Horoscope Today 30 December: ಇಂದು ಈ ರಾಶಿಯವರಿಗೆ ಪ್ರೇಮದಲ್ಲಿ ಅತಂತ್ರ ಸ್ಥಿತಿಯಿಂದ ದುಃಖ
ಶಾಲಿವಾಹನ ಶಕ 1948ರ ಮಂಗಳವಾರದ ಮೀನ ಮತ್ತು ವೃಷಭ ರಾಶಿಫಲ ಇಲ್ಲಿದೆ. ಇಂದು ನಿಮ್ಮ ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ಯಾವ ಬದಲಾವಣೆಗಳು ಬರಬಹುದು ಎಂದು ತಿಳಿಯಿರಿ. ಅಂತಃಪ್ರಜ್ಞೆ ಬಲಪಡಿಸಿ, ಆರ್ಥಿಕ ವಿಚಾರಗಳಲ್ಲಿ ಎಚ್ಚರ ವಹಿಸಿ. ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸವಾಲುಗಳನ್ನು ಎದುರಿಸಲು ಪರಿಹಾರಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ದಿನವನ್ನು ಉತ್ತಮಗೊಳಿಸಲು ಜಪ, ಧ್ಯಾನ ಸಹಕಾರಿ.

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಮಂಗಳವಾರ ವಿಚಿತ್ರ ಸ್ಫುರಣೆ, ಲೌಕಿಕ ಸುಖ, ಪದಚ್ಯುತಿ, ದೇಹಾರೋಗ್ಯ, ಹೊಸ ವಸ್ತು ಖರೀದಿ, ಪ್ರೇಮದಿಂದ ಪಾಠ, ಮಕ್ಕಳ ಬೇಸರ, ಅನಿಶ್ಚಿತ ಸವಾಲು, ಸೌಕರ್ಯಕ್ಕೆ ಸೆಣೆಸಾಟ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದಶಮೀ ನಿತ್ಯನಕ್ಷತ್ರ : ಅಶ್ವಿನೀ, ಯೋಗ : ಬ್ರಹ್ಮ, ಕರಣ : ಗರಜ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:16 – 16:40, ಯಮಗಂಡ ಕಾಲ 09:38 – 11:03, ಗುಳಿಕ ಕಾಲ 12:27 – 13:51
ಮೇಷ ರಾಶಿ :
ಇಂದು ಅಂತಃಪ್ರಜ್ಞೆ ಬಲವಾಗಿದ್ದರೆ, ಯಾವುದಕ್ಕೂ ಭೀತಿ ಇರದು. ಉದ್ಯೋಗದಲ್ಲಿ ಗೊಂದಲ ಇದ್ದರೂ ಸರಿಯಾದ ಮಾರ್ಗ ಸಿಗುತ್ತದೆ. ಹಣಕಾಸಿನಲ್ಲಿ ಸಾಲದ ವಿಚಾರಗಳು ಚಿಂತೆಗೆ ಕಾರಣವಾಗಬಹುದು. ಮಕ್ಕಳ ಮೇಲಿಟ್ಟ ಭರವಸೆಯು ಫಲಿಸಬಹುದು. ನಿಮ್ಮವರಿಗೆಂದು ಕೊಡುವ ಸಮಯು ವ್ಯರ್ಥವಾಗುವುದು. ಸಣ್ಣ ಮಟ್ಟಿನ ಸಾಲವನ್ನು ನೀವು ಮಾಡಬೇಕಾದ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಾಯವೂ ಸಿಗದೇಹೋಗಬಹುದು. ನಿರಂತರ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದೆ. ಯಾವ ಬಂಧನಕ್ಕೂ ಒಳಪಡದೇ ಮನಸ್ಸು ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ಸಹಾನುಭೂತಿ ಅಗತ್ಯ. ಆರೋಗ್ಯದಲ್ಲಿ ಕಣ್ಣು ಸಮಸ್ಯೆ ಕಾಣಿಸಿಕೊಳ್ಳುವುದು. ಧ್ಯಾನ, ಜಪ ದಿನಕ್ಕೆ ಶಾಂತಿ ನೀಡುತ್ತದೆ. ಸಿಕ್ಕ ವಸ್ತುವನ್ನು ಸರಿಯಾಗಿ ಬಳಸಿಕೊಳ್ಳಿ. ಯಾವುದನ್ನೇ ಆದರೂ ನಿರಂತರ ಮಾಡಿದರೆ ನಿಮ್ಮ ವಶವಾಗುವುದು. ಭಿನ್ನಾಭಿಪ್ರಾಯಗಳು ಪರಸ್ಪರ ಮಾತುಕತೆಯ ಮೂಲಕ ಪರಿಹಾರವಾಗುವುದು.
