ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

Team India: ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಈ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ದುಬೈಗೆ ತೆರಳಲಿದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ
Team India
Follow us
ಝಾಹಿರ್ ಯೂಸುಫ್
|

Updated on:Jan 07, 2025 | 3:01 PM

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 8 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ 5 ಟಿ20 ಮತ್ತು 3 ಏಕದಿನ ಪಂದ್ಯಳನ್ನಾಡಲಾಗುತ್ತದೆ. ಅತ್ತ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಲಿರುವ ಆಟಗಾರರಿಗೆ ಟಿ20 ಸರಣಿ ವೇಳೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದ್ದು, ಈ ಬದಲಾವಣೆಯ ಪ್ರಮುಖಾಂಶಗಳು ಈ ಕೆಳಗಿನಂತಿದೆ….

  • ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಜಸ್​ಪ್ರೀತ್ ಬುಮ್ರಾಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ.
  • ಮೊಹಮ್ಮದ್ ಸಿರಾಜ್​ಗೆ 5 ಪಂದ್ಯಗಳ ಟಿ20 ಸರಣಿ ವೇಳೆ ರೆಸ್ಟ್ ನೀಡಲು ನಿರ್ಧರಿಸಲಾಗಿದೆ.
  • ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.
  • ಏಕದಿನ ಸರಣಿ ವೇಳೆ ಮೊಹಮ್ಮದ್ ಸಿರಾಜ್ ಕೂಡ ತಂಡಕ್ಕೆ ಆಗಮಿಸಲಿದ್ದಾರೆ.
  • ಮೊಹಮ್ಮದ್ ಶಮಿ ಅವರನ್ನು ಫಿಟ್​ನೆಸ್ ಟೆಸ್ಟ್​ ಬಳಿಕ ಏಕದಿನ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
  • ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  • ಯಶಸ್ವಿ ಜೈಸ್ವಾಲ್ ಅವರನ್ನು ಭಾರತ ಏಕದಿನ ತಂಡದ ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
  • ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಏಕದಿನ ತಂಡಕ್ಕೆ ಪರಿಗಣಿಸಲು ಬಿಸಿಸಿಐ ಆಯ್ಕೆ ಸಮಿತಿ ಚರ್ಚಿಸಿದೆ.
  • ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿರುವ ಬಹುತೇಕ ಆಟಗಾರರು ಚಾಂಪಿಯನ್ಸ್​ ಟ್ರೋಫಿಗೂ ಆಯ್ಕೆಯಾಗಲಿದ್ದಾರೆ.
  • ಜನವರಿ 12 ರಂದು ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧದ ಸರಣಿ ಯಾವಾಗ ಶುರು?

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 22 ರಿಂದ ಆರಂಭವಾಗಲಿದ್ದು, ಮೊದಲಿಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ಮೂರು ಮ್ಯಾಚ್​​ಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

  • 1ನೇ T20I: ಜನವರಿ 22 (ಚೆನ್ನೈ)
  • 2ನೇ T20I: ಜನವರಿ 25 (ಕೋಲ್ಕತ್ತಾ)
  • 3ನೇ T20I: ಜನವರಿ 28 (ರಾಜ್‌ಕೋಟ್)
  • 4ನೇ T20I: ಜನವರಿ 31 (ಪುಣೆ)
  • 5ನೇ T20I: ಫೆಬ್ರವರಿ 2 (ಮುಂಬೈ)

ಇದನ್ನೂ ಓದಿ: ಅವರಿಲ್ಲ, ಇವರಿಲ್ಲ… ಸಿರಾಜ್ ಬೆನ್ನು ಮೂಳೆ ಮುರಿಯುತ್ತಿರುವ ಬಿಸಿಸಿಐ

  • 1ನೇ ODI: ಫೆಬ್ರವರಿ 6 (ನಾಗ್ಪುರ)
  • 2ನೇ ODI: ಫೆಬ್ರವರಿ 9 (ಕಟಕ್)
  • 3ನೇ ODI: ಫೆಬ್ರವರಿ 12 (ಅಹಮದಾಬಾದ್)

ಚಾಂಪಿಯನ್ಸ್ ಟ್ರೋಫಿ ಯಾವಾಗ ಆರಂಭ?

2025ರ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಆರಂಭವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದ್ದು, ಉಳಿದ ಮ್ಯಾಚ್​ಗಳಿಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ. ಈ ಟೂರ್ನಿಯ ಭಾರತದ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

  • ಭಾರತ vs ಬಾಂಗ್ಲಾದೇಶ್: ಫೆಬ್ರವರಿ 20 (ದುಬೈ)
  • ಭಾರತ vs ಪಾಕಿಸ್ತಾನ್: ಫೆಬ್ರವರಿ 23 (ದುಬೈ)
  • ಭಾರತ vs ನ್ಯೂಝಿಲೆಂಡ್: ಮಾರ್ಚ್ 2 (ದುಬೈ)
  • ಸೆಮಿಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 4 (ದುಬೈ)
  • ಫೈನಲ್ (ಅರ್ಹತೆ ಪಡೆದರೆ): ಮಾರ್ಚ್ 9 (ದುಬೈ)

Published On - 2:57 pm, Tue, 7 January 25