IND vs SA: ತಂಡವನ್ನು ಕಾಡುತ್ತಿರುವ ದೌರ್ಬಲ್ಯಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದ ರಾಹುಲ್
Team India's Spin Struggle: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಬೌಲಿಂಗ್ ಎದುರಿಸಲು ಪದೇಪದೇ ಎಡವುತ್ತಿದ್ದಾರೆ. ಈ ದೌರ್ಬಲ್ಯ ಕಳೆದ 3-4 ವರ್ಷಗಳಿಂದ ತಂಡವನ್ನು ಕಾಡುತ್ತಿದೆ. ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೂಡ ಈ ಸಮಸ್ಯೆಗೆ ತಮ್ಮ ಬಳಿ ಉತ್ತರವಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ, ಇದು ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ (Team India) ಹೀನಾಯ ಸೋಲು ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ. ಮಾಧ್ಯಮಗಳಿಂದ ಹಿಡಿದು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳವರೆಗೆ ಎಲ್ಲರೂ ಭಾರತೀಯ ತಂಡದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಒಂದು ದೊಡ್ಡ ಕಾರಣವೆಂದರೆ ಪ್ರತಿ ವರ್ಷ ಬೆಳೆಯುತ್ತಿರುವ ದೌರ್ಬಲ್ಯ, ಇದಕ್ಕೆ ಯಾವುದೇ ಪರಿಹಾರವಿಲ್ಲ. ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಭಾರತದ ಬ್ಯಾಟ್ಸ್‌ಮನ್‌ಗಳು ಪದೇಪದೇ ಎಡವುತ್ತಿದ್ದಾರೆ. ಅಲ್ಲದೆ ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ. ಇದೀಗ ಈ ದೌರ್ಬಲ್ಯವನ್ನು ಒಪ್ಪಿಕೊಂಡಿರುವ ಸ್ಟಾರ್ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ಕೂಡ ಇದಕ್ಕೆ ತಮ್ಮ ಬಳಿ ಉತ್ತರವಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಮೊದಲು ಕೋಲ್ಕತ್ತಾದಲ್ಲಿ ನಂತರ ಗುವಾಹಟಿ ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅವಮಾನಕರ ಸೋಲುಗಳನ್ನು ಅನುಭವಿಸಿತು. ಕೋಲ್ಕತ್ತಾದಲ್ಲಿ 124 ರನ್‌ಗಳ ಗುರಿ ಬೆನ್ನಟ್ಟಲು ವಿಫಲವಾಗಿ ಕೇವಲ ಎರಡೂವರೆ ದಿನಗಳಲ್ಲಿ ಸೋತಿತು. ಆ ಬಳಿಕ ಗುವಾಹಟಿಯಲ್ಲಿ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಸೋಲನ್ನು ಅನುಭವಿಸಿತು, ದಕ್ಷಿಣ ಆಫ್ರಿಕಾ ಪಂದ್ಯವನ್ನು 408 ರನ್‌ಗಳಿಂದ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ಎರಡೂ ಪಂದ್ಯಗಳಲ್ಲಿ, ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ದಾಳಿಗೆ ತತ್ತರಿಸಿ ಹೋಗಿದ್ದರು.
ನನ್ನ ಬಳಿ ಉತ್ತರವಿಲ್ಲ ಎಂದ ರಾಹುಲ್
ಆದರೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಾತ್ರವಲ್ಲ, ಕಳೆದ 3-4 ವರ್ಷಗಳಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ನಲ್ಲಿಯೂ ಈ ದೌರ್ಬಲ್ಯ ಸ್ಪಷ್ಟವಾಗಿ ಕಂಡುಬಂದಿದೆ. ಕೆಎಲ್ ರಾಹುಲ್ ಸ್ವತಃ ಸ್ಪಿನ್ನರ್‌ಗಳ ಎದುರು ರನ್ ಗಳಿಸಲು ಕಷ್ಟಪಟ್ಟಿದ್ದಾರೆ. ಇದೀಗ ಅವರೇ ಅದಕ್ಕೆ ಉತ್ತರವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ರಾಂಚಿಯಲ್ಲಿ ಏಕದಿನ ಸರಣಿ ಪ್ರಾರಂಭವಾಗುವ ಒಂದು ದಿನ ಮೊದಲು, ಈ ದೌರ್ಬಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್, ‘ಕಳೆದ ಕೆಲವು ವರ್ಷಗಳಲ್ಲಿ ನಾವು ಸ್ಪಿನ್ ಅನ್ನು ಚೆನ್ನಾಗಿ ಆಡಲು ಸಾಧ್ಯವಾಗಲಿಲ್ಲ. ಸತ್ಯವೆಂದರೆ, ನಾವು ಈ ಹಿಂದೆ ಸ್ಪಿನ್ ದಾಳಿಯನ್ನು ಹೇಗೆ ಯಶಸ್ವಿಯಾಗಿ ಎದುರಿಸುತ್ತಿದ್ದೇವು ಮತ್ತು ಈಗ ನಾವು ಅದನ್ನು ಏಕೆ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿಲ್ಲ. ನನಗೆ ಉತ್ತರವೂ ತಿಳಿದಿಲ್ಲ. ನಾವು ವೈಯಕ್ತಿಕವಾಗಿ ಮತ್ತು ಬ್ಯಾಟಿಂಗ್ ಗುಂಪಾಗಿ ಅದನ್ನು ಸುಧಾರಿಸಲು ಮಾತ್ರ ಪ್ರಯತ್ನಿಸಬಹುದು’ ಎಂದಿದ್ದಾರೆ.
IND vs SA: ಮೊದಲ ಏಕದಿನದಲ್ಲಿ ಪಂತ್, ರುತುರಾಜ್ ಆಡ್ತಾರಾ? ನಾಯಕ ರಾಹುಲ್ ಹೇಳಿದ್ದಿದು
ಟೀಂ ಇಂಡಿಯಾ ಬಳಿಯೂ ಉತ್ತರವಿಲ್ಲ
ರಾಹುಲ್ ಮಾತ್ರವಲ್ಲ, ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್‌ಮನ್‌ಗಳು ಅಥವಾ ಕೋಚಿಂಗ್ ಸಿಬ್ಬಂದಿ ಬಳಿಯೂ ಈ ಸಮಸ್ಯೆಗೆ ಸದ್ಯಕ್ಕೆ ಉತ್ತರವಿಲ್ಲ ಎಂದು ತೋರುತ್ತದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಸ್ಪಿನ್ನರ್‌ಗಳ ವಿರುದ್ಧ ಅಸಹಾಯಕವಾಗಿ ಕಾಣಲು ಇದೇ ಕಾರಣ, ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡಿತು. ಆ ಅವಮಾನದ ನಂತರ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಭಾರತ ತಂಡವು ಮತ್ತೊಂದು ಸೋಲನ್ನು ಅನುಭವಿಸಿದೆ ಮತ್ತು ಕಾರಣ ಹಾಗೆಯೇ ಉಳಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
