ತ್ರಿಕೋನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಬದಲಾವಣೆ

India A Squad Update: ಐಪಿಎಲ್ ಬಳಿಕ ನಡೆಯುವ ಏಕದಿನ ತ್ರಿಕೋನ ಸರಣಿಗೆ ಭಾರತ ಎ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಹರ್ಷ್ ದುಬೆ ಅವರನ್ನು ಭಾರತ ಮುಖ್ಯ ತಂಡಕ್ಕೆ ಆಯ್ಕೆ ಮಾಡಿದ ಕಾರಣ, ಅವರನ್ನು ಎ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ. ಅನುಕುಲ್ ರಾಯ್ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡಕ್ಕೆ ಬಲ ತುಂಬಲಿದ್ದಾರೆ.

ತ್ರಿಕೋನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಬದಲಾವಣೆ
India A

Updated on: May 21, 2026 | 5:15 PM

ಐಪಿಎಲ್ (IPL 2026) ಮುಗಿದ ಕೂಡಲೇ ಭಾರತ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ಏಕದಿನ ತ್ರಿಕೋನ ಸರಣಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ (BCCI),  ಭಾರತ ಎ ತಂಡವನ್ನು ಸಹ ಪ್ರಕಟಿಸಿತ್ತು. ಆದರೀಗ ಸರಣಿ ಆರಂಭಕ್ಕೂ ಮುನ್ನವೇ ಬಿಸಿಸಿಐ, ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿದೆ. ವಾಸ್ತವವಾಗಿ ಜೂನ್ 9 ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಗೆ ಭಾರತ ಎ ತಂಡದಲ್ಲಿ ಹರ್ಷ್ ದುಬೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೀಗ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಅವರ ಸ್ಥಾನದಲ್ಲಿ 27 ವರ್ಷದ ಆಲ್‌ರೌಂಡರ್ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ. ದುಬೆ ಅವರನ್ನು ಭಾರತ ಎ ತಂಡದಿಂದ ಕೈಬಿಡಲು ಕಾರಣವೂ ಇದ್ದು, ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರನ್ನು ಭಾರತ ಎ ತಂಡದಿಂದ ಕೈಬಿಡಲಾಗಿದೆ.

ಭಾರತ ತಂಡಕ್ಕೆ ಹರ್ಷ್ ದುಬೆ ಎಂಟ್ರಿ

ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆ ಮಂಡಳಿ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಹರ್ಷ್ ದುಬೆ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಹರ್ಷ್ ದುಬೆ ಅವರನ್ನು ಭಾರತ ಎ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ.

ಅನುಕೂಲ್ ರಾಯ್ ಪ್ರದರ್ಶನ

ಹರ್ಷ್ ದುಬೆ ಅವರಂತೆಯೇ, 27 ವರ್ಷದ ಆಲ್‌ರೌಂಡರ್ ಅನುಕುಲ್ ರಾಯ್ ಕೂಡ ಪ್ರಸ್ತುತ ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಕೆಕೆಆರ್ ತಂಡದ ಭಾಗವಾಗಿರುವ ರಾಯ್ ಆಡಿರುವ 13 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಬ್ಯಾಟಿಂಗ್‌ನಲ್ಲಿ 43 ರನ್‌ಗಳನ್ನು ಸಹ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ, ರಾಯ್ 48 ಇನ್ನಿಂಗ್ಸ್‌ಗಳಲ್ಲಿ 32.79 ಸರಾಸರಿಯಲ್ಲಿ 1279 ರನ್‌ಗಳನ್ನು ಗಳಿಸಿದ್ದು, 59 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಏಕದಿನ ತ್ರಿಕೋನ ಸರಣಿ ವೇಳಾಪಟ್ಟಿ

  • ಜೂನ್ 9: ಭಾರತ ಎ vs ಶ್ರೀಲಂಕಾ ಎ
  • ಜೂನ್ 11: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 13: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 15: ಭಾರತ ಎ vs ಶ್ರೀಲಂಕಾ ಎ
  • ಜೂನ್ 17: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 19: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 21: ಫೈನಲ್ ಪಂದ್ಯ

ಏಕದಿನ ತ್ರಿಕೋನ ಸರಣಿಗೆ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅಂಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕೂಲ್ ರಾಯ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us