ವೃಷಭ ರಾಶಿ :
ವಿಚಾರಗಳಲ್ಲಿ ಕಾರ್ಯಗಳಲ್ಲಿ ಹೊಸತನ ಕಾಣಿಸುವಂತೆ ಮಾಡುವಿರಿ. ಉದ್ಯೋಗದಲ್ಲಿ ತಾಂತ್ರಿಕ ಅಥವಾ ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು. ಹಣಕಾಸಿನ ಸ್ಥಿರತೆಗೆ ಕಲಹವಾಗಲಿದೆ. ಸ್ನೇಹಿತರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬಗ್ಗೆ ಭಿನ್ನಾಭಿಪ್ರಾಯ ಬರಬಹುದು. ಹಿತಶತ್ರುಗಳನ್ನು ನೀವು ನಿಭಾಯಿಸುವುದು ಕಷ್ಟವಾದೀತು. ಅಮೂಲ್ಯ ವಸ್ತುವನ್ನು ನಿರ್ಲಕ್ಷ್ಯದಿಂದ ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಂದ ನೀವು ಸಾಮಾಜಿಕ ಕಾರ್ಯಕ್ಕೆ ಹಣವನ್ನು ಪಡೆಯುವಿರಿ. ನಿಮ್ಮ ಇಷ್ಟದ ಪ್ರಯಾಣಕ್ಕೆ ಕ್ಷಣಗಣನೆ ಮಾಡುವಿರಿ. ಕುಟುಂಬದಲ್ಲಿ ಸ್ವಲ್ಪ ಅಸಮಾಧಾನ ಕಂಡರೂ ಮಾತುಕತೆಯಿಂದ ಪರಿಹಾರ. ಆರೋಗ್ಯದಲ್ಲಿ ನರಕ್ಕೆ ಸಂಬಂಧಿತ ಪೀಡೆ ಉಂಟಾಗಲಿದೆ. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮವರು ನಿಮ್ಮನ್ನು ಬೇರೆ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಪಾತವು ಕೆಲವರಿಗೆ ಇಷ್ಟವಾಗದು. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು. ಇಂದು ಪ್ರಾಬಲ್ಯವನ್ನು ಪ್ರದರ್ಶಿಸುವುದು ಮುಖ್ಯವಾಗಬಹುದು.
ಮಿಥುನ ರಾಶಿ :
ಇಂದಿನ ನಿಮ್ಮ ಸಾಧನೆಗೆ ಶ್ರಮವೇ ಹೆಚ್ಚಾಗಿರುವುದು. ಉದ್ಯೋಗದಲ್ಲಿ ಹಿರಿಯರ ಮೆಚ್ಚುಗೆ ದೊರೆಯುತ್ತದೆ. ಅಮೂಲ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವಾಗ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ನಿಮ್ಮ ಹೊಣೆಗಾರಿಕೆ ಹೆಚ್ಚಾಗಬಹುದು. ಸ್ನೇಹಿತರ ಜೊತೆ ಮೋಜಿನಲ್ಲಿ ಕಾಲ ಕಳೆಯುವಿರಿ. ಮನಸ್ಸು ಬಹಳ ಖಿನ್ನತೆಗೆ ಹೋಗಬಹುದು. ಯಾವ ವಿಚಾರವನ್ನೂ ತೀರ್ಮಾನಿಸಲಾಯಿತು ಆಗದು. ವ್ಯಾಪಾರದಲ್ಲಿ ನಿಮ್ಮ ಜಾಣ್ಮೆಯನ್ನು ತೋರಿಸುವಿರಿ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ತಾಯಿಯ ಆರೋಗ್ಯದ ವ್ಯತ್ಯಾಸದಿಂದ ಚಿಕಿತ್ಸೆ ಕೊಡಿಸಿ. ಸ್ನೇಹಿತರು ನಿಮ್ಮ ಬಳಿ ಧನಸಹಾಯವನ್ನು ಕೇಳಬಹುದು. ಪ್ರಖ್ಯಾತ ವ್ಯಕ್ತಿಗಳ ಭೇಟಿಯಾಗಬಹುದು. ಆರೋಗ್ಯದಲ್ಲಿ ಮೊಣಕಾಲು ಸಮಸ್ಯೆ ಅಧಿಕವಾಗುವ ಸಾಧ್ಯತೆ ಇದೆ. ಶಿಸ್ತಿನ ಜೀವನಶೈಲಿ ಹಾಗೂ ನಿಯಮಿತ ವ್ಯಾಯಾಮ ಲಾಭಕರ. ಸಂಗಾತಿಯ ಇಂಗಿತವನ್ನು ತಿಳಿಯಲು ಪ್ರಯತ್ನಿಸಿ. ಎಂದೋ ಆಡಿದ ನಿಮ್ಮ ಮಾತು ನಿಮಗೇ ಪುನಃ ಬರಬಹುದು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ನಿಮಗಾದ ಒಳ್ಳೆಯದನ್ನು ಮರೆಯುವುದು ಬೇಡ.
