ಭಾರತ ‘ಎ’ ತಂಡ ಪ್ರಕಟ: ಕನ್ನಡಿಗರಿಗೆ ಇಲ್ಲ ಸ್ಥಾನ

Emerging Teams Asia Cup 2024: ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯು ಅಕ್ಟೋಬರ್ 18 ರಿಂದ ಶುರುವಾಗಲಿದೆ. 8 ತಂಡಗಳ ನಡುವಣ ಈ ಕದನದಲ್ಲಿ ಟೀಮ್ ಅಕ್ಟೋಬರ್ 19 ರಂದು ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.

ಭಾರತ ‘ಎ’ ತಂಡ ಪ್ರಕಟ: ಕನ್ನಡಿಗರಿಗೆ ಇಲ್ಲ ಸ್ಥಾನ
India ‘A’ Squad
Follow us
|

Updated on: Oct 13, 2024 | 12:42 PM

ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ20 ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ತಿಲಕ್ ವರ್ಮಾ ಮುನ್ನಡೆಸಲಿದ್ದಾರೆ. ಆದರೆ ಈ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರನಿಗೆ ಸ್ಥಾನ ಲಭಿಸಿಲ್ಲ ಎಂಬುದೇ ಅಚ್ಚರಿ. ಇನ್ನು ಈ ತಂಡದಲ್ಲಿ ಸ್ಟಾರ್ ಆಟಗಾರರಾಗಿ ಅಭಿಷೇಕ್ ಶರ್ಮಾ, ರಾಹುಲ್ ಚಹರ್, ಅನೂಜ್ ರಾವತ್, ಆಯುಷ್ ಬದೋನಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಎಮರ್ಜಿಂಗ್ ಏಷ್ಯಾಕಪ್​ಗೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಅಭಿಷೇಕ್ ಶರ್ಮಾ, ರಮಣ್​ದೀಪ್ ಸಿಂಗ್, ಆಯುಷ್ ಬದೋನಿ, ನಿಶಾಂತ್ ಸಿಂಧು, ಅನೂಜ್ ರಾವತ್, ಪ್ರಭ್ ಸಿಮ್ರಾನ್ ಸಿಂಗ್, ನೆಹಾಲ್ ವಧೇರಾ, ಅನ್ಶುಲ್ ಕಾಂಬೋಜ್, ಹೃತಿಕ್ ಶೋಕೀನ್, ಆಕಿಬ್ ಖಾನ್, ವೈಭವ್ ಅರೋರಾ, ರಾಸಿಖ್ ಸಲಾಂ, ಸಾಯಿ ಕಿಶೋರ್, ರಾಹುಲ್ ಚಹರ್.

ಎಮರ್ಜಿಂಗ್​ ಏಷ್ಯಾ ಕಪ್ 2024ರ ತಂಡಗಳು:

  • ಗ್ರೂಪ್- A
  • ಶ್ರೀಲಂಕಾ ಎ
  • ಬಾಂಗ್ಲಾದೇಶ್ ಎ
  • ಅಫ್ಘಾನಿಸ್ತಾನ್ ಎ
  • ಹಾಂಗ್ ಕಾಂಗ್ ಎ

ಇದನ್ನೂ ಓದಿ: ಬೌಂಡರಿಗಳೊಂದಿಗೆ ಹೊಸ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ ಭಾರತ

  • ಗ್ರೂಪ್-B
  • ಭಾರತ ಎ
  • ಪಾಕಿಸ್ತಾನ್ ಎ
  • ಯುಎಇ ಎ
  • ಒಮಾನ್ ಎ

ಭಾರತ vs ಪಾಕಿಸ್ತಾನ್ ಮುಖಾಮುಖಿ:

ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯ ಗ್ರೂಪ್ ಬಿ ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಾಣಿಸಿಕೊಂಡಿವೆ. ಹೀಗಾಗಿ ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಅದರಂತೆ ಅಕ್ಟೋಬರ್ 19 ರಂದು ನಡೆಯಲಿರುವ 4ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಎದುರು ಬದುರಾಗಲಿದೆ.

ಎಮರ್ಜಿಂಗ್​ ಏಷ್ಯಾ ಕಪ್ 2024ರ ಸಂಪೂರ್ಣ ವೇಳಾಪಟ್ಟಿ:

  1. ಅಕ್ಟೋಬರ್ 18: ಬಾಂಗ್ಲಾದೇಶ್ ಎ vs ಹಾಂಗ್ ಕಾಂಗ್ ಎ
  2. ಅಕ್ಟೋಬರ್ 18: ಶ್ರೀಲಂಕಾ ಎ vs ಅಫ್ಘಾನಿಸ್ತಾನ ಎ
  3. ಅಕ್ಟೋಬರ್ 19: ಒಮಾನ್ vs ಯುಎಇ ಎ
  4. ಅಕ್ಟೋಬರ್ 19: ಭಾರತ ಎ vs ಪಾಕಿಸ್ತಾನ್ ಎ
  5. ಅಕ್ಟೋಬರ್ 20: ಶ್ರೀಲಂಕಾ ಎ vs ಹಾಂಗ್ ಕಾಂಗ್ ಎ
  6. ಅಕ್ಟೋಬರ್ 20: ಬಾಂಗ್ಲಾದೇಶ್ ಎ vs ಅಫ್ಘಾನಿಸ್ತಾನ್ ಎ
  7. ಅಕ್ಟೋಬರ್ 21: ಒಮಾನ್ vs ಪಾಕಿಸ್ತಾನ ಎ
  8. ಅಕ್ಟೋಬರ್ 21: ಭಾರತ ಎ vs ಯುಎಇ ಎ
  9. ಅಕ್ಟೋಬರ್ 22: ಅಫ್ಘಾನಿಸ್ತಾನ್ ಎ vs ಹಾಂಗ್ ಕಾಂಗ್ ಎ
  10. ಅಕ್ಟೋಬರ್ 22: ಶ್ರೀಲಂಕಾ ಎ vs ಬಾಂಗ್ಲಾದೇಶ್ ಎ
  11. ಅಕ್ಟೋಬರ್ 23: ಪಾಕಿಸ್ತಾನ್ ಎ vs ಯುಎಇ ಎ
  12. ಅಕ್ಟೋಬರ್ 23: ಒಮಾನ್ vs ಭಾರತ ಎ
  13. ಅಕ್ಟೋಬರ್ 25: ಸೆಮಿಫೈನಲ್ 1
  14. ಅಕ್ಟೋಬರ್ 25: ಸೆಮಿಫೈನಲ್ 2
  15. ಅಕ್ಟೋಬರ್ 27: ಫೈನಲ್
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
"ಇಟ್ಟ ರಾಮನ ಬಾಣ ಹುಸಿಯಿಲ್ಲ" ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 14 ರಿಂದ 20 ರವರೆಗೆ ವಾರ ಭವಿಷ್ಯ ಹೀಗಿದೆ
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು