ಟೀಂ ಇಂಡಿಯಾದಲ್ಲಿ ಈ 4 ಬದಲಾವಣೆಗಳಾದರೆ ಐಸಿಸಿ ಪ್ರಶಸ್ತಿ ಗೆಲ್ಲವುದು ಬಹಳ ಸುಲಭ..!

| Updated By: ಪೃಥ್ವಿಶಂಕರ

Updated on: Nov 11, 2022 | 5:28 PM

Team India: ಮುಂದಿನ ಐಸಿಸಿ ಟ್ರೋಫಿಯನ್ನು ಟೀಂ ಇಂಡಿಯಾ ಗೆಲ್ಲುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಬದಲಾವಣೆ ಅಗತ್ಯ.

ಟೀಂ ಇಂಡಿಯಾದಲ್ಲಿ ಈ 4 ಬದಲಾವಣೆಗಳಾದರೆ ಐಸಿಸಿ ಪ್ರಶಸ್ತಿ ಗೆಲ್ಲವುದು ಬಹಳ ಸುಲಭ..!
ಟೀಂ ಇಂಡಿಯಾ
Follow us on

2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಭಾರತೀಯ ಕ್ರಿಕೆಟ್ ತಂಡದ ಪ್ರಯಾಣವು ಕೊನೆಗೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಈ ಏಕಪಕ್ಷೀಯ ಸೋಲಿನ ನಂತರ ಟೀಂ ಇಂಡಿಯಾ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ಇಂತಹ ನಾಕ್ ಔಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಶರಣಾಗುವುದನ್ನು ಎಲ್ಲಿಯವರೆಗೆ ಮುಂದುವರಿಸುತ್ತದೆ ಎಂಬುದು ಈಗಿನ ಪ್ರಶ್ನೆಯಾಗಿದೆ. 2013 ರಿಂದ ಭಾರತವು 2014, 2016 ರ ಟಿ 20 ವಿಶ್ವಕಪ್‌ನ ನಾಕೌಟ್ ಸುತ್ತಿನಲ್ಲಿ ಸೋತಿದೆ. 2017ರ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್‌ನಲ್ಲೂ ಇದೇ ಪರಿಸ್ಥಿತಿ ಇತ್ತು. 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲೂ ಭಾರತ ಸೋತಿತ್ತು.

ಇದೆಲ್ಲ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಈಗ ಪ್ರಶ್ನೆ. ಮುಂದಿನ ಐಸಿಸಿ ಟ್ರೋಫಿಯನ್ನು ಟೀಂ ಇಂಡಿಯಾ ಗೆಲ್ಲುವುದು ಯಾವಾಗ ಎಂಬ ಪ್ರಶ್ನೆಯೂ ಎಲ್ಲರನ್ನೂ ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಬದಲಾವಣೆ ಅಗತ್ಯ. ಟೀಮ್ ಇಂಡಿಯಾದ ಸೋಲಿನ ಗಾಯಗಳನ್ನು ಯಾವ ನಾಲ್ಕು ಬದಲಾವಣೆಗಳು ವಾಸಿಮಾಡುತ್ತವೆ ಎಂಬುದರ ಪೂರ್ಣ ವಿವರ ಇಲ್ಲಿದೆ.

ಪವರ್‌ಪ್ಲೇನಲ್ಲಿ ಪವರ್​ಫುಲ್ ಆಟ ಅತ್ಯಗತ್ಯ

2022 ರ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪವರ್‌ಪ್ಲೇ ರನ್ ರೇಟ್ ತುಂಬಾ ಕಳಪೆಯಾಗಿತ್ತು. ಈ ಟೂರ್ನಿಯಲ್ಲಿ ಭಾರತವು ಪವರ್‌ಪ್ಲೇನಲ್ಲಿ ಕೇವಲ 6.02 ರನ್ ರೇಟ್‌ನೊಂದಿಗೆ ರನ್ ಗಳಿಸಿತು. ಇದು ಯುಎಇ ನಂತರ ಯಾವುದೇ ತಂಡದ ಕಳಪೆ ಪ್ರದರ್ಶನವಾಗಿದೆ. ಸೆಮಿಫೈನಲ್‌ನಲ್ಲೂ ಟೀಂ ಇಂಡಿಯಾ ಪವರ್‌ಪ್ಲೇಯಲ್ಲಿ 38 ರನ್ ಗಳಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಲೆಂಡ್ ತಂಡ ಪವರ್‌ಪ್ಲೇನಲ್ಲಿ 63 ರನ್ ಗಳಿಸಿತ್ತು. ಹೀಗಾಗಿ ಪವರ್‌ಪ್ಲೇಯಲ್ಲಿ ಟೀಂ ಇಂಡಿಯಾಗೆ ಪವರ್​ಫುಲ್ ಆಟದ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ‘ಐಪಿಎಲ್‌ನಿಂದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿಲ್ಲ’! ಪಾಕ್ ಅನುಭವಿಗಳ ಅಸಂಬದ್ಧ ಹೇಳಿಕೆ

