
ಜಪಾನ್ನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ಗೇರಿದೆ. ನಿಶ್ಶಿನ್ ನಗರದ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 114 ರನ್ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಶಫಾಲಿ ವರ್ಮಾ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಶಫಾಲಿ ಬ್ಯಾಟ್ನಿಂದ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ 100 ರನ್ಗಳ ಶತಕ ಮೂಡಿಬಂತು.
ಮತ್ತೊಂದೆಡೆ ಸ್ಮೃತಿ ಮಂಧಾನ 37 ರನ್ಗಳ ಕೊಡುಗೆ ನೀಡಿದರೆ, ಹರ್ಮನ್‌ಪ್ರೀತ್ ಕೌರ್ 40 ರನ್ಗಳನ್ನು ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿತು.
20 ಓವರ್ಗಳಲ್ಲಿ 196 ರನ್ಗಳ ಕಠಿಣ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನಂದಿನಿ ಶರ್ಮಾ ಯಶಸ್ವಿಯಾದರು. ಈ ಆಘಾತದಿಂದ ಪಾರಾಗುವ ಮುನ್ನವೇ ಕ್ರಾಂತಿ ಗೌಡ್ ಹಾಗೂ ಶ್ರೀಚರಣಿ ಅತ್ಯುತ್ತಮ ದಾಳಿ ಸಂಘಟಿಸಿದರು. ಪರಿಣಾಮ 49 ರನ್ಗಳಿಸುವಷ್ಟರಲ್ಲಿ ಬಾಂಗ್ಲಾದೇಶ್ ತಂಡ 5 ವಿಕೆಟ್ ಕಳೆದುಕೊಂಡಿತು.
ಇದಾಗ್ಯೂ ದಿಲಾರಾ ಅಕ್ತರ್ 27 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ದಿಲಾರಾ ಕೂಡ ಶರಣಾಗಬೇಕಾಯಿತು. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 15.4 ಓವರ್ಗಳಲ್ಲಿ 81 ರನ್ಗಳಿಸಿ ಸರ್ವಪತನ ಕಂಡಿತು.
ಈ ಮೂಲಕ ಟೀಮ್ ಇಂಡಿಯಾ 114 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಫೈನಲ್ಗೆ ಲಗ್ಗೆಯಿಟ್ಟಿದ್ದು, ಮಂಗಳವಾರ ನಡೆಯಲಿರುವ ಫೈನಲ್ ಮ್ಯಾಚ್ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಗುಣಲನ್ ಕಮಲಿನಿ , ಹರ್ಮನ್‌ಪ್ರೀತ್ ಕೌರ್ (ನಾಯಕಿ) ,
ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ , ದೀಪ್ತಿ ಶರ್ಮಾ , ಶ್ರೇಯಾಂಕ ಪಾಟೀಲ್ , ಶ್ರೀ ಚರಣಿ , ನಂದನಿ ಶರ್ಮಾ ,
ಕ್ರಾಂತಿ ಗೌಡ್.
ಇದನ್ನೂ ಓದಿ: ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ ಸ್ಮೃತಿ ಮಂಧಾನ!
ಬಾಂಗ್ಲಾದೇಶ್ ಪ್ಲೇಯಿಂಗ್ 11: ದಿಲಾರಾ ಅಕ್ತರ್ , ಜುಯೆರಿಯಾ ಫರ್ದೌಸ್ , ಶೋಭಾನ ಮೋಸ್ಟರಿ , ನಿಗರ್ ಸುಲ್ತಾನ (ನಾಯಕಿ) , ಶೋರ್ನಾ ಅಕ್ತರ್ , ಶರ್ಮಿನ್ ಅಖ್ತರ್ , ಶಂಜಿದಾ ಅಕ್ತರ್ ಮೇಘಲಾ , ರಬೇಯಾ ಖಾನ್ , ನಹಿದಾ ಅಕ್ತರ್ ,
ಮರುಫಾ ಅಕ್ತರ್ , ಸುಲ್ತಾನ ಖಾತುನ್.