AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup 2025: ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು? ಇಲ್ಲಿದೆ 4 ತಂಡಗಳ ಸೆಮೀಸ್ ಲೆಕ್ಕಾಚಾರ

Women's World Cup semi-final 2025: 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಉಳಿದ ಮೂರು ತಂಡಗಳು. ಭಾರತ ನಾಲ್ಕನೇ ಸ್ಥಾನದಲ್ಲಿರುವುದರಿಂದ, ಸೆಮಿಫೈನಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಸೆಮಿಫೈನಲ್ ವೇಳಾಪಟ್ಟಿ ಮತ್ತು ಭಾರತದ ಪಂದ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

World Cup 2025: ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು? ಇಲ್ಲಿದೆ 4 ತಂಡಗಳ ಸೆಮೀಸ್ ಲೆಕ್ಕಾಚಾರ
World Cup
ಪೃಥ್ವಿಶಂಕರ
|

Updated on:Oct 24, 2025 | 3:36 PM

Share

2025 ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ( Women’s ODI World Cup 2025) ಸೆಮಿಫೈನಲ್ ತಲುಪಿದ ನಾಲ್ಕನೇ ಮತ್ತು ಅಂತಿಮ ತಂಡ ಟೀಂ ಇಂಡಿಯಾ. ಅಕ್ಟೋಬರ್ 23 ರಂದು ನವಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 53 ರನ್‌ಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ (India women’s) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತವಲ್ಲದೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆದ ಇತರ ಮೂರು ತಂಡಗಳಾಗಿವೆ. ಕುತೂಹಲಕಾರಿಯಾಗಿ, ಟೀಂ ಇಂಡಿಯಾ ಸತತ ಮೂರು ಗುಂಪು ಹಂತದ ಪಂದ್ಯಗಳಲ್ಲಿ ಸೋತ ಅದೇ ಮೂರು ತಂಡಗಳು ಇವು. ಆದರೆ ಸೆಮಿಫೈನಲ್‌ನಲ್ಲಿ ಯಾವ ತಂಡವನ್ನು ಎದುರಿಸಲಿದೆ? ಎಂಬುದು ಈಗ ಪ್ರಶ್ನೆಯಾಗಿದೆ.

4ನೇ ಸ್ಥಾನದಲ್ಲಿ ಟೀಂ ಇಂಡಿಯಾ

ಪಾಯಿಂಟ್ ಟೇಬಲ್ ನೋಡುವುದಾದರೆ, ಆಡಿದ ಆರು ಪಂದ್ಯಗಳಿಂದ ಆಸ್ಟ್ರೇಲಿಯಾ 11 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಿಂದ 10 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಆರು ಪಂದ್ಯಗಳಿಂದ 9 ಅಂಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ಆರು ಪಂದ್ಯಗಳಿಂದ ಆರು ಅಂಕಗಳೊಂದಿಗೆ ಭಾರತವು ಅಗ್ರ ನಾಲ್ಕು ಅಥವಾ ಸೆಮಿಫೈನಲ್‌ಗೆ ಅರ್ಹತೆ ಪಡೆದ ಕೊನೆಯ ತಂಡವಾಗಿದೆ.

ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡರೂ, ಈ ಎಲ್ಲಾ ತಂಡಗಳು ಗುಂಪು ಹಂತದಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಬೇಕಾಗಿದೆ. ಅಂತಿಮ ಗುಂಪು ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖಿಯಾಗಲಿವೆ. ಇಂಗ್ಲೆಂಡ್, ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ, ಭಾರತ, ಬಾಂಗ್ಲಾದೇಶವನ್ನು ಎದುರಿಸಲಿದೆ. ಟೀಂ ಇಂಡಿಯಾ ತನ್ನ ಪಂದ್ಯವನ್ನು ಗೆದ್ದರೂ ಸಹ, ಅದರ ಸ್ಥಾನ ಬದಲಾಗುವುದಿಲ್ಲ. ಬಾಂಗ್ಲಾದೇಶದ ವಿರುದ್ಧ ಜಯಗಳಿಸಿದ ನಂತರವೂ 8 ಅಂಕಗಳನ್ನು ಹೊಂದಿದ್ದು 4 ನೇ ಸ್ಥಾನದಲ್ಲಿ ಉಳಿಯುತ್ತದೆ. ಆದಾಗ್ಯೂ, ಅಗ್ರ ಮೂರು ಸ್ಥಾನಗಳು ಬದಲಾಗಬಹುದು.