ಕರ್ಕಾಟಕ ರಾಶಿ :
ಬಹಳ ದಿನಗಳ ಅನಂತರ ಯಾತ್ರೆ ಮಾಡುವಿರಿ. ಉದ್ಯೋಗದಲ್ಲಿ ಹೊಸ ಯೋಜನೆ ಆರಂಭಿಸಲು ಸೂಕ್ತ ಸಮಯ. ಹಣಕಾಸಿನಲ್ಲಿ ನಿಧಾನವಾದರೂ ಸ್ಥಿರತೆ ಇರುತ್ತದೆ. ಕುಟುಂಬದಲ್ಲಿ ಸಂತೋಷದ ಸುದ್ದಿ ಸಿಗಬಹುದು. ನಿಮ್ಮ ಬಗ್ಗೆ ಸಲ್ಲದ ಆರೋಪಗಳು ಕೇಳಿಬರಬಹುದು. ಭೂಮಿಯ ವ್ಯವಹಾರವನ್ನು ಸಂಕೋಚದಿಂದ ಮಾಡುವುದು ಬೇಡ. ನಿಮ್ಮ ನಿರ್ಧಾರವನ್ನು ಬದಲಿಸದೇ ಮುಂದುವರಿಯಿರಿ. ವಾಹನವನ್ನು ಪರೀಕ್ಷಿಸಿ ಖರೀದಿಸಿ. ಶತ್ರುಗಳು ನಿಮ್ಮ ಮೇಲೆ ಆರೋಪಗಳನ್ನು ಮಾಡಬಹುದು. ಎಲ್ಲದರಲ್ಲಿಯೂ ನೀವೇ ಬುದ್ಧಿವಂತರು ಎಂದು ತೋರಿಸಿಕೊಳ್ಳುವುದು ಬೇಡ. ಅಧಿಕಾರದಿಂದ ಕೂಡಿದ ಮಾತು ನಿಮಗೆ ಪ್ರಯೋಜನವಾಗದು. ಕಾಲು ನೋವಿನಿಂದ ಅನೇಕ ಕೆಲಸಗಳು ಸ್ಥಗಿತವಾಗಲಿವೆ. ಸಂಶೋಧನೆ ಅಧ್ಯಯನ ಕಾರ್ಯಗಳಲ್ಲಿ ಮನಸ್ಸು ತೊಡಗುತ್ತದೆ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಮನೆಯ ಕೆಲಸವು ಬಹಳ ಆಯಾಸವನ್ನು ಕೊಡಬಹುದು. ಕೆಲಸವನ್ನು ಮುಗಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ಕೊನೆಯ ಹಂತದಲ್ಲೂ ವ್ಯತ್ಯಾಸವಾಗಬಹುದು.
