ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳು ಉತ್ಸಾಹಭರಿತ ಪ್ರದರ್ಶನವನ್ನು ನೀಡುತ್ತವೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಷಾ ಹೇಳಿದ್ದಾರೆ.
ಧವನ್ ನೇತೃತ್ವದ ಟೀಮ್ ಇಂಡಿಯಾ ಜುಲೈ 18 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ತಮ್ಮ ಶ್ರೀಲಂಕಾ ಪ್ರವಾಸವನ್ನು ಕಿಕ್‌ಸ್ಟಾರ್ಟ್ ಮಾಡಲಿದೆ. ನಂತರ ಜುಲೈ 25 ರಿಂದ ಜುಲೈ 29 ರವರೆಗೆ ಟಿ 20 ಐ ಸರಣಿಯನ್ನು ಆಡಲಿದೆ. ಏಕದಿನ ಮತ್ತು ಟಿ 20 ಐ ಸರಣಿಯ ಎಲ್ಲಾ ಪಂದ್ಯಗಳು ಪ್ರಸಿದ್ಧ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ:IND vs SL: ಭಾರತ- ಶ್ರೀಲಂಕಾ ಸರಣಿಗೂ ಮುನ್ನ ಲಂಕಾ ಕ್ರಿಕೆಟಿಗರಿಗೆ ಕೋವಿಡ್ ಟೆಸ್ಟ್; ಫಲಿತಾಂಶ ಹೀಗಿದೆ
Published On - 6:46 pm, Mon, 12 July 21