AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಟೀಂ ಇಂಡಿಯಾಕ್ಕೆ ಮುಳುವಾಗ್ತಿದ್ಯಾ ಗೌತಮ್ ಗಂಭೀರ್ ಹಠಮಾರಿತನ

Gautam Gambhir's Blunders: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಕೋಚ್ ಗೌತಮ್ ಗಂಭೀರ್ ಅವರ ಹಠಮಾರಿ ತಂಡದ ಆಯ್ಕೆ ಕಾರಣ ಎನ್ನಲಾಗಿದೆ. ಮೂವರು ಆಲ್‌ರೌಂಡರ್‌ಗಳನ್ನು ಆಡಿಸುವ ನಿರ್ಧಾರದಿಂದ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಹೊರಗಿಡಲಾಗಿದೆ. ಇದು ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿದೆ. ಹರ್ಷಿತ್ ರಾಣಾ ಅವರಂತಹ ಆಟಗಾರರಿಗೆ ಅವಕಾಶ ನೀಡುವುದು ಮತ್ತು ತಜ್ಞರ ಸಲಹೆಗಳನ್ನು ನಿರ್ಲಕ್ಷಿಸುವುದು ತಂಡದ ಸೋಲಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

IND vs AUS: ಟೀಂ ಇಂಡಿಯಾಕ್ಕೆ ಮುಳುವಾಗ್ತಿದ್ಯಾ ಗೌತಮ್ ಗಂಭೀರ್ ಹಠಮಾರಿತನ
Gautam Gambhir
ಪೃಥ್ವಿಶಂಕರ
|

Updated on:Oct 23, 2025 | 9:32 PM

Share

ಆಸ್ಟ್ರೇಲಿಯಾ ಪ್ರವಾಸ ಟೀಂ ಇಂಡಿಯಾಕ್ಕೆ (India vs Australia) ದುಃಸ್ವಪ್ನದಂತೆ ಕಾಡಲಾರಂಭಿಸಿದೆ. ಏಕೆಂದರೆ ತಂಡದಲ್ಲಿ ದಿಗ್ಗಜ ಆಟಗಾರರ ಪಡೆಯೇ ಇದ್ದರೂ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್, ಬೌಲಿಂಗ್ ಹಾಗೂ ಫಿಲ್ಡಿಂಗ್ ತೀರ ಕಳಪೆಯಾಗಿತ್ತು. ಇದರ ಜೊತೆಗೆ ಮೊದಲ ಪಂದ್ಯದಲ್ಲಿ ಮಳೆ ಕೂಡ ಟೀಂ ಇಂಡಿಯಾ ಪಾಲಿಗೆ ವಿಲನ್ ಆಗಿ ಕಾಡಿತ್ತು. ಆದರೆ ಮೊದಲ ಸೋಲಿನೊಂದಿಗೆ ಪಾಠ ಕಲಿತು ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಲಯಕ್ಕೆ ಮರಳುತ್ತದೆ ಎಂದು ಭಾವಿಸಿದ್ದವರಿಗೆ ಮತ್ತೆ ನಿರಾಶೆ ಎದುರಾಗಿದೆ. ಒಂದೆಡೆ ತಂಡದ ಕಳಪೆ ಪ್ರದರ್ಶನ ಸೋಲಿಗೆ ಕಾರಣ ಎನ್ನಲಾಗುತ್ತಿದ್ದರೆ, ಇನ್ನೊಂದೆಡೆ ಆಡುವ ಹನ್ನೊಂದರ ಬಳಗದ ಸಂಯೋಜನೆಯೇ ಸರಿ ಇಲ್ಲ ಎಂಬುದು ಪರಿಣಿತರ ವಾದವಾಗಿದೆ. ಹೀಗಾಗಿ ಹಲವರು ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರನ್ನು ಈ 2 ಸೋಲುಗಳಿಗೆ ಹೊಣೆ ಮಾಡುತ್ತಿದ್ದಾರೆ.