ಆಟಗಾರರ ಸರಿಯಾದ ಬಳಕೆ

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಕ್ಕೆ ‘ಅತ್ಯುತ್ತಮ’ 15 ಆಟಗಾರರೊಂದಿಗೆ ತೆರಳಿದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ವಿಶ್ವದ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಯುಜ್ವೇಂದ್ರ ಚಹಾಲ್‌ಗೆ ಇಡೀ ಟೂರ್ನಿಯಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ. ಇತ್ತೀಚೆಗಷ್ಟೇ ಟಿ20 ಶತಕ ಸಿಡಿಸಿದ್ದ ದೀಪಕ್ ಹೂಡಾ ಅವರಂತಹ ಅತ್ಯುತ್ತಮ ಆಟಗಾರನಿಗೆ ಭಾರತ ಪೂರ್ಣ ಅವಕಾಶ ನೀಡಲಿಲ್ಲ. ದಿನೇಶ್ ಕಾರ್ತಿಕ್ ಮತ್ತು ನಂತರ ರಿಷಬ್ ಪಂತ್ ಕೂಡ ತಂಡದಲ್ಲಿ ಸರಿಯಾದ ಸ್ಥಾನ ಪಡೆಯಲಿಲ್ಲ. ಹೀಗಾಗಿ ಟೀಂ ಇಂಡಿಯಾದ ಬಳಿ ಸರಿಯಾದ ತಂತ್ರಗಾರಿಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ಟೂರ್ನಿಗಳಲ್ಲಿ ಟೀಂ ಇಂಡಿಯಾ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳುವತ್ತ ಗಮನ ಹರಿಸಬೇಕಿದೆ.

ಹೆಸರಷ್ಟೇ ಮುಖ್ಯವಲ್ಲ, ಪ್ರತಿಭೆಗೂ ಅವಕಾಶ

ಯುಜ್ವೇಂದ್ರ ಚಹಾಲ್, ಸಂಜು ಸ್ಯಾಮ್ಸನ್, ಪೃಥ್ವಿ ಶಾ, ಇಶಾನ್ ಕಿಶನ್, ದೀಪಕ್ ಹೂಡಾ, ಉಮ್ರಾನ್ ಮಲಿಕ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಹೆಸರುಗಳು. ಆದರೆ ಈ ಟಿ20 ಸ್ಪೆಷಲಿಸ್ಟ್ ಆಟಗಾರರಿಗೆ ಒಂದೋ ಅವಕಾಶ ಸಿಗಲಿಲ್ಲ ಮತ್ತು ಬಂದರೂ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವರ ಬದಲಿಗೆ, ದೊಡ್ಡ ಹೆಸರಿನ ಆಟಗಾರರು ಆಡುವ XI ನಲ್ಲಿ ಕಾಣಿಸಿಕೊಂಡರು.

ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಬೇಕು

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಈಗ ತನ್ನ ಆಲೋಚನೆಯನ್ನು ಬದಲಾಯಿಸಬೇಕಾಗಿದೆ. ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಮಾತ್ರ ಆಡುತ್ತಾರೆ. ಆದರೆ ಈಗ ಅವರು ವಿದೇಶಿ ಲೀಗ್‌ಗಳಲ್ಲಿ ಆಡಬೇಕಾಗಿದೆ. ಹೀಗಾಗಿ ಬಿಸಿಸಿಐ ತನ್ನ ನಿಯಮಗಳನ್ನು ಬದಲಿಸಿ ಆಟಗಾರರಿಗೆ ವಿದೇಶಿ ಲೀಗ್ ಆಡಲು ಅನುಮತಿ ನೀಡಬೇಕಿದೆ. ಇದರಿಂದಾಗಿ ವಿದೇಶಿ ಲೀಗ್​ಗಳಲ್ಲಿ ಆಡುವ ಆಟಗಾರರಿಗೆ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Fri, 11 November 22