ಟಿ20 ಪಂದ್ಯದಲ್ಲಿ 8 ವಿಕೆಟ್; ವಿಶ್ವ ದಾಖಲೆ ಸೃಷ್ಟಿಸಿದ ಭೂತಾನ್ ಸ್ಪಿನ್ನರ್
Sonam Yeshey Sets New T20 World Record: ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 8 ವಿಕೆಟ್ ಪಡೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮ್ಯಾನ್ಮಾರ್ ವಿರುದ್ಧದ ಪಂದ್ಯದಲ್ಲಿ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭೂತಾನ್ 82 ರನ್‌ಗಳಿಂದ ಜಯಗಳಿಸಿತು. ಈ ಸಾಧನೆಯು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬೌಲರ್‌ನ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ, ಹಿಂದಿನ 7 ವಿಕೆಟ್ ದಾಖಲೆಯನ್ನು ಮುರಿದಿದೆ.

ಟಿ20 ಪಂದ್ಯವೊಂದರಲ್ಲಿ ಬೌಲರ್ 5 ವಿಕೆಟ್ ಪಡೆದರೆ ಅದು ದೊಡ್ಡ ವಿಷಯ. ಆದರೆ ಅದೇ ಟಿ20 ಪಂದ್ಯದಲ್ಲಿ ಬೌಲರ್ 8 ವಿಕೆಟ್ ಪಡೆದರೆ ಅದೊಂದು ವಿಶ್ವ ದಾಖಲೆ. ಇದೀಗ ಅಂತಹದ್ದೇ ವಿಶ್ವ ದಾಖಲೆಯನ್ನು ಕ್ರಿಕೆಟ್ ಶಿಶು ಭೂತಾನ್ ತಂಡದ ಸ್ಪಿನ್ನರ್ ಒಬ್ಬ ಮಾಡಿದ್ದಾನೆ. ಭೂತಾನ್ ತಂಡದ ಸ್ಪಿನ್ನರ್ ಸೋನಮ್ ಯೆಶೆ (Sonam Yeshey) ಬರೋಬ್ಬರಿ 8 ವಿಕೆಟ್‌ಗಳನ್ನು ಪಡೆದು ಅಂತರರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಲಾ 7 ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು ಮಾತ್ರ ಇದ್ದರು. ಆದರೆ ಈಗ ಸೋನಮ್ ಯೆಶೆ 8 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಭೂತಾನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭೂತಾನ್ ಹಾಗೂ ಮ್ಯಾನ್ಮಾರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭೂತಾನ್ ತಂಡ 127 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮ್ಯಾನ್ಮಾರ್ 56 ಎಸೆತಗಳಲ್ಲಿ ಕೇವಲ 45 ರನ್‌ಗಳಿಗೆ ಆಲೌಟ್ ಆಯಿತು. ಮ್ಯಾನ್ಮಾರ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಭೂತಾನ್ ತಂಡದ ಎಡಗೈ ಸ್ಪಿನ್ನರ್ ಸೋನಮ್ ಯೆಶೆ ಪ್ರಮುಖ ಪಾತ್ರವಹಿಸಿದರು.
Sonam Yeshey – a Bhutanese left-arm spinner – has recorded the best-ever figures in a T20 international.
The 22-year-old took eight wickets in a game against Myanmar. pic.twitter.com/BebxRkWJQ6
— Test Match Special (@bbctms) December 29, 2025
8 ವಿಕೆಟ್ ಕಬಳಿಸಿದ ಸೋನಮ್ ಯೆಶೆ
ಮ್ಯಾನ್ಮಾರ್ ವಿರುದ್ಧದ ಟಿ20 ಪಂದ್ಯದಲ್ಲಿ ಸೋನಮ್ ಯೆಶೆ ಏಕಾಂಗಿಯಾಗಿ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಮೂರನೇ ಓವರ್‌ನಲ್ಲಿ ದಾಳಿಗಿಳಿದ ಸೋನಮ್ ಯೆಶೆ, ಮ್ಯಾನ್ಮಾರ್ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ನಂತರ ಅವರು ಇನ್ನೂ ಮೂರು ವಿಕೆಟ್‌ಗಳನ್ನು ಪಡೆದು, ಮ್ಯಾನ್ಮಾರ್‌ನ ಸಂಪೂರ್ಣ ಇನ್ನಿಂಗ್ಸ್ ಅನ್ನು 50 ರನ್ ತಲುಪುವ ಮೊದಲೇ ಅಂತ್ಯಗೊಳಿಸಿದರು.
IND-W vs SL-W: ಶ್ರೀಲಂಕಾ ವಿರುದ್ಧ ಸತತ 4ನೇ ಟಿ20 ಪಂದ್ಯ ಗೆದ್ದ ಭಾರತ
82 ರನ್‌ಗಳಿಂದ ಗೆದ್ದ ಭೂತಾನ್
ಸೋನಮ್ ಯೆಶೆ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಭೂತಾನ್ 82 ರನ್‌ಗಳಿಂದ ಗೆದ್ದಿತು. ಸೋನಮ್ ಯೆಶೆ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಯಾವುದೇ ಟಿ20 ಪಂದ್ಯದಲ್ಲಿ ಎಂಟು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಯೆಶೆ ಅವರ ಸಾಧನೆಗೆ ಮೊದಲು, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಇಬ್ಬರು ಬೌಲರ್‌ಗಳು ಏಳು ವಿಕೆಟ್ ಪಡೆದಿದ್ದರು. 2023 ರಲ್ಲಿ ಚೀನಾ ವಿರುದ್ಧ ಸಯಾಜ್ರುಲ್ ಇದ್ರಸ್ ಎಂಟು ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ಬಹ್ರೇನ್‌ನ ಅಲಿ ದಾವೂದ್ ಭೂತಾನ್ ವಿರುದ್ಧ 19 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈಗ, ಈ ದಾಖಲೆ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ ಅವರ ಪಾಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Mon, 29 December 25