ಸಿಂಹ ರಾಶಿ :
ರಹಸ್ಯ ವಿಚಾರಗಳು ಬಹಿರಂಗವಾಗುವ ಸಾಧ್ಯತೆ. ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಅನಿರೀಕ್ಷಿತ ನಷ್ಟ ಸಂಭವಿಸಬಹುದು. ಕುಟುಂಬದಲ್ಲಿ ಹಳೆಯ ವಿಷಯಗಳು ಚರ್ಚೆಗೆ ಬರುತ್ತವೆ. ಇಂದು ಎಲ್ಲದಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡುವಿರಿ. ಗೊತ್ತಿಲ್ಲದೇ ಕೆಟ್ಟ ಮಾರ್ಗವನ್ನು ನೀವು ಅನುಸರಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಇಲ್ಲವೆನಿಸುವುದು. ಹೂಡಿಕೆಗೆ ನಿಮ್ಮದಾದ ತಂತ್ರವನ್ನು ಬಳಸುವಿರಿ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು. ಅಪರಿಚಿತರ ವಿದ್ಯಾಭ್ಯಾಸಕ್ಕೆ ನಿಮ್ಮಿಂದ ಸಹಾಯವು ಸಿಗಲಿದೆ. ಅಧಿಕಾರಿಗಳು ವೃತ್ತಿಯನ್ನು ಸರಿಯಾಗಿ ನಿರ್ವಹಿಸುವರು. ಒತ್ತಾಯಪೂರ್ವಕವಾಗಿ ಯಾರ ಸ್ನೇಹವನ್ನೂ ಬಯಸದಿರಿ. ಆರೋಗ್ಯದಲ್ಲಿ ರಕ್ತದ ಒತ್ತಡದ ನಿಯಂತ್ರಣ ಸಾಧ್ಯವಾಗದು. ಧೈರ್ಯ ಹಾಗೂ ಸಂಯಮ ದಿನವನ್ನು ಸುಗಮಗೊಳಿಸುತ್ತದೆ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕಾದೀತು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.
ಕನ್ಯಾ ರಾಶಿ :
ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ. ಉದ್ಯೋಗದಲ್ಲಿ ಸಹಕಾರದಿಂದ ಕೆಲಸ ಮುನ್ನಡೆಯುತ್ತದೆ. ಹಣಕಾಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚನೆ ಅಗತ್ಯ. ದೂರದ ಊರಿಗೆ ಉದ್ಯೋಗಕ್ಕೆ ಆಹ್ವಾನ ಬರಬಹುದು. ಸ್ನೇಹಿತರಿಂದ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯಮದಲ್ಲಿ ಉಂಟಾದ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ದಾಂಪತ್ಯ ಅಥವಾ ಪ್ರೇಮದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚುತ್ತದೆ. ಆರೋಗ್ಯದಲ್ಲಿ ಕಣ್ಣು ಅಥವಾ ಬೆನ್ನುನೋವು ಸಾಧ್ಯ. ಶಾಂತ ವಾತಾವರಣದಿಂದ ಮನೋಲ್ಲಾಸ. ವಿವಾಹದ ಬಗ್ಗೆ ಇರುವ ಗೊಂದಲವು ನಿವಾರಣೆಯಾಗಲಿದೆ. ಆಗದವರು ನಿಮ್ಮ ರಹಸ್ಯ ವಿಚಾರಗಳನ್ನು ತಿಳಿದುಕೊಳ್ಳಲು ಇಚ್ಛಿಸುವರು. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಕಾಣಿಸಿಕೊಳ್ಳದು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ.
