Rohit Sharma: ರೋಹಿತ್ ಶರ್ಮಾ ಇಂದು ನಿಮ್ಮ ವಿದಾಯದ ಪಂದ್ಯ: ಸಂಚಲನ ಸೃಷ್ಟಿಸಿದ ಗೌತಮ್ ಗಂಭೀರ್ ಹೇಳಿಕೆ
Rohit Sharma retirement: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ನಡೆಯುತ್ತಿದೆ. ಎರಡನೇ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದರ ಮಧ್ಯೆ ಇದೀಗ ಗೌತಮ್ ಗಂಭೀರ್ ಮತ್ತು ರೋಹಿತ್ ಅವರ ಸಂಭಾಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು (ಅ. 24): ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ಅವರನ್ನು ಪ್ಲೇಯಿಂಗ್ 11 ರಿಂದ ಕೈಬಿಡಬಹುದು ಮತ್ತು ಅವರ ಅಂತರರಾಷ್ಟ್ರೀಯ ವೃತ್ತಿಜೀವನವೂ ಅಪಾಯದಲ್ಲಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ, ಇದರಲ್ಲಿ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ನಡುವಣ ಸಂಭಾಷಣೆ ಇದೆ.
ಈ ವಿಡಿಯೋದಲ್ಲಿ ಗೌತಮ್ ಗಂಭಿರ್ ಅವರು ರೋಹಿತ್ ಶರ್ಮಾ ಜೊತೆ ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಡೆಯುತ್ತಿರುವ ಏಕದಿನ ಸರಣಿಯ ಸಮಯದಲ್ಲಿ ಈ ಸಂಭಾಷಣೆ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ, ಗಂಭೀರ್ ರೋಹಿತ್‌ಗೆ, “ರೋಹಿತ್, ಇಂದು ವಿದಾಯ ಪಂದ್ಯ ಎಂದು ಎಲ್ಲರೂ ಭಾವಿಸಿದ್ದರು, ಕನಿಷ್ಠ ಒಂದು ಫೋಟೋ ಪೋಸ್ಟ್ ಮಾಡಿ” ಎಂದು ಹೇಳುತ್ತಾರೆ. ಆದಾಗ್ಯೂ, ಈ ವಿಡಿಯೋವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ.
ರೋಹಿತ್ ಶರ್ಮಾ- ಗೌತಮ್ ಗಂಭೀರ್ ಸಂಭಾಷಣೆಯ ವಿಡಿಯೋ:
View this post on Instagram
ಟೀಮ್ ಇಂಡಿಯಾಕ್ಕೆ ಸೋಲು- ರೋಹಿತ್ ಶರ್ಮಾಗೆ ಗೆಲುವು
ಈ ಸಂಭಾಷಣೆ ತಮಾಷೆಗಾಗಿಯೋ ಅಥವಾ ಗಂಭೀರವಾಗಿಯೋ ಎಂದು ಅಭಿಮಾನಿಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ಗುರಿ ಹೊಂದಿದ್ದ ರೋಹಿತ್ ಶರ್ಮಾ ಕೇವಲ ಎಂಟು ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು. ಇದು ಸಾಕಷ್ಟು ಟೀಕೆಗೆ ಗುರಿಯಾಯಿತು. ಆದಾಗ್ಯೂ, ಎರಡನೇ ಏಕದಿನ ಪಂದ್ಯದಲ್ಲಿ ಅವರು ಅದ್ಭುತ 73 ರನ್ ಗಳಿಸಿ ಸ್ಫೋಟಕ ಕಮ್‌ಬ್ಯಾಕ್ ಮಾಡಿದರು. ಶ್ರೇಯಸ್ ಅಯ್ಯರ್ ಅವರ 61 ರನ್‌ಗಳ ಜೊತೆಗೆ, ರೋಹಿತ್ ಭಾರತ 264 ರನ್ ಗಳಿಸಲು ಸಹಾಯ ಮಾಡಿದರು. ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದರೂ, ರೋಹಿತ್ ಅವರ ಇನ್ನಿಂಗ್ಸ್ ಸದ್ದು ಮಾಡಿತು.
IND vs AUS 2nd ODI: ಟೀಮ್ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಗಿಲ್: ಏನು ಹೇಳಿದ್ರು?
ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿದಾಗಿನಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅಭಿಮಾನಿಗಳಲ್ಲಿ 2027 ರ ಏಕದಿನ ವಿಶ್ವಕಪ್‌ನಲ್ಲಿ ಅವರ ಸ್ಥಾನ ಮತ್ತು ವಿರಾಟ್ ಕೊಹ್ಲಿ ಅವರ ಸ್ಥಾನದ ಬಗ್ಗೆ ಊಹಾಪೋಹಗಳು ಹೆಚ್ಚಿವೆ. ಇದೀಗ ಈ ವೈರಲ್ ಕ್ಲಿಪ್ ಚರ್ಚೆಗೆ ಹೊಸ ತಿರುವು ನೀಡಿದೆ.
ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ ಯಾವಾಗ?
ಭಾರತ vs ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ ಶನಿವಾರ (ಅಕ್ಟೋಬರ್ 24) ನಡೆಯಲಿದೆ. ಈ ಪಂದ್ಯ ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದೆ. ಪಂದ್ಯವು ಸ್ಥಳೀಯ ಸಮಯ ಮಧ್ಯಾಹ್ನ 2:00 ಗಂಟೆಗೆ ಪ್ರಾರಂಭವಾಗುತ್ತದೆ. ಆದಾಗ್ಯೂ, ಭಾರತದಲ್ಲಿ ಪಂದ್ಯವು ಬೆಳಿಗ್ಗೆ 9:00 ಗಂಟೆಗೆ ಶುರುವಾಗಲಿದೆ. ಭಾರತ ಕಾಂಗರೂಗಳ ನಾಡಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುವ ಭರವಸೆಯಲ್ಲಿತ್ತು, ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 2 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಉಳಿದಿರುವ ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸುವ ಪ್ಲ್ಯಾನ್ನಲ್ಲಿ ಗಿಲ್ ಪಡೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Fri, 24 October 25




