ಚಿರತೆಗಳ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಕಾಡುಹಂದಿ: ವಿಡಿಯೋ ವೈರಲ್
ಚಿರತೆಗಳು ಬೇಟೆಗೆ ಹೊಂಚು ಹಾಕಿ ಕುಳಿತರೆ ಮುಗೀತು. ಅವು ಎಂತಹ ಸಂದರ್ಭದಲ್ಲೂ ಗುರಿ ತಪ್ಪುವ ಸಾಧ್ಯತೆ ಬಹಳ ಕಡಿಮೆ. ಆದ್ರೆ ಹೀಗೆ ಬೇಟೆಗೆ ಕಾದು ಕುಳಿತಿದ್ದ ಚಿರತೆಗಳಿಗೆ ಕಾಡು ಹಂದಿಯೊಂದು ಚಳ್ಳೆಹಣ್ಣು ತಿನ್ನಿಸಿದೆ. ಚಿರತೆಗೇ ಗುದ್ದಿ, ಹಂದಿ ಎಸ್ಕೇಪ್ ಆಗಿದ್ದು ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರು, ಫೆಬ್ರವರಿ 11: ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಹಂದಿ ಎಸ್ಕೇಪ್ ಆಗಿರುವ ಪ್ರಸಂಗ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡು ಹಂದಿ ಬೇಟೆಗೆ ಎರಡು ಚಿರತೆಗಳು ಹೊಂಚುಹಾಕಿ ಕುಳಿತಿದ್ದವು. ಒಂದು ಚಿರತೆ ಮರವೇರಿದ್ದರೆ ಮತ್ತೊಂದು ಕೆಳಭಾಗದಿಂದಲೇ ಅಟ್ಯಾಕ್ಗೆ ರೆಡಿ ಆಗಿತ್ತು. ಆದರೆ ಚಿರತೆಗೇ ಗುದ್ದಿ ಕಾಡುಹಂದಿ ಎಸ್ಕೇಪ್ ಆಗಿದೆ. ಹಂದಿ ಮತ್ತು ಚಿರತೆ ಕಾದಾಟದ ದೃಶ್ಯವೀಗ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು

