World Cup 2025: ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಪ್ರತೀಕಾ ರಾವಲ್
Prateeka Raval century: ನ್ಯೂಜಿಲೆಂಡ್ ವಿರುದ್ಧದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ಅಮೋಘ ದ್ವಿಶತಕದ ಜೊತೆಯಾಟವಾಡಿ ಭಾರತಕ್ಕೆ ಬೃಹತ್ ಮೊತ್ತ ಗಳಿಸಲು ನೆರವಾದರು. ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಆರಂಭಿಕ ಜೋಡಿಯಿಂದ ಶತಕಗಳಿಸಿದ್ದು ಇದೇ ಮೊದಲು, ಇದು ಪ್ರತೀಕಾ ಅವರ ಚೊಚ್ಚಲ ವಿಶ್ವಕಪ್ ಶತಕವಾಗಿದೆ.

ನ್ಯೂಜಿಲೆಂಡ್ ವಿರುದ್ಧದ ನಡೆಯುತ್ತಿರುವ ಮಹಿಳಾ ವಿಶ್ವಕಪ್ (Women’s ODI World Cup 2025) ಪಂದ್ಯದಲ್ಲಿ ಟೀಂ ಇಂಡಿಯಾದ (India vs New Zealand) ಆರಂಭಿಕ ಆಟಗಾರ್ತಿಯರಿಬ್ಬರು ಅಮೋಘ ಪ್ರದರ್ಶನ ನೀಡಿ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (Smriti Mandhana) ಹಾಗೂ ಪ್ರತೀಕಾ ರಾವಲ್ (Prateeka Raval) ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ. ಮೊದಲಿಗೆ ಸ್ಮೃತಿ ಶತಕ ಬಾರಿಸಿದರೆ, ಆ ಬಳಿಕ ಪ್ರತೀಕಾ ಕೂಡ ತಮ್ಮ ಎರಡನೇ ಏಕದಿನ ಶತಕವನ್ನು ಪೂರೈಸಿದರು. ಹಾಗೆಯೇ ಇದು ಪ್ರತೀಕಾ ಅವರ ಚೊಚ್ಚಲ ವಿಶ್ವಕಪ್ ಶತಕವಾಗಿರುವುದು ಇನ್ನಷ್ಟು ವಿಶೇಷವಾಗಿದೆ. ಪ್ರತೀಕಾ ತಮ್ಮ 23 ನೇ ಏಕದಿನ ಇನ್ನಿಂಗ್ಸ್‌ನಲ್ಲಿ ಎರಡನೇ ಶತಕ ಪೂರೈಸಿದ್ದು ಮಾತ್ರವಲ್ಲದೆ ಸ್ಮೃತಿ ಮಂಧಾನ ಅವರೊಂದಿಗೆ ದ್ವಿಶತಕದ ಜೊತೆಯಾಟವನ್ನು ಹಂಚಿಕೊಂಡರು. ಹಾಗೆಯೇ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಆರಂಭಿಕ ಜೋಡಿ ಒಂದೇ ಪಂದ್ಯದಲ್ಲಿ ಶತಕ ಗಳಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದೆ.
ಮೊದಲ ವಿಕೆಟ್ಗೆ ದ್ವಿಶತಕದ ಜೊತೆಯಾಟ
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾಗುತ್ತದೆ ಒತ್ತಡದಲ್ಲಿತ್ತು. ಅಂದರೆ ಹರ್ಮನ್ ಪಡೆ ಗೆಲ್ಲಬೇಕೆಂದರೆ ಬ್ಯಾಟಿಂಗ್ ವಿಭಾಗದಿಂದ ಒಂದೊಳ್ಳೆ ಪ್ರದರ್ಶನದ ಅವಶ್ಯಕತೆ ಇತ್ತು. ಆ ಪ್ರಾಕರ ಉಪನಾಯಕಿ ಸ್ಮೃತಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪ್ರತೀಕಾ ರಾವಲ್ ಮೊದಲ ವಿಕೆಟ್ಗೆ ದ್ವಿಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಸ್ಮೃತಿ ಮಂಧಾನ ಶತಕ ಬಾರಿಸಿದ ಬಳಿಕ ವಿಕೆಟ್ ಒಪ್ಪಿಸುವುದರೊಂದಿಗೆ ಈ ಜೊತೆಯಾಟಕ್ಕೆ ಅಂತ್ಯ ಹಾಡಿದರು.