ಮೇಲೆ ಹೇಳಿದಂತೆ ಈ ಎರಡು ಪಂದ್ಯಗಳಲ್ಲಿ ಆಟಗಾರರ ಕಳಪೆ ಪ್ರದರ್ಶನದ ಹೊರತಾಗಿ, ಎರಡೂ ಪಂದ್ಯಗಳಲ್ಲಿ ಮೂವರು ಆಲ್‌ರೌಂಡರ್‌ಗಳನ್ನು ಆಡಿಸಬೇಕೆಂಬ ಕೋಚ್ ಗೌತಮ್ ಗಂಭೀರ್ ಅವರ ಹಠಮಾರಿತನ ಈ ಸರಣಿ ಸೋಲಿಗೆ ಮತ್ತೊಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ ಬೌಲಿಂಗ್ ವಿಭಾಗದಲ್ಲಿ ತಮ್ಮ ದತ್ತು ಪುತ್ರ ಎನಿಸಿಕೊಂಡಿರುವ ಹರ್ಷಿತ್ ರಾಣಾಗೆ ಪದೇ ಪದೇ ಅವಕಾಶ ಕೊಡುತ್ತಿರುವುದು ಕೂಡ ಹಲವರ ಕೋಪಕ್ಕೆ ಕಾರಣವಾಗಿದೆ. ಹಾಗಿದ್ದರೆ ಗಂಭೀರ್ ಮಾಡುತ್ತಿರುವ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ..

ಆಲ್‌ರೌಂಡರ್‌ಗಾಗಿ ಕುಲ್ದೀಪ್ ಬಲಿಪಶು

ಟೀಂ ಇಂಡಿಯಾದ ಸೋಲಿಗೆ ನಾಯಕ ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಮತ್ತು ಕಳಪೆ ಫೀಲ್ಡಿಂಗ್ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪಂದ್ಯಕ್ಕೂ ಮುನ್ನ ಆಡುವ ಹನ್ನೊಂದರ ಬಳಗದ ಆಯ್ಕೆಯ ಬಗ್ಗೆ ತೆಗೆದುಕೊಂಡ ನಿರ್ಧಾರವು ಈ ಸೋಲಿಗೆ ಕಾರಣವಲ್ಲವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಟೀಂ ಇಂಡಿಯಾ ಎರಡೂ ಪಂದ್ಯಗಳಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಪರಿಣಾಮವಾಗಿ, ತಂಡದ ಅಗ್ರ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಎರಡೂ ಪಂದ್ಯಗಳಿಂದ ಹೊರಗಿಡಲಾಯಿತು.

ಪ್ಲೇಯಿಂಗ್ 11ನಲ್ಲಿ ಮೂವರು ಆಲ್‌ರೌಂಡರ್‌ಗಳು ಇದ್ದ ಕಾರಣ ಕುಲ್ದೀಪ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಿಲ್ಲ. ಅವರಲ್ಲಿ ಇಬ್ಬರು ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ನರ್‌ಗಳಾಗಿದ್ದರೆ, ಮೂರನೇ ಆಲ್‌ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಇದ್ದರು. ಈ ನಿರ್ಧಾರಕ್ಕೆ ಏಕೈಕ ಕಾರಣ ಬ್ಯಾಟಿಂಗ್ ಲೈನ್‌ಅಪ್‌ಗೆ ಬಲ ತುಂಬುವುದು. ಆದಾಗ್ಯೂ ಈ ನಿರ್ಧಾರ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿತು. ಈ ಸರಣಿಯಲ್ಲಿ ಈಗಾಗಲೇ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಅನುಭವಿ ವೇಗದ ಬೌಲರ್‌ಗಳ ಕೊರತೆಯಿದೆ ಎಂಬುದು ಗಮನಿಸಬೇಕಾದ ಸಂಗತಿ. ಆದ್ದರಿಂದ, ತಂಡದ ನಂಬರ್ ಒನ್ ವಿಕೆಟ್ ಟೇಕರ್‌ ಆಗಿರುವ ಕುಲ್ದೀಪ್ ಅವರನ್ನು ತಂಡದ ಆಯ್ಕೆಯಲ್ಲಿ ಪರಿಗಣಿಸಬೇಕಿತ್ತು

