ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್

Suryakumar Yadav Sacked: ಕಳಪೆ ಫಾರ್ಮ್‌ನಿಂದಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವ ಮತ್ತು ತಂಡದಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಿದೆ. 2026ರ ಐಪಿಎಲ್ ಹಾಗೂ ಇತ್ತೀಚಿನ ಪಂದ್ಯಗಳಲ್ಲಿ ಅವರ ಪ್ರದರ್ಶನ ತೀರ ಕಳಪೆಯಾಗಿದ್ದು, ಗೌತಮ್ ಗಂಭೀರ್ ಜೊತೆ ಚರ್ಚಿಸಿ ಹೊಸ ನಾಯಕನನ್ನು ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಆಟಗಾರರ ಹೆಸರು ನಾಯಕತ್ವಕ್ಕೆ ಕೇಳಿಬರುತ್ತಿದೆ.

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್
Suryakumar Yadav

Updated on: Jun 03, 2026 | 10:10 PM

2026 ರ ಐಪಿಎಲ್‌ನಲ್ಲಿ (IPL 2026) ಕಳಪೆ ಪ್ರದರ್ಶನದ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪ್ರಸ್ತುತ ಮುಂಬೈ ಟಿ20 ಲೀಗ್​ನಲ್ಲಿ ಆಡುತ್ತಿದ್ದಾರೆ. ಈ ಲೀಗ್​ನಲ್ಲೂ ಸೂರ್ಯನಿಗೆ ಉತ್ತಮ ಆರಂಭ ಸಿಕ್ಕಿಲ್ಲ. ಇದೆಲ್ಲದರ ನಡುವೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಅವರನ್ನು ಭಾರತ ಟಿ20 ತಂಡದಿಂದಲೂ ಕೈಬಿಡಲಾಗುತ್ತಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಾಯಕತ್ವದ ಜೊತೆಗೆ ತಂಡದಿಂದಲೂ ಕೋಕ್

ಭಾರತ ಟಿ20 ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ತಂಡಕ್ಕೆ ಹೊಸ ನಾಯಕನ ಹುಡುಕಾಟ ಶುರು ಮಾಡಿದೆ. ಕೋಚ್ ಗೌತಮ್ ಗಂಭೀರ್, ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿದ ನಂತರ ಹೊಸ ಟಿ20 ನಾಯಕನನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ‘ಸೂರ್ಯ ಅವರ ನಾಯಕತ್ವದಲ್ಲಿ ತಂಡವು ಟಿ20 ವಿಶ್ವಕಪ್ ಗೆದ್ದಿದ್ದರೂ, ಅವರ ವೈಯಕ್ತಿಕ ಫಾರ್ಮ್ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳಿಗೆ ನಿರ್ಧರಿಸಲಾಗಿದೆ. ಹೀಗಾಗಿ ಸೂರ್ಯ ಅವರನ್ನು ಟಿ20 ತಂಡದಿಂದ ಕೈಬಿಡಲಾಗುವುದು. ಶೀಘ್ರದಲ್ಲೇ ಈ ನಿರ್ಧಾರವನ್ನು ಸೂರ್ಯನಿಗೆ ತಿಳಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯ

ಸೂರ್ಯಕುಮಾರ್ ಯಾದವ್ 2024 ರಿಂದ ನಾಯಕನಾಗಿ ಭಾರತವನ್ನು ಸತತ ಟಿ20 ಸರಣಿ ಗೆಲುವುಗಳಿಗೆ ಮುನ್ನಡೆಸಿದ್ದಾರೆ. ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಯಿತು. ಆದಾಗ್ಯೂ, ಆಟಗಾರನಾಗಿ ಸೂರ್ಯ ಅವರ ಫಾರ್ಮ್​ ಅತ್ಯಂತ ಕಳಪೆಯಾಗಿತ್ತು. 2021, 2022 ಮತ್ತು 2023 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸೂರ್ಯ, 2024 ಮತ್ತು 2025 ರಲ್ಲಿ, ತೀರ ಕಳಪೆ ಪ್ರದರ್ಶನ ನೀಡಿದ್ದಾರೆ. 2026 ರಲ್ಲಿ 14 ಟಿ20 ಪಂದ್ಯಗಳನ್ನಾಡಿದ್ದ ಸೂರ್ಯ, 44 ರ ಸರಾಸರಿಯಲ್ಲಿ 484 ರನ್ ಗಳಿಸಿದ್ದರು. ಹಾಗೆಯೇ ಐಪಿಎಲ್ 2026 ರಲ್ಲಿ ಅವರ ಪ್ರದರ್ಶನವು ವಿಶೇಷವಾಗಿರಲಿಲ್ಲ. ಆಡಿದ 13 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ ಕೇವಲ 270 ರನ್ ಮಾತ್ರ ಕಲೆಹಾಕಿದ್ದರು.

ತಂದೆಯಾಗುವ ಸಂತಸದಲ್ಲಿ ಸೂರ್ಯಕುಮಾರ್; ಬೇಬಿ ಶವರ್ ವಿಡಿಯೋ ವೈರಲ್

ಸೂರ್ಯನ ಬದಲಿಗೆ ಯಾರಿಗೆ ನಾಯಕತ್ವ?

ಪ್ರಸ್ತುತ ಟಿ20 ತಂಡದ ನಾಯಕತ್ವಕ್ಕೆ ಶ್ರೇಯಸ್ ಅಯ್ಯರ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಯ್ಯರ್ ಅವರ ಜೊತೆಗೆ, ಶುಭಮನ್ ಗಿಲ್, ಅಕ್ಷರ್ ಪಟೇಲ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರ ಹೆಸರುಗಳನ್ನು ಸಹ ಟಿ20 ತಂಡದ ನಾಯಕತ್ವಕ್ಕೆ ಚರ್ಚಿಸಲಾಗುತ್ತಿದೆ. ಇದರಲ್ಲಿ ಶ್ರೇಯಸ್ ಅಯ್ಯರ್​ಗೆ ಕೊಂಚ ಮೇಲುಗೈ ಸಾಧಿಸಿದ್ದಾರೆ. ಏಕೆಂದರೆ ನಾಯಕತ್ವದ ಅನುಭವ ಹೊಂದಿರುವ ಅಯ್ಯರ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು. ಹಾಗೆಯೇ ಪಂಜಾಬ್ ತಂಡವನ್ನು ಫೈನಲ್​ಗೇರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Wed, 3 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us