AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಪಾಕ್ ತಂಡವನ್ನು 87 ರನ್​ಗೆ ಆಲೌಟ್ ಮಾಡಿದ್ದ ಟೀಮ್ ಇಂಡಿಯಾ..!

India vs Pakistan: ದುಬೈನ ಇಂಟರ್​​ನ್ಯಾಷನಲ್​ ಮೈದಾನದಲ್ಲಿ ನಡೆಯಲಿರುವ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಇದಕ್ಕಿಂತಲೂ ಸ್ಮರಣೀಯ ಗೆಲುವು ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.

IND vs PAK: ಪಾಕ್ ತಂಡವನ್ನು 87 ರನ್​ಗೆ ಆಲೌಟ್ ಮಾಡಿದ್ದ ಟೀಮ್ ಇಂಡಿಯಾ..!
Team India
TV9 Web
| Edited By: |

Updated on: Aug 28, 2022 | 5:55 PM

Share

India vs Pakistan: ಪಾಕಿಸ್ತಾನ್ ವಿರುದ್ದ ಭಾರತಕ್ಕೆ ಹೀನಾಯ ಸೋಲು ಎನ್ನುವಾಗ ಕಣ್ಮುಂದೆ ಬರುವ ಚಿತ್ರಣ 2021 ರ ಟಿ20 ವಿಶ್ವಕಪ್​ನಲ್ಲಿನ 10 ವಿಕೆಟ್​ಗಳ ಪರಾಜಯ. ಆದರೆ ಇದಕ್ಕೂ ಮುನ್ನವೇ ಅಂದರೆ 1985 ರಲ್ಲಿ ಪಾಕಿಸ್ತಾನ್ ತಂಡವನ್ನು ಟೀಮ್ ಇಂಡಿಯಾ ಕೇವಲ 87 ರನ್​ಗಳಿಗೆ ಆಲೌಟ್ ಮಾಡಿತ್ತು ಎಂಬುದು ಅನೇಕರಿಗೆ ಗೊತ್ತಿಲ್ಲ. 1985 ರಲ್ಲಿ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಯುಎಇನಲ್ಲಿ ಚತುಷ್ಕೋನ ಏಕದಿನ ಸರಣಿ ಆಯೋಜಿಸಲಾಗಿತ್ತು. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಪಾಕ್ ತಂಡದ ನಾಯಕ ಜಾವೇದ್ ಮಿಯಾಂದಾದ್ ಬೌಲಿಂಗ್ ಆಯ್ದುಕೊಂಡರು.

ನಾಯಕ ನಿರೀಕ್ಷೆಯನ್ನು ಹುಸಿಗೊಳಿಸಿದಂತೆ ಮಾರಕ ದಾಳಿ ಸಂಘಟಿಸಿದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದ ವೇಗದ ಬೌಲರ್‌ಗಳು ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಆಘಾತ ನೀಡಿದರು. ಪರಿಣಾಮ ಟೀಮ್ ಇಂಡಿಯಾ 34 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ರವಿಶಾಸ್ತ್ರಿ 0, ಕ್ರಿಸ್ ಶ್ರೀಕಾಂತ್ 6, ದಿಲೀಪ್ ವೆಂಗ್ ಸರ್ಕಾರ್ 1, ಸುನಿಲ್ ಗವಾಸ್ಕರ್ 2 ಮತ್ತು ಮೊಹಿಂದರ್ ಅಮರನಾಥ್ 5 ರನ್ ಗಳಿಸಿ ಔಟಾಗಿದ್ದರು. ವಿಶೇಷ ಎಂದರೆ ಮೊದಲ ಐದು ವಿಕೆಟ್​ಗಳನ್ನು ಇಮ್ರಾನ್ ಖಾನ್ ಒಬ್ಬರೇ ಉರುಳಿಸಿದ್ದರು.

ಈ ಹಂತದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಮೊಹಮ್ಮದ್ ಅಜರುದ್ದೀನ್ ಪಾಕ್ ಬೌಲರ್​ಗಳನ್ನು ನಿರಾಯಾಸವಾಗಿ ಎದುರಿಸಿದರು. ಪರಿಣಾಮ ಅಜರ್ ಬ್ಯಾಟ್​​ನಿಂದ 47 ಮತ್ತು ನಾಯಕ ಕಪಿಲ್ ದೇವ್ 30 ರನ್ ಮೂಡಿಬಂತು. ಆದರೆ ಇವರಿಬ್ಬರ ವಿಕೆಟ್ ಪತನದೊಂದಿಗೆ ಟೀಮ್ ಇಂಡಿಯಾ 42.4 ಓವರ್‌ಗಳಲ್ಲಿ 125 ರನ್​ಗಳಿಗೆ ಆಲೌಟ್ ಆಯಿತು. ಅಂದು 10 ಓವರ್ ಗಳಲ್ಲಿ 14 ರನ್ ನೀಡಿ 6 ವಿಕೆಟ್ ಪಡೆದು ಇಮ್ರಾನ್ ಖಾನ್ ಮಿಂಚಿದ್ದರು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಕೇವಲ 126 ರನ್​ಗಳ ಸುಲಭ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವೇ ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸುಲಭವಾಗಿ ಸೋಲೊಪ್ಪಿಕೊಳ್ಳುವಂತಹ ಮನಸ್ಥಿತಿ ನಾಯಕ ಕಪಿಲ್ ದೇವ್ ಅವರದ್ದಾಗಿತ್ತು. ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ವಿಶೇಷ ಪ್ಲ್ಯಾನ್​ಗಳನ್ನು ರೂಪಿಸಿದರು.

