T20 World Cup 2024: ಈ ದಿನದಂದು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ..!
T20 World Cup 2024: ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಮೇ 1 ಕೊನೆಯ ಗಡುವಾಗಿರುವುದರಿಂದ ಎಲ್ಲಾ ತಂಡಗಳು ಇದರೊಳಗೆ ತಂಡವನ್ನು ಪ್ರಕಟಿಸಬೇಕಾಗಿದೆ. ಅದರಂತೆ ಟೀಮ್ ಇಂಡಿಯಾ ಕೂಡ ಏಪ್ರಿಲ್ 27 ಅಥವಾ ಏಪ್ರಿಲ್ 28 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಪ್ರಸ್ತುತ ಭಾರತದಲ್ಲಿ 17ನೇ ಆವೃತ್ತಿಯ ಐಪಿಎಲ್ (IPL 2024) ಜ್ವರ ಜೋರಾಗಿದೆ. ಈಗಾಗಲೇ ಟೂರ್ನಿಯ ಅರ್ಧಪಯಣ ಮುಗಿದಿದೆ. ಉಳಿದರ್ಧದ ಪಯಣ ಕೂಡ ಬಹಳ ರೋಚಕತೆ ಸೃಷ್ಟಿಸುವುದು ಖಚಿತ. ಈ ನಡುವೆ 2024 ರ ಟಿ20 ವಿಶ್ವಕಪ್ (T20 World Cup 2024) ಬಗ್ಗೆಯೂ ಚರ್ಚೆ ಶುರುವಾಗಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದೆ. ಈ ಚುಟುಕು ಸಮರಕ್ಕಾಗಿ ಟೀಂ ಇಂಡಿಯಾವನ್ನು (Team India) ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದ ಆಯ್ಕೆಯು ಏಪ್ರಿಲ್ 27 ಅಥವಾ 28 ರಂದು ನಡೆಯಲಿದೆ. ಈ ಎರಡು ದಿನಾಂಕಗಳ ಪೈಕಿ ಒಂದರಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಭಾರತದ ಆಯ್ಕೆಗಾರರು ಕುಳಿತು ಟೀಂ ಇಂಡಿಯಾವನ್ನು ಆಯ್ಕೆ ಮಾಡುತ್ತಾರೆ ಎಂಬ ಸುದ್ದಿ ಇದೆ.
ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಮೇ 1 ಕೊನೆಯ ಗಡುವಾಗಿರುವುದರಿಂದ ಎಲ್ಲಾ ತಂಡಗಳು ಇದರೊಳಗೆ ತಂಡವನ್ನು ಪ್ರಕಟಿಸಬೇಕಾಗಿದೆ. ಅದರಂತೆ ಟೀಮ್ ಇಂಡಿಯಾ ಕೂಡ ಏಪ್ರಿಲ್ 27 ಅಥವಾ ಏಪ್ರಿಲ್ 28 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಏಕೆಂದರೆ ಆ ದಿನಾಂಕದಂದು ನಾಯಕ ರೋಹಿತ್ ಶರ್ಮಾ ಕೂಡ ದೆಹಲಿಯಲ್ಲಿರುತ್ತಾರೆ. ಐಪಿಎಲ್ 2024 ರ ವೇಳಾಪಟ್ಟಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಪಂದ್ಯವು ಏಪ್ರಿಲ್ 27 ರಂದು ದೆಹಲಿಯಲ್ಲಿ ನಡೆಯಲ್ಲಿದೆ. ಹೀಗಾಗಿ ಅಂದೇ ರೋಹಿತ್, ಆಯ್ಕೆಗಾರರೊಂದಿಗೆ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಈ ದಿನಾಂಕದಂದು ಟೀಂ ಇಂಡಿಯಾ ಪ್ರಕಟ
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಈ ಆಯ್ಕೆ ಸಭೆಗಾಗಿ ಸ್ಪೇನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಏಪ್ರಿಲ್ 30 ರಂದು ಲಕ್ನೋ ಸೂಪರ್ ಜೈಂಟ್ಸ್ ಜೊತೆ ಮುಂಬೈ ಇಂಡಿಯನ್ಸ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 27 ಅಥವಾ 28 ರ ದಿನಾಂಕವನ್ನು ತಂಡದ ಆಯ್ಕೆಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಅವಧಿಯಲ್ಲಿ ಆಯ್ಕೆಗಾರರ ಜೊತೆಗೆ ತಂಡದ ನಾಯಕ ರೋಹಿತ್ ಕೂಡ ದೆಹಲಿಯಲ್ಲಿರುತ್ತಾರೆ.
ಈ 10 ಆಟಗಾರರ ಆಯ್ಕೆ ಖಚಿತ
ಈಗ ಪ್ರಶ್ನೆ ಏನೆಂದರೆ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಯಾವ ಆಟಗಾರರನ್ನು ಆಯ್ಕೆ ಮಾಡಬಹುದು? ಎಂಬುದು. ಆದರೆ ಈಗಾಗಲೇ ಕನಿಷ್ಠ 10 ಆಟಗಾರರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ 10 ಆಟಗಾರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಕುಲ್ದೀಪ್ ಯಾದನ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹೆಸರುಗಳಿವೆ.
ಹಾರ್ದಿಕ್ ಪಾಂಡ್ಯ ಬಗ್ಗೆ ಸಸ್ಪೆನ್ಸ್
ಆದರೆ ಈ ಹೆಸರುಗಳ ನಡುವೆ ಹಾರ್ದಿಕ್ ಪಾಂಡ್ಯ ಹೆಸರನ್ನು ಸೇರಿಸಲಾಗಿಲ್ಲ. ಏಕೆಂದರೆ ಅವರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಹಾರ್ದಿಕ್ ಐಪಿಎಲ್‌ನಲ್ಲಿ ಬೌಲಿಂಗ್ ಮಾಡಿದರೆ ಮಾತ್ರ ಅವರನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Sat, 20 April 24