𝗣𝗲𝗿𝘀𝗶𝘀𝘁𝗲𝗻𝘁 𝗣𝗿𝗮𝘁𝗶𝗸𝗮 🥳
Superb 💯 from the #TeamIndia opener 🫡
Her 2️⃣nd in Women’s ODIs 👏
Updates ▶ https://t.co/AuCzj0X11B#WomenInBlue | #INDvNZ | #CWC25 pic.twitter.com/w2SONcgF5c
— BCCI Women (@BCCIWomen) October 23, 2025
ಒಂದೇ ವರ್ಷದಲ್ಲಿ 2ನೇ ಏಕದಿನ ಶತಕ
ಸ್ಮೃತಿ ವಿಕೆಟ್ ಪತನದ ಬಳಿಕ ತಮ್ಮ ಎಂದಿನ ಆಟವನ್ನು ಮುಂದುವರೆಸಿದ ಪ್ರತಿಕಾ ತಮ್ಮ ಮೊದಲ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ 50 ರನ್‌ಗಳ ಗಡಿ ದಾಟಿದ್ದು ಮಾತ್ರವಲ್ಲದೆ, 120 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಎರಡನೇ ಶತಕವನ್ನು ಪೂರೈಸಿದರು. ಪ್ರತಿಕಾ ಒಂದೇ ವರ್ಷದಲ್ಲಿ ಎರಡೂ ಶತಕಗಳನ್ನು ಬಾರಿಸಿದ್ದು, ಈ ಹಿಂದೆ ಅವರು ತಮ್ಮ ಆರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಏಕದಿನ ಶತಕ ಬಾರಿಸಿದ್ದರು. ಈಗ ತಮ್ಮ 23 ನೇ ಪಂದ್ಯದಲ್ಲಿ ಎರಡನೇ ಶತಕ ಸಿಡಿಸಿದ್ದಾರೆ.
World Cup 2025: ಕಿವೀಸ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಸ್ಮೃತಿ ಮಂಧಾನ
ವೇಗವಾಗಿ ಸಾವಿರ ರನ್ ಪೂರ್ಣ
ಪ್ರತೀಕಾ ಅವರ ಶತಕವು ಭಾರತೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ಇತಿಹಾಸವನ್ನು ಸೃಷ್ಟಿಸಿತು. ಅದೆನೆಂದರೆ, ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಇಬ್ಬರೂ ಆರಂಭಿಕ ಆಟಗಾರ್ತಿಯರಿಬ್ಬರು ಶತಕಗಳನ್ನು ಬಾರಿಸಿದ ಮೂರನೇ ಪಂದ್ಯ ಇದಾಗಿದೆ. ಆದರೆ ಭಾರತೀಯ ಆರಂಭಿಕ ಜೋಡಿ ಈ ಸಾಧನೆ ಮಾಡುತ್ತಿರುವುದು ಇದೇ ಮೊದಲು. ಇದಲ್ಲದೆ, ಈ ಇನ್ನಿಂಗ್ಸ್‌ನಲ್ಲಿ, ಪ್ರತೀಕಾ 1,000 ಏಕದಿನ ರನ್‌ಗಳನ್ನು ವೇಗವಾಗಿ ತಲುಪಿದ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಪ್ರತೀಕಾ ಕೇವಲ 23 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಲಿಂಡ್ಸೆ ರೀಲರ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Thu, 23 October 25