ಇದರ ಲಾಭ ಪಡೆದ ಆಸ್ಟ್ರೇಲಿಯಾ

ಪರ್ತ್ ಏಕದಿನ ಪಂದ್ಯವನ್ನು ಬಿಟ್ಟರೂ ಸಹ, ಟೀಂ ಇಂಡಿಯಾ ಅಡಿಲೇಡ್‌ನಲ್ಲಿ ಕುಲ್ದೀಪ್ ಯಾದವ್ ಅವರನ್ನು ಮಿಸ್ ಮಾಡಿಕೊಂಡಿತು. ಏಕೆಂದರೆ ಇದೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಲೆಗ್-ಸ್ಪಿನ್ನರ್ ಆಡಮ್ ಜಂಪಾ ಮಧ್ಯಮ ಕ್ರಮಾಂಕದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತೀಯ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹೀಗಾಗಿ ಕುಲ್ದೀಪ್ ತಂಡದಲ್ಲಿ ಇದ್ದಿದ್ದರೆ, ಅದು ತಂಡಕ್ಕೆ ಸಹಕಾರಿಯಾಗಿರುತ್ತಿತ್ತು. ಒಂದು ಹಂತದಲ್ಲಿ ಆಸ್ಟ್ರೇಲಿಯಾ 187 ರನ್​ಗಳಿಗೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಂತಹ ಸಮಯದಲ್ಲಿ ಕುಲ್ದೀಪ್ ಯಾದವ್‌ರಂತಹ ಸ್ಪಿನ್ನರ್ ಇದ್ದಿದ್ದರೆ ತಂಡಕ್ಕೆ ಮತ್ತಷ್ಟು ಬಲ ಸಿಗುತ್ತಿತ್ತು. ಆದರೆ ತಂಡದಲ್ಲಿ ಸ್ಟಾರ್ ಸ್ಪಿನ್ನರ್ ಇಲ್ಲದಿರುವುದು ಆಸ್ಟ್ರೇಲಿಯಾಕ್ಕೆ ಸಂಪೂರ್ಣ ಲಾಭ ಮಾಡಿಕೊಟ್ಟಿತು.

3 ಆಲ್‌ರೌಂಡರ್‌ಗಳ ಪ್ರದರ್ಶನ ಹೇಗಿತ್ತು?

ಇನ್ನು ಕುಲ್ದೀಪ್​ರನ್ನು ಹೊರಗಿಟ್ಟು, ತಂಡಕ್ಕೆ ಆಯ್ಕೆಯಾಗಿದ್ದ ಮೂವರು ಆಲ್‌ರೌಂಡರ್‌ಗಳ ಬಗ್ಗೆ ಮಾತನಾಡಿದರೆ, ಅವರ ಪ್ರದರ್ಶನವು ಹೇಳಿಕೊಳ್ಳುವಂತಿರಲಿಲ್ಲ. ಅಕ್ಷರ್ ಪಟೇಲ್ 41 ಎಸೆತಗಳಲ್ಲಿ 44 ರನ್​ಗಳ ಕಾಣಿಕೆ ನೀಡಿದರು. ಅವರನ್ನು ಬಿಟ್ಟರೆ, ಸುಂದರ್ ಹಾಗೂ ನಿತೀಶ್ ಪರಿಣಾಮಕಾರಿಯಾಗಲಿಲ್ಲ. ಬೌಲಿಂಗ್‌ನಲ್ಲಿ, ಮೂವರು ಒಟ್ಟಾಗಿ 20 ಓವರ್‌ಗಳನ್ನು ಬೌಲಿಂಗ್ ಮಾಡಿ113 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಕೇವಲ 3 ವಿಕೆಟ್‌ಗಳನ್ನು ಪಡೆದರು. ನಿತೀಶ್ ತಮ್ಮ 3 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 24 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಉಳಿದಂತೆ ಅಕ್ಷರ್ ಪಟೇಲ್ 10 ಓವರ್​ಗಳಲ್ಲಿ 52 ರನ್ ನೀಡಿ 1 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ 7 ಓವರ್​ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Thu, 23 October 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