‘ಐಪಿಎಲ್‌ನಿಂದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿಲ್ಲ’! ಪಾಕ್ ಅನುಭವಿಗಳ ಅಸಂಬದ್ಧ ಹೇಳಿಕೆ

T20 World Cup 2022: 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಅನ್ನು ಆಯೋಜಿಸಲಾಯಿತು. ಮೊದಲ ಆವೃತ್ತಿಯಲ್ಲೇ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು.

‘ಐಪಿಎಲ್‌ನಿಂದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿಲ್ಲ’! ಪಾಕ್ ಅನುಭವಿಗಳ ಅಸಂಬದ್ಧ ಹೇಳಿಕೆ
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Nov 11, 2022 | 3:04 PM

ಭಾರತ ತಂಡ ಮತ್ತೊಮ್ಮೆ ಟಿ20 ವಿಶ್ವಕಪ್ (T20 World Cup 2022) ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋಲನುಭವಿಸುವುದರೊಂದಿಗೆ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿತು. ಸತತ ವೈಫಲ್ಯದಿಂದ ಭಾರತ ತಂಡ (Team India) ಟೀಕೆಗೆ ಗುರಿಯಾಗುತ್ತಿದೆ. ಈ ಸೋಲಿಗೆ ಹಲವರು ಹಲವು ಕಾರಣಗಳನ್ನು ನೀಡುತ್ತಿದ್ದರೆ, ಪಾಕಿಸ್ತಾನ ತಂಡದ ಹಿರಿಯ ಆಟಗಾರರು ಐಪಿಎಲ್‌ ಮೇಲೆ ಗೂಬೆ ಕೂರಿಸಿದ್ದಾರೆ. ಐಪಿಎಲ್ (IPL) ಆರಂಭವಾದಾಗಿನಿಂದ ಭಾರತಕ್ಕೆ ಟಿ20ಯಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ ಎಂದು ಪಾಕ್ ತಂಡದ ಮಾಜಿ ಆಟಗಾರರು ಹೇಳಿದ್ದಾರೆ.

2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಅನ್ನು ಆಯೋಜಿಸಲಾಯಿತು. ಮೊದಲ ಆವೃತ್ತಿಯಲ್ಲೇ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮರುವರ್ಷವೇ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಯಿತು. ಆದರೆ, ಐಪಿಎಲ್ ಆರಂಭವಾದಾಗಿನಿಂದ ಭಾರತಕ್ಕೆ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಐಪಿಎಲ್‌ನಿಂದ ಭಾರತ ತಂಡಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರರು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ಈ ಇಬ್ಬರಂತೆ ಸಾವಿರ ಆಟಗಾರರು ಸಿಗಬಹುದು, ಆದರೆ ಧೋನಿಯಂಥವರು ಸಿಗುವುದು ಅಸಾಧ್ಯ; ಗಂಭೀರ್

ಐಪಿಎಲ್ ಆಟಗಾರರ ಮೇಲೆ ಒತ್ತಡ ಹೇರುತ್ತದೆ

ಪಾಕಿಸ್ತಾನದ ಕ್ರೀಡಾ ಚಾನೆಲ್‌ನ ಪ್ಯಾನೆಲ್‌ನಲ್ಲಿ ಭಾಗವಹಿಸಿದ್ದ ವಾಸಿಂ ಅಕ್ರಮ್, ಶೋಯೆಬ್ ಮಲಿಕ್, ವಾಸಿಂ ಅಕ್ರಮ್ ಮತ್ತು ಮಿಸ್ಬಾ-ಉಲ್-ಹಕ್ ಭಾರತದ ಸೋಲಿನ ಬಗ್ಗೆ ತಮ್ಮದೆ ಆದ ಅಭಿಪ್ರಾಯ ಮಂಡಿಸಿದ್ದಾರೆ. ಹಣ ಗಳಿಸಲು ಐಪಿಎಲ್ ಉತ್ತಮ ಲೀಗ್ ಆದರೆ ಟೀಂ ಇಂಡಿಯಾ ಅದರ ಲಾಭ ಪಡೆಯುತ್ತಿಲ್ಲ ಎಂದು ಕಾರ್ಯಕ್ರಮದ ಹೋಸ್ಟ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಕಾರ್ ಯೂನಸ್, ‘ಐಪಿಎಲ್ ಒಂದು ಮೆಗಾ ಈವೆಂಟ್. ಅನೇಕ ದೊಡ್ಡ ಕಂಪನಿಗಳು ತಮ್ಮ ಹಣವನ್ನು ಇಲ್ಲಿ ಹೂಡಿಕೆ ಮಾಡುತ್ತವೆ.  ಇದರಿಂದಾಗಿ ಆಟಗಾರರ ಮೇಲೆ ಉತ್ತಮ ಆಟ ಪ್ರದರ್ಶಿಸಲೇಬೇಕಾದ ಒತ್ತಡ ಬೀಳುತ್ತದೆ. ಹೀಗಾಗಿ ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದಾಗ ಅವರ ಮೇಲೆ ಹೆಚ್ಚುವರಿ ಒತ್ತಡ ಬೀಳುವುದರಿಂದ ಮುಕ್ತವಾಗಿ ಆಡಲು ಸಾಧ್ಯವಾಗುತ್ತಿಲ್ಲ. ರಾಹುಲ್, ರೋಹಿತ್ ಮತ್ತು ಕೊಹ್ಲಿ ಟಿ20ಯಲ್ಲಿ ಶತಕ ಬಾರಿಸಿರುವುದನ್ನು ನೀವು ನೋಡುತ್ತೀರಿ ಆದರೆ ಅದು ಇನ್ನೂ ಫಲ ನೀಡಲಿಲ್ಲ ಎಂದಿದ್ದಾರೆ.

ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕು

ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕೇ ಎಂದು ವಾಸಿಂ ಅಕ್ರಮ್, ಶೋಯೆಬ್ ಮಲಿಕಾ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲಿಕ್, ‘ಭಾರತದ ಯುವ ಆಟಗಾರರು ಐಪಿಎಲ್‌ನಿಂದ ಸಾಕಷ್ಟು ಮಾನ್ಯತೆ ಪಡೆಯುತ್ತಾರೆ. ಅವರು ದೊಡ್ಡ ಆಟಗಾರರ ಜೊತೆಗೆ ಆಡುತ್ತಾರೆ. ಆದಾಗ್ಯೂ, ವಿದೇಶಿ ಲೀಗ್‌ಗಳಲ್ಲಿ ಆಡುವುದು ವಿಭಿನ್ನವಾಗಿ ಸಹಾಯ ಮಾಡುತ್ತದೆ. ಇದರಿಂದ ವಿಭಿನ್ನ ಪರಿಸ್ಥಿತಿಗಳ ಬಗ್ಗೆ ಯುವ ಆಟಗಾರರಲ್ಲಿ ಅರಿವು ಮೂಡಲಿದೆ. ನೀವು ಲೀಗ್‌ನಲ್ಲಿ ವಿದೇಶಿ ಆಟಗಾರನಾಗಿ ಆಡಿದಾಗ, ನೀವು ವಿಭಿನ್ನ ಜವಾಬ್ದಾರಿಯನ್ನು ಅನುಭವಿಸುತ್ತೀರಿ ಎಂದು ಮಲಿಕ್ ಹೇಳಿದ್ದಾರೆ. ಆದಾಗ್ಯೂ, ಪಾಕ್ ಮಾಜಿ ಆಟಗಾರರ ಈ ಹೇಳಿಕೆಗಳನ್ನು ಟೀಂ ಇಂಡಿಯಾ ಅಭಿಮಾನಿಗಳು ಅಸಂಬದ್ಧವೆಂದಿದ್ದಾರೆ. ಏಕೆಂದರೆ ಪಾಕಿಸ್ತಾನವೇ PSL ಟಿ20 ಲೀಗ್​ ಅನ್ನು ಆಯೋಜಿಸುತ್ತದೆ. ಹೀಗಾಗಿ ಹಿರಿಯ ಆಟಗಾರರು ಅಸೂಯೆಯಿಂದ ಹೀಗೆ ಹೇಳುತ್ತಿದ್ದಾರೆ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ವಾದವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Fri, 11 November 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