AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ ವಿರುದ್ಧ ಸ್ಪಿನ್ನಾಸ್ತ್ರ ಬಳಸಿದ ಪಾಕಿಸ್ತಾನ್

ಅಮೆರಿಕ ವಿರುದ್ಧ ಸ್ಪಿನ್ನಾಸ್ತ್ರ ಬಳಸಿದ ಪಾಕಿಸ್ತಾನ್

ಝಾಹಿರ್ ಯೂಸುಫ್
|

Updated on: Feb 11, 2026 | 9:59 AM

Share

PAK vs USA: ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವನ್ನು ಕಟ್ಟಿ ಹಾಕಲು ಪಾಕಿಸ್ತಾನ್ ಸ್ಪಿನ್ನಾಸ್ತ್ರ ಬಳಸಿದ್ದು ವಿಶೇಷ. ಅಂದರೆ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ 20 ಓವರ್​ಗಳಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ಗಳಿಂದಲೇ ಹಾಕಿಸಿದ್ದರು. ಈ ಮೂಲಕ ಯುಎಸ್​ಎ ತಂಡವನ್ನು 20 ಓವರ್​ಗಳಲ್ಲಿ 158 ರನ್​ಗಳಿಗೆ ನಿಯಂತ್ರಿಸುವಲ್ಲಿ ಪಾಕಿಸ್ತಾನ್ ಯಶಸ್ವಿಯಾಗಿದ್ದಾರೆ.

ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಕೊಲಂಬೊದ ಎಸ್​ಎಸ್​ಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡದ ನಾಯಕ ಮೊನಾಂಕ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪರ ಸಾಹಿಬ್​ಝಾದ ಫರ್ಹಾನ್ 41 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್​ ಒಳಗೊಂಡಂತೆ ಒಟ್ಟು 73 ರನ್ ಚಚ್ಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವನ್ನು ಕಟ್ಟಿ ಹಾಕಲು ಪಾಕಿಸ್ತಾನ್ ಸ್ಪಿನ್ನಾಸ್ತ್ರ ಬಳಸಿದ್ದು ವಿಶೇಷ. ಅಂದರೆ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ 20 ಓವರ್​ಗಳಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ಗಳಿಂದಲೇ ಹಾಕಿಸಿದ್ದರು. ಈ ಮೂಲಕ ಯುಎಸ್​ಎ ತಂಡವನ್ನು 20 ಓವರ್​ಗಳಲ್ಲಿ 158 ರನ್​ಗಳಿಗೆ ನಿಯಂತ್ರಿಸುವಲ್ಲಿ ಪಾಕಿಸ್ತಾನ್ ಯಶಸ್ವಿಯಾಗಿದ್ದಾರೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು ಟಿ20 ಪಂದ್ಯದಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ನಿಂದ ಹಾಕಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ನರ್​ಗಳಿಂದ 18 ಓವರ್​ಗಳನ್ನು ಮಾಡಿಸಲಾಗಿತ್ತು. ಇದೀಗ 14 ವರ್ಷಗಳ ಬಳಿಕ ಮತ್ತೊಮ್ಮೆ ಪಾಕ್ ತಂಡವು ಸ್ಪಿನ್ನಾಸ್ತ್ರ ಪ್ರಯೋಗಿಸಿದ್ದಾರೆ. ಈ ಸ್ಪಿನ್ನಾಸ್ತ್ರದ ಮೂಲಕ ಯುಎಸ್​ಎ ವಿರುದ್ಧ 32 ರನ್​ಗಳ ಜಯ ಸಾಧಿಸಿದೆ.