ಜನ ಒಳಗಿದ್ದಾಗಲೇ ಪುರಸಭೆ ಕಟ್ಟಡಕ್ಕೆ ಬೀಗ ಜಡಿದು ಹೋದ ನೌಕರ: ಸಿಬ್ಬಂದಿ ಒಳಗೇ ಲಾಕ್!
ಸಿಬ್ಬಂದಿ ಒಳಗೆ ಕೆಲಸ ಮಾಡುತ್ತಿದ್ದಂತೆಯೇ ಪುರಸಭೆ ಕಟ್ಟಡಕ್ಕೆ ನೌಕರ ಬೀಗ ಜಡಿದು ಹೋದ ಘಟನೆ ಉಡುಪಿ ಜಿಲ್ಲೆಯ ಕಾಪು ಪುರಸಭೆ ಕಟ್ಟಡದಲ್ಲಿ ಮಂಗಳವಾರ ಸಂಜೆ ನಡೆದಿದೆ. ನಿಯಮಿತವಾಗಿ ಬೀಗ ಹಾಕುವ ಸಿಬ್ಬಂದಿ ರಜೆ ಇದ್ದುದರಿಂದ ಅಚಾತುರ್ಯ ನಡೆದಿದೆ ಎನ್ನಲಾಗಿದೆ. ಸದ್ಯ, ಸಿಬ್ಬಂದಿ ಒಳಗೆ ಲಾಕ್ ಆಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಉಡುಪಿ, ಫೆಬ್ರವರಿ 11: ಉಡುಪಿ ಜಿಲ್ಲೆಯ ಕಾಪು ಪುರಸಭೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಜನಾ ಪ್ರಾಧಿಕಾರದ ಸಿಬ್ಬಂದಿಯನ್ನು ಕಚೇರಿ ಒಳಗೆಯೇ ಲಾಕ್ ಮಾಡಿದ ಅಚಾತುರ್ಯ ಮಂಗಳವಾರ ಸಂಜೆ ನಡೆದಿದೆ. ಇದರಿಂದಾಗಿ ಕೆಲಕಾಲ ಆತಂಕ ಹಾಗೂ ಗೊಂದಲ ಉಂಟಾಯಿತು. ಕಾಪು ಪುರಸಭೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಲು ಒಂದೇ ದ್ವಾರ ಇದ್ದು, ಪ್ರತಿದಿನ ಸಂಜೆ 5.30ರಿಂದ 6 ಗಂಟೆಯೊಳಗೆ ಪುರಸಭೆ ಸಿಬ್ಬಂದಿ ಬಾಗಿಲಿಗೆ ಬೀಗ ಹಾಕುವ ಪದ್ಧತಿ ಇದೆ. ಸಾಮಾನ್ಯವಾಗಿ ಬೀಗ ಹಾಕುವ ಮೊದಲು ಒಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತದೆ.
ಆದರೆ, ನಿಯಮಿತವಾಗಿ ಬೀಗ ಹಾಕುವ ನೌಕರ ಮಂಗಳವಾರ ಅನಾರೋಗ್ಯದಿಂದ ರಜೆ ಮಾಡಿದ್ದ ಹಿನ್ನೆಲೆ ಮತ್ತೊಬ್ಬ ಸಿಬ್ಬಂದಿ ಬೀಗ ಹಾಕಿದ್ದಾನೆ. ಈ ವೇಳೆ ಪ್ರಥಮ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಯೋಜನಾ ಪ್ರಾಧಿಕಾರದ ಸಿಬ್ಬಂದಿ ಇರುವುದನ್ನು ಗಮನಿಸದೆ ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದೆ. ಕೆಲಸ ಮುಗಿಸಿ ಹೊರಬರಲು ಬಂದ ಸಿಬ್ಬಂದಿ ಮುಖ್ಯದ್ವಾರದ ಬಳಿ ಬೀಗ ಹಾಕಿರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ, ಪುರಸಭೆ ಮುಖ್ಯಾಧಿಕಾರಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪುರಸಭೆ ನೌಕರರು ಸ್ಥಳಕ್ಕೆ ಬಂದು ಬೀಗ ತೆರೆಯುವ ಮೂಲಕ ಒಳಗಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದರು.
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

