India Test squad: ಟೀಮ್ ಇಂಡಿಯಾದಲ್ಲಿ ನಾಲ್ವರು ಸ್ಪಿನ್ನರ್, ಮೂವರು ವಿಕೆಟ್ ಕೀಪರ್​ಗಳು

India vs England: ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

India Test squad: ಟೀಮ್ ಇಂಡಿಯಾದಲ್ಲಿ ನಾಲ್ವರು ಸ್ಪಿನ್ನರ್, ಮೂವರು ವಿಕೆಟ್ ಕೀಪರ್​ಗಳು
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 13, 2024 | 6:21 AM

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು (Team India) ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡದಲ್ಲಿ ನಾಲ್ವರು ಸ್ಪಿನ್ನರ್​ಗಳಿದ್ದರೆ, ಮೂವರು ವಿಕೆಟ್ ಕೀಪರ್​​ಗಳು ಸ್ಥಾನ ಪಡೆದಿದ್ದಾರೆ. ಹಾಗೆಯೇ ಇಬ್ಬರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ. ಇಲ್ಲಿ ಪರಿಪೂರ್ಣ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನ ಪಡೆದರೆ, ಸ್ಪಿನ್ ಆಲ್​ರೌಂಡರ್​ಗಳಾಗಿ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅದರಂತೆ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೂವರು ವಿಕೆಟ್ ಕೀಪರ್​ಗಳು:

16 ಸದಸ್ಯರ ಈ ಬಳಗದಲ್ಲಿ ಮೂವರು ವಿಕೆಟ್ ಕೀಪರ್​ಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕೆಎಲ್ ರಾಹುಲ್, ಕೆಎಸ್ ಭರತ್ ಹಾಗೂ ಧ್ರುವ್ ಜುರೇಲ್ ವಿಕೆಟ್ ಕೀಪರ್-ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನಪ ಪಡೆದಿದ್ದಾರೆ. ಇಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್​ ಧ್ರುವ್ ಜುರೇಲ್ ಇದೇ ಮೊದಲ ಬಾರಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅವೇಶ್ ಖಾನ್​ಗೂ ಅವಕಾಶ:

ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಮ್ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅಲಭ್ಯರಾಗಿದ್ದಾರೆ. ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶಮಿ 3ನೇ ಟೆಸ್ಟ್ ವೇಳೆಗೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಅವರ ಬದಲಿಗೆ ಯುವ ವೇಗಿ ಅವೇಶ್ ಖಾನ್ ಚೊಚ್ಚಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ-ಇಂಗ್ಲೆಂಡ್ ಸರಣಿ ಯಾವಾಗ ಶುರು?

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನು 2ನೇ ಪಂದ್ಯಕ್ಕೆ ವಿಶಾಖಪಟ್ಟಣಂನಲ್ಲಿರುವ ವೈಎಸ್​ಆರ್​ ಸ್ಟೇಡಿಯಂ ಆತಿಥ್ಯವಹಿಸಿದರೆ, 3ನೇ ಪಂದ್ಯವು ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ಪಂದವು ರಾಂಚಿಯ ಜೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಪಂದ್ಯಕ್ಕೆ ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
  2. ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
  3. ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್​ಕೋಟ್)
  4. ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
  5. ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ).

ಇದನ್ನೂ ಓದಿ: IPL 2024: RCB ಆಟಗಾರನಿಗೆ ಗಂಭೀರ ಗಾಯ: ಐಪಿಎಲ್​ಗೆ ಡೌಟ್..!

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