ತುಲಾ ರಾಶಿ :
ವಿವರಗಳಿಗೆ ಹೆಚ್ಚಿನ ಗಮನ ನೀಡಬೇಕಾದ ದಿನ. ಉದ್ಯೋಗದಲ್ಲಿ ಲೆಕ್ಕಪತ್ರ, ದಾಖಲೆ ಕೆಲಸಗಳು ಯಶಸ್ವಿಯಾಗುತ್ತವೆ. ಹಣಕಾಸಿನಲ್ಲಿ ಸಣ್ಣ ವೆಚ್ಚಗಳು ಹೆಚ್ಚಾಗಬಹುದು. ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುವಿರಿ. ಸಂಗಾತಿಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಅಪರೂಪದ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ. ದ್ವಿಚಕ್ರದ ವಾಹನವನ್ನು ಚಲಾಯಿಸುವಾಗ ಜಾಗರೂಕತೆ ಇರಲಿ. ನೀವು ನಡೆದದ್ದೇ ಹಾದಿಯಾದರೂ ಒಮ್ಮೆ ದಾರಿಯು ನೋಡುವುದು ಸೂಕ್ತ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ಕುಟುಂಬದಲ್ಲಿ ಸಣ್ಣ ಚಿಂತೆ ಕಂಡರೂ ಪರಿಹಾರ ಸಿಗುತ್ತದೆ. ಆರೋಗ್ಯದಲ್ಲಿ ನರದ ಸಮಸ್ಯೆ ಸಾಧ್ಯ. ಯೋಗ, ವ್ಯಾಯಾಮದಿಂದ ಶಕ್ತಿ ವೃದ್ಧಿಯಾಗಲಿದೆ. ನಿಮ್ಮ ಬಗ್ಗೆ ಬರುವ ನಕಾರಾತ್ಮಕ ಅಂಶಗಳನ್ನು ಅಲ್ಲಗಳೆಯುವಿರಿ. ಸಹೋದರರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಲಾವಿದರು ಪ್ರಯತ್ನಪೂರ್ವಕವಾಗಿ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ :
ಇಂದು ನಿಮ್ಮ ಒಳ್ಳೆಯ ಸ್ವಭಾವ ಹೊರಹೊಮ್ಮುತ್ತವೆ. ಕೆಲಸದಲ್ಲಿ ಪ್ರಶಂಸೆ ಅಥವಾ ಗೌರವ ಸಿಗುವ ಸಾಧ್ಯತೆ. ಹಣಕಾಸಿನಲ್ಲಿ ಲಾಭದ ಅವಕಾಶ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮೌಲ್ಯ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದೀತು. ನಿಮ್ಮ ಕೆಲಸಕ್ಕೆ ವೃತ್ತಿಯಲ್ಲಿ ಉತ್ತಮ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಉತ್ಸಾಹದ ದಿನವೂ ಆಗಲಿದೆ. ಸ್ನೇಹಿತರಿಗಾಗಿ ಮಾಡಿದ ಸಾಲವು ಕೊನೆಗೆ ನಿಮಗೇ ಸುತ್ತಿಕೊಳ್ಳುವುದು. ಕರಕುಶಲ ಕರ್ಮಕ್ಕೆ ಮೆಚ್ಚುಗೆ ಅಗುವುದು. ಸಂಶೋಧನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಸರ್ಕಾರಿ ಉದ್ಯೋಗಿಗಳ ಸ್ಥಾನವು ಹೆಚ್ಚಾಗಬಹುದು. ಆರೋಗ್ಯದಲ್ಲಿ ಶಕ್ತಿ ಹೆಚ್ಚಿರುತ್ತದೆ. ಅಹಂಕಾರ ತಪ್ಪಿಸಿದರೆ ದಿನ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ಎಲ್ಲ ತಪ್ಪುಗಳಿಗೂ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವಿರಿ. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯುವಿರಿ. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಅನ್ಯ ಕಾರ್ಯವು ಬರಬಹುದು.
ಧನು ರಾಶಿ :
ಭಾವನಾತ್ಮಕ ವಿಚಾರಗಳು ಇಂದು ಮೇಲುಗೈ ಸಾಧಿಸುತ್ತವೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ನಿಧಾನಗತಿ ಇದ್ದರೂ ಆತಂಕ ಬೇಡ. ಹಣಕಾಸಿನಲ್ಲಿ ಉಳಿಸುವ ಮನೋಭಾವ ಉಂಟಾಗುವುದು. ಇಂದು ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವುದು. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಸಂಬಂಧಗಳಲ್ಲಿ ಮೃದುವಾದ ಮಾತು ಅಗತ್ಯ. ಆರೋಗ್ಯದಲ್ಲಿ ಹೊಟ್ಟೆ ಅಥವಾ ಎದೆ ಸಂಬಂಧಿತ ಅಸ್ವಾಸ್ಥ್ಯ ಕಾಡಲಿದೆ. ಆಹಾರದಲ್ಲಿ ಎಚ್ಚರಿಕೆ ವಹಿಸಿ. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಿದ್ದು ಆತಂಕವಾಗಬಹುದು. ನಿಮ್ಮದಲ್ಲದ ವಸ್ತುವನ್ನೂ ನೀವು ಬಿಟ್ಟುಕೊಡಲಾರಿರಿ.
