ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದ ರಿಷಭ್ ಪಂತ್
India A vs South Africa A: ಭಾರತ ಎ ಮತ್ತು ಸೌತ್ ಆಫ್ರಿಕಾ ಎ ತಂಡಗಳ ನಡುವೆ 4 ದಿನಗಳ 2 ಟೆಸ್ಟ್ ಪಂದ್ಯಗಳು ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಮ್ಯಾಚ್ ಶುರುವಾಗಿದ್ದು, ಎರಡನೇ ಪಂದ್ಯವು ನವೆಂಬರ್ 6 ರಂದು ಆರಂಭವಾಗಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ.

ಭಾರತ ಎ ಮತ್ತು ಸೌತ್ ಆಫ್ರಿಕಾ ಎ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುರುವಾಗಿದೆ. ಬೆಂಗಳೂರಿನ ಸೆಂಟ್ರಲ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಸೌತ್ ಆಫ್ರಿಕಾ ತಂಡ ಮೊದಲ ಇನಿಂಗ್ಸ್ ಆರಂಭಿಸಿದೆ.
ಈ ಪಂದ್ಯವು ರಿಷಭ್ ಪಂತ್ ಅವರ ಕಂಬ್ಯಾಕ್ ಮ್ಯಾಚ್ ಎಂಬುದು ವಿಶೇಷ. ಅಂದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ಪಂತ್ ಕಳೆದ ಕೆಲ ತಿಂಗಳುಗಳಿಂದ ಮೈದಾನಕ್ಕಿಳಿದಿರಲಿಲ್ಲ. ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕಿಳಿದಿದ್ದಾರೆ. ಹೀಗಾಗಿ ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.
ಟೀಮ್ ಇಂಡಿಯಾ ಆಡುವ ಬಳಗ:
ಈ ಪಂದ್ಯದಲ್ಲಿ ಭಾರತ ಎ ತಂಡದ ಪರ ಆರಂಭಿಕರಾಗಿ ಸಾಯಿ ಸುದರ್ಶನ್ ಹಾಗೂ ಆಯುಷ್ ಮ್ಹಾತ್ರೆ ಕಣಕ್ಕಿಳಿಯಲಿದ್ದಾರೆ. ಇನ್ನು ದೇವದತ್ ಪಡಿಕ್ಲಲ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ.
ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು, ಆಯುಷ್ ಬದೋನಿ 6ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಲ್ರೌಂಡರ್ ತನುಷ್ ಕೋಟ್ಯಾನ್ 7ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಹಾಗೆಯೇ ವೇಗಿಗಳಾಗಿ ತಂಡದಲ್ಲಿ ಅನ್ಶುಲ್ ಕಂಬೋಜ್, ಗುರ್ನೂರ್ ಬ್ರಾರ್ ಹಾಗೂ ಖಲೀಲ್ ಅಹ್ಮದ್ ಸ್ಥಾನ ಪಡೆದಿದ್ದು, ಇದರೊಂದಿಗೆ ಸ್ಪಿನ್ನರ್ ಆಗಿ ಮಾನವ್ ಸುತಾರ್ ಪ್ಲೇಯಿಂಗ್ ಇಲೆವೆನ್ನಲ್ಲಿದ್ದಾರೆ.
ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಆಯುಷ್ ಮ್ಹಾತ್ರೆ , ದೇವದತ್ ಪಡಿಕ್ಕಲ್ , ರಜತ್ ಪಾಟಿದಾರ್ ,ರಿಷಭ್ ಪಂತ್ (ನಾಯಕ) , ಆಯುಷ್ ಬದೋನಿ , ತನುಷ್ ಕೋಟ್ಯಾನ್ , ಅನ್ಶುಲ್ ಕಂಬೋಜ್ , ಮಾನವ್ ಸುತಾರ್ , ಗುರ್ನೂರ್ ಬ್ರಾರ್ ,ಖಲೀಲ್ ಅಹ್ಮದ್.
ಸೌತ್ ಆಫ್ರಿಕಾ ಎ ಪ್ಲೇಯಿಂಗ್ 11: ಜೋರ್ಡಾನ್ ಹರ್ಮನ್ , ಲೆಸೆಗೊ ಸೆನೋಕ್ವಾನೆ , ಮಾರ್ಕ್ವೆಸ್ ಅಕರ್ಮನ್ (ನಾಯಕ) , ಝುಬೈರ್ ಹಮ್ಝ , ರೂಬಿನ್ ಹರ್ಮನ್ , ರಿವಾಲ್ಡೊ ಮೂನ್ಸಾಮಿ (ವಿಕೆಟ್ ಕೀಪರ್) ,ಟಿಯಾನ್ ವ್ಯಾನ್ ವುರೆನ್ , ಪ್ರೆನೆಲನ್ ಸುಬ್ರಯೇನ್ , ತ್ಸೆಪೋ ಮೊರೆಕಿ , ಲುಥೋ ಸಿಪಾಮ್ಲಾ , ಒಕುಹ್ಲೆ ಸೆಲೆ.
ಭಾರತ ಎ ತಂಡ (ಮೊದಲ ಪಂದ್ಯಕ್ಕೆ): ರಿಷಭ್ ಪಂತ್ (ನಾಯಕ), ಆಯುಷ್ ಮ್ಹಾತ್ರೆ, ಎನ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಅನ್ಶುಲ್ ಕಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸರಾಂಶ್ ಜೈನ್.
ಇದನ್ನೂ ಓದಿ: ದಾಖಲೆಯ ಸರದಾರನನ್ನು ಕೂರಿಸಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಿದ ಗಂಭೀರ್..!
ಭಾರತ ಎ ತಂಡ (ಎರಡನೇ ಪಂದ್ಯಕ್ಕೆ): ರಿಷಭ್ ಪಂತ್ (ನಾಯಕ), ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್ (ಉಪನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ್, ಖಲೀಲ್ ಅಹ್ಮದ್, ಗುರ್ನೂರ್ ಬ್ರಾರ್, ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