ನಂಬರ್ 1 ಸ್ಥಾನಕ್ಕೆ ಪೈಪೋಟಿ

ಆಸ್ಟ್ರೇಲಿಯಾ ತನ್ನ ಕೊನೆಯ ಗುಂಪು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದರೆ, ಅದು 13 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಉಳಿಯುತ್ತದೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಅದನ್ನು ಎರಡನೇ ಸ್ಥಾನಕ್ಕೆ ತಳ್ಳುತ್ತದೆ, ಏಕೆಂದರೆ ಒಂದು ಗೆಲುವು ದಕ್ಷಿಣ ಆಫ್ರಿಕಾಕ್ಕೆ 12 ಅಂಕಗಳನ್ನು ನೀಡುತ್ತದೆ. ಆದಾಗ್ಯೂ, ಇದು ಸಂಭವಿಸುವ ಸಾಧ್ಯತೆಯಿಲ್ಲ. ಏಕೆಂದರೆ ಇಲ್ಲಿಯವರೆಗೆ ಆಡಿದ 18 ಏಕದಿನ ಪಂದ್ಯಗಳಲ್ಲಿ, ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಒಮ್ಮೆ ಮಾತ್ರ ಸೋಲಿಸಿದೆ.

ಇನ್ನು ಇಂಗ್ಲೆಂಡ್​ ಎರಡನೇ ಸ್ಥಾನವನ್ನು ತಲುಪುವ ಅವಕಾಶವನ್ನೂ ಹೊಂದಿದೆ. ಮಹಿಳಾ ವಿಶ್ವಕಪ್‌ನ ತನ್ನ ಅಂತಿಮ ಗುಂಪು ಪಂದ್ಯದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ 11 ಅಂಕಗಳನ್ನು ಹೊಂದಲ್ಲಿದ್ದು, ಎರಡನೇ ಸ್ಥಾನಕ್ಕೆ ಏರುತ್ತದೆ. ಆದಾಗ್ಯೂ, ಅದು ಸಂಭವಿಸಬೇಕಾದರೆ, ದಕ್ಷಿಣ ಆಫ್ರಿಕಾ ಕೂಡ ಆಸ್ಟ್ರೇಲಿಯಾ ವಿರುದ್ಧ ಸೋಲಬೇಕಾಗುತ್ತದೆ. ದಕ್ಷಿಣ ಆಫ್ರಿಕಾ ಸೋಲದಿದ್ದರೆ, ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಗೆದ್ದರೂ ಅಥವಾ ಸೋತರೂ ತನ್ನ ಪ್ರಸ್ತುತ 3 ನೇ ಸ್ಥಾನದಲ್ಲಿ ಉಳಿಯುತ್ತದೆ.

World Cup 2025: ವಿಶ್ವಕಪ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಪ್ರತೀಕಾ ರಾವಲ್

ಸೆಮಿಫೈನಲ್ ಲೆಕ್ಕಾಚಾರ ಹೀಗಿದೆ

ಈಗಿರುವ ಪ್ರಶ್ನೆಯೆಂದರೆ, 2025 ರ ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಯಾವ ತಂಡವನ್ನು ಯಾರು ಎದುರಿಸುತ್ತಾರೆ?. ಟೀಂ ಇಂಡಿಯಾಗೆ ಯಾರು ಸವಾಲು ಹಾಕುತ್ತಾರೆ? ಎಂಬುದು. 2025 ರ ಮಹಿಳಾ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಅಕ್ಟೋಬರ್ 29 ರಂದು ಗುವಾಹಟಿಯಲ್ಲಿ ನಡೆಯಲಿದ್ದು, ಅಲ್ಲಿ ಟೀಂ ಇಂಡಿಯಾ ಆಡಲಿದೆ. ಪಂದ್ಯಾವಳಿಯ ಮೊದಲ ಸೆಮಿಫೈನಲ್‌ನಲ್ಲಿ, ನಾಲ್ಕನೇ ಶ್ರೇಯಾಂಕಿತ ಭಾರತವು ಟೇಬಲ್-ಟಾಪರ್ ಅನ್ನು ಎದುರಿಸಲಿದೆ. ಅದು ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾವೇ ಎಂಬುದು ಅಕ್ಟೋಬರ್ 25 ರಂದು ಬಹಿರಂಗಗೊಳ್ಳಲಿದೆ.

ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ನಡೆಯಲಿದೆ. 2025 ರ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Fri, 24 October 25