ಮಕರ ರಾಶಿ :
ಸಂವಹನ ಕೌಶಲ್ಯವು ಇಂದು ನಿಮಗೆ ಯಶಸ್ಸು ತರುತ್ತದೆ. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯೋಗವಾಗುತ್ತವೆ. ಉದ್ಯೋಗದಲ್ಲಿ ಬದಲಾವಣೆ ಅಥವಾ ಹೊಸ ಅವಕಾಶದ ಸೂಚನೆ. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಮನೆಯವರ ಮಕ್ಕಳ ಮೇಲೆ ಗಮನ ಇರಿಸುವುದು ಮುಖ್ಯ. ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕಾರ್ಯಗಳಿಗೆ ಪರಿಚಿತರು ಸಹಾಯ ಮಾಡುವರು. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಕುಟುಂಬದಲ್ಲಿ ಸಂತೋಷಕರ ವಾತಾವರಣ. ಆರೋಗ್ಯದಲ್ಲಿ ನಿದ್ರಾಭಂಗ ಸಾಧ್ಯ. ಸಂಜೆ ಸಮಯದಲ್ಲಿ ಮನರಂಜನೆ ಅಥವಾ ಓದು ಲಾಭಕರ. ಸಂಗಾತಿಯ ಆರೋಗ್ಯವು ಕೆಡಲಿದ್ದು ಓಡಾಟ ಮಾಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ತೊಡಕಾಗುವುದು. ಉನ್ನತ ಅಧ್ಯಯನಕ್ಕಾಗಿ ನೀವು ಬೇರೆ ಕಡೆಗೆ ಹೋಗಬೇಕಾದೀತು.
ಕುಂಭ ರಾಶಿ :
ಆರ್ಥಿಕ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಅಚಾತುರ್ಯದಿಂದ ನಷ್ಟ ಸಂಭವಿಸಬಹುದು. ಉದ್ಯೋಗದಲ್ಲಿ ಒತ್ತಡ ಇದ್ದರೂ ಫಲಿತಾಂಶ ಒಳ್ಳೆಯದು. ಕುಟುಂಬದವರ ಸಲಹೆ ಉಪಯುಕ್ತ. ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ಮಕ್ಕಳ ವಿವಾಹವು ವಿಳಂಬವಾಗುತ್ತಿರುವುದು ನಿಮಗೆ ಆತಂಕವಾಗಬಹುದು. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ದಾಂಪತ್ಯದಲ್ಲಿ ಸಹನಶೀಲತೆ ಮುಖ್ಯ. ಆರೋಗ್ಯದಲ್ಲಿ ಜೀರ್ಣಕ್ರಿಯೆ ಸಮಸ್ಯೆ ಸಾಧ್ಯ. ಇಂದು ಶಾಂತ ಸ್ವಭಾವ ಹಾಗೂ ನಿಯಮಿತ ಆಹಾರ ಲಾಭಕರ. ಸ್ನೇಹವಿಲ್ಲದೇ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ಅಮೂಲ್ಯ ವಸ್ತುಗಳು ಕಾಣೆಯಾಗಬಹುದು. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು.
ಇದನ್ನೂ ಓದಿ: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ
ಮೀನ ರಾಶಿ :
ಇಂದು ಕೆಲಸದಲ್ಲಿ ತ್ವರಿತ ನಿರ್ಧಾರಗಳು ಲಾಭ ಕೊಡಬಹುದು. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಹಣಕಾಸಿನಲ್ಲಿ ನಿರೀಕ್ಷಿತ ಫಲ ದೊರೆಯುವ ಸಾಧ್ಯತೆ. ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆರ್ಥಿಕತೆಗೆ ಸಂಬಂಧಿಸಿದಂತೆ ಪೂರ್ಣ ಸಮಾಧಾನ ಇರದು. ಇನ್ನೊಬ್ಬರ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯ ಉಂಟಾದರೂ ಸಂಯಮದಿಂದ ಪರಿಹಾರ ಸಾಧ್ಯ. ಆರೋಗ್ಯದಲ್ಲಿ ತಲೆನೋವು ಅಥವಾ ದಣಿವು ಕಾಣಬಹುದು. ಧ್ಯಾನ, ಪ್ರಾರ್ಥನೆ ಮನಸ್ಸಿಗೆ ಶಾಂತಿ ನೀಡುತ್ತದೆ. ನೀವು ಇಂದು ಯಾರ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಆರ್ಥಿಕತೆಯ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲುವುದು.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
-ಲೋಹಿತ ಹೆಬ್ಬಾರ್ – 8762924271 (what’s app only)