ಅದರಂತೆ ಆರಂಭಿಕ ಆಟಗಾರ ಮೊಯೀನ್ ಅಲಿ ಕೇವಲ 10 ರನ್​ಗಳಿಸಿ ರನೌಟ್ ಆದರು. ಇದರ ಬೆನ್ನಲ್ಲೇ 18 ರನ್​ಗಳಿಸಿದ್ದ ಮುದಸ್ಸರ್ ನಜರ್ ರೋಜರ್ ಬಿನ್ನಿ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್​ಗಳು 6 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಬಳಿಸಿದರು. ಜಾವೇದ್ ಮಿಯಾಂದಾದ್, ಇಮ್ರಾನ್ ಖಾನ್ ಮತ್ತು ಅಶ್ರಫ್ ಅಲಿ ಮೂವರು ಶೂನ್ಯಕ್ಕೆ ಔಟಾಗಿದ್ದರು. ಪರಿಣಾಮ 41 ರನ್​ ಆಗುವಷ್ಟರಲ್ಲಿ ಪಾಕಿಸ್ತಾನ್ 5 ಪ್ರಮುಖ ವಿಕೆಟ್ ಕಳೆದುಕೊಂಡಿತು

ಇದಾದ ಬಳಿಕ ಸಲೀಂ ಮಲಿಕ್ (17) ಹಾಗೂ ರಮೀಜ್ ರಾಜಾ (29) ತಂಡಕ್ಕೆ ಆಸರೆಯಾದರು. ಆದರೆ ಈ ವೇಳೆ ದಾಳಿಗಿಳಿದ ರವಿ ಶಾಸ್ತ್ರಿ ಮಲಿಕ್ ಹಾಗೂ ಮಿಯಾಂದಾದ್ ವಿಕೆಟ್ ಕಬಳಿಸಿ ಬ್ಯಾಟ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ನಂತರ ಬಂದ ಇಲಾಯಿ 9 ರನ್​ಗಳಿಸಿದರೆ, ತಾಹಿರ್ (1), ತೌಸೀಫ್ ಅಹ್ಮದ್ (0) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ಇಲಾಯಿಯನ್ನು ಮದನ್ ಲಾಲ್ ಔಟ್ ಮಾಡುವ ಮೂಲಕ ಪಾಕಿಸ್ತಾನ್ ತಂಡವನ್ನು 32.5 ಓವರ್​ಗಳಲ್ಲಿ ಕೇವಲ 87 ರನ್​ಗಳಿಗೆ ಆಲೌಟ್ ಮಾಡಿತು. ಈ ಮೂಲಕ 38 ರನ್​ಗಳ ಭರ್ಜರಿ ಜಯ ಸಾಧಿಸಿತು.

ಭಾರತದ ಈ ಗೆಲುವಿನಲ್ಲಿ ವೇಗದ ಬೌಲರ್‌ಗಳ ಹೊರತಾಗಿ ಸ್ಪಿನ್ನರ್‌ಗಳು ಕೂಡ ಮಹತ್ವದ ಕೊಡುಗೆ ನೀಡಿದರು. ಕಪಿಲ್ ದೇವ್ 3 ವಿಕೆಟ್ ಪಡೆದು ಮಿಂಚಿದರೆ, ಮತ್ತೊಂದೆಡೆ ಸ್ಪಿನ್ನರ್‌ಗಳಾದ ರವಿ ಶಾಸ್ತ್ರಿ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್ ತಲಾ 2 ವಿಕೆಟ್ ಕಬಳಿಸಿದರು. ಇದು ಯುಎಇ ನೆಲದಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಸ್ಮರಣೀಯ ಗೆಲುವುದಾಗಿದೆ.

ಇಂದು ದುಬೈನ ಇಂಟರ್​​ನ್ಯಾಷನಲ್​ ಮೈದಾನದಲ್ಲಿ ನಡೆಯಲಿರುವ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಇದಕ್ಕಿಂತಲೂ ಸ್ಮರಣೀಯ ಜಯ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.