ಡಿಸೆಂಬರ್ 18 ರಂದು, 2 ಟೆಸ್ಟ್ ಪಂದ್ಯಗಳ ಫಲಿತಾಂಶಗಳು 2 ಗಂಟೆಗಳ ಅಂತರದಲ್ಲಿ ಹೊರಬಿದ್ದಿದೆ. ಮೊದಲು ಬಾಂಗ್ಲಾದೇಶವನ್ನು ಬೃಹತ್ ಅಂತರದಿಂದ ಮಣಿಸಿದ ಟೀಂ ಇಂಡಿಯಾ (India vs Bangladesh) 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಎರಡನೇಯದಾಗಿ, ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (Australia Vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಎರಡು ಟೆಸ್ಟ್ ಪಂದ್ಯಗಳ ಫಲಿತಾಂಶದ ಪರಿಣಾಮ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಪಟ್ಟಿಯಲ್ಲಿ (World Test Championship) ಗೋಚರವಾಗಿದೆ. ವಾಸ್ತವವಾಗಿ ಬಾಂಗ್ಲಾ ತಂಡವನ್ನು ಮಣಿಸಿದ್ದ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಶ್ರೀಲಂಕಾ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಇದೀಗ ಆಸ್ಟ್ರೇಲಿಯಾ ಎದುರು ಸೋತಿರುವ ದಕ್ಷಿಣ ಆಫ್ರಿಕಾ ಭಾರತದ ಫೈನಲ್ ಹಾದಿಗೆ ದಾರಿ ಮಾಡಿಕೊಟ್ಟಿದೆ. ಆಫ್ರಿಕಾದ ಸೋಲು ಭಾರತವನ್ನು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೆ ತಳ್ಳಿದೆ.
ಚಟ್ಟೋಗ್ರಾಮ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತ 188 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ನಿಖರವಾಗಿ 2 ಗಂಟೆಗಳ ನಂತರ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಬ್ರಿಸ್ಬೇನ್ ಟೆಸ್ಟ್ ಕೇವಲ 2 ದಿನಗಳಲ್ಲಿ ಅದರ ಮುಕ್ತಾಯವನ್ನು ತಲುಪಿತು. ಇದರಿಂದಾಗಿ WTC ಪಾಯಿಂಟ್ ಪಟ್ಟಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬದಲಾವಣೆಗಳು ಕಂಡುಬಂದವು.
AUS vs SA: ಆಫ್ರಿಕಾ ಎದುರು ಮೊದಲ ಟೆಸ್ಟ್ ಗೆದ್ದ ಆಸೀಸ್; ಭಾರತಕ್ಕೆ ಲಾಭ ತಂದ ಹರಿಣಗಳು ಸೋಲು..!
2. ಭಾರತದ ಡಬಲ್ ಜಂಪ್
ಆದರೆ, ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿನ ಬದಲಾವಣೆಗಳು ನೇರವಾಗಿ ಟೀಮ್ ಇಂಡಿಯಾಗೆ ಲಾಭ ತಂದಿದೆ. ಬಾಂಗ್ಲಾದೇಶ ವಿರುದ್ಧ 188 ರನ್‌ಗಳ ಜಯ ದಾಖಲಿಸಿದ ಭಾರತ ತಂಡ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿತ್ತು. ಆಸ್ಟ್ರೇಲಿಯಾದ ಎದುರು ದಕ್ಷಿಣ ಆಫ್ರಿಕಾದ ಸೋಲಿನ ನಂತರ ಭಾರತಕ್ಕೆ ಮುಂಬಡ್ತಿ ಸಿಕ್ಕಿದೆ. ಅಂದರೆ ಭಾರತ ಈಗ ದಕ್ಷಿಣ ಆಫ್ರಿಕಾದ ಸ್ಥಾನವನ್ನು ವಶಪಡಿಸಿಕೊಂಡಿದೆ.
3. ಎರಡನೇ ಸ್ಥಾನದಲ್ಲಿ ಭಾರತ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಗೆಲುವಿನ ನಂತರ, ಆಸ್ಟ್ರೇಲಿಯಾ 76.92% ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಮತ್ತೊಂದೆಡೆ, ಸೋಲಿನಿಂದ ಗಾಯಗೊಂಡಿರುವ ದಕ್ಷಿಣ ಆಫ್ರಿಕಾ 54.55% ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಹರಿಣಗಳ ಸೋಲಿನ ಲಾಭ ಪಡೆದ ಭಾರತ ತಂಡ ಇದೀಗ ಎರಡನೇ ಸ್ಥಾನಕ್ಕೆ ತಲುಪಿದೆ. ಭಾರತವು 55.77% ಗೆಲುವಿನ ಸರಾಸರಿ ಹೊಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಈ ಮುನ್ನಡೆಯನ್ನು ಕಾಯ್ದುಕೊಳ್ಳಲು ಭಾರತಕ್ಕೆ ಈಗ ಸುವರ್ಣಾವಕಾಶವಿದೆ. ಎರಡನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ, ಭಾರತ- ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಬೇಕಾಗಿದೆ. ಅಂದರೆ 1-0 ಮುನ್ನಡೆಯನ್ನು 2-0 ಆಗಿ ಪರಿವರ್ತಿಸಬೇಕು. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಆಸ್ಟ್ರೇಲಿಯಾ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಲು ಪ್ರಾರ್ಥಿಸಬೇಕು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Sun, 18 December 22