AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

January 2026 Monthly Horoscope: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ

ಜನವರಿ 2026 ಮಾಸ ಭವಿಷ್ಯ: 2026ರ ಜನವರಿ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳ ಬದಲಾವಣೆಯಾಗಲಿದೆ. ಇದು ಪ್ರತಿಯೊಂದು ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಉದ್ಯೋಗ, ಪ್ರೀತಿ, ಆರ್ಥಿಕತೆ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಶುಭ ಮತ್ತು ಅಶುಭ ಫಲಗಳನ್ನು ಕಾಣಬಹುದು. ಕೆಲವು ರಾಶಿಗಳಿಗೆ ಉತ್ತಮ ಪ್ರಗತಿ, ಮತ್ತೆ ಕೆಲವರಿಗೆ ಸವಾಲುಗಳು ಎದುರಾಗಲಿವೆ. ನಿಮ್ಮ ರಾಶಿಗೆ ಸೂಕ್ತ ಪರಿಹಾರಗಳೂ ಇಲ್ಲಿವೆ.

January 2026 Monthly Horoscope: ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ರಾಶಿಯವರಿಗೆ ಶುಭ
ಟಿವಿ9 ಕನ್ನಡ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 29, 2025 | 1:44 PM

Share

2026 ರ ಮೊದಲ ತಿಂಗಳು ಇದಾಗಿದ್ದು ನಾಲ್ಕು ಗ್ರಹಗಳ ಮಹತ್ತ್ವದ ಬದಲಾವಣೆಯಾಗಲಿದೆ. ಸಂಗಾತಿ, ಸುಖ, ತಂದೆ, ಸರ್ಕಾರ, ಸಾಹೋದರ್ಯ, ಪರಾಕ್ರಮ, ವಾಕ್ಚಾತುರ್ಯ, ಮೊದಲಾದ ಅನೇಕ ಸಂಗತಿಗಳು ನಡೆಯಲಿದ್ದು, ಶುಭವೇ ಈ ತಿಂಗಳು ಅಧಿಕವಾಗಿದೆ. ಬೌದ್ಧಿಕವಾದ ನಿಲುವಿನಲ್ಲಿ ನಿಂತು ತಮ್ಮ ಕಾರ್ಯವನ್ನು ಮಾಡುವುದು ಶ್ರೇಯಸ್ಕರ.

ಮೇಷ ರಾಶಿ :

ಹೊಸ ವರ್ಷದ ಮೊದಲ ತಿಂಗಳಲ್ಲಿ ಮೊದಲ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ನವಮದಿಂದ ದಶಮಕ್ಕೆ ಹೋಗಲಿದ್ದು ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ, ಸ್ಥಾನಮಾನ ಪ್ರಾಪ್ತಿಯಾಗಲಿದೆ. ವಿವಾಹ ಅಥವಾ ಪ್ರೇಮ ವಿಚಾಗಳು ಕೈಗೂಡುವುದು. ಕುಜ ದಶೆ ಧೈರ್ಯ ಸ್ಥೈರ್ಯಗಳನ್ನು ವರ್ಧಿಸುವುದು. ಉದ್ಯಮದಲ್ಲಿ ಆಲಸ್ಯ ಬರಲಿದೆ. ವಿದೇಶದ ವ್ಯಾಪಾರಕ್ಕೆ ಪ್ರಯತ್ನಿಸಿದರೆ ಸಫಲತೆಯನ್ನು ಕಾಣಬಹುದು. ನೀರಿನ ವ್ಯಾಪಾರಕ್ಕೆ ಮಾರುಕಟ್ಟೆ ತೆರೆದುಕೊಳ್ಳುವುದು. ಆರ್ಥಿಕ ಅಭಿವೃದ್ಧಿಗೆ ಶನಿಸ್ತೋತ್ರ ಮಾಡಿ.

ವೃಷಭ ರಾಶಿ :

ರಾಶಿ ಚಕ್ರದ ಎರಡನೇ ರಾಶಿಯವರಿಗೆ ತಿಂಗಳು ನಿಮಗೆ ಶುಭ. ರಾಶಿಯ ಅಧಿಪತಿ ಅಷ್ಟಮದಲ್ಲಿದ್ದು ಆರ್ಥಿಕ ನಷ್ಟ, ಅಪಮಾನ, ವಾಹನದಿಂದ ನೋವು ಅನುಭವಿಸಿದವರಿಗೆ ಎಲ್ಲವೂ ಮಾಯಾಜಾಲದಂತೆ‌ ಕಾಣಿಸುವುದು. ವಿವಾಹಕ್ಕೆ ಪ್ರೇಮವು ಬಲ‌ ತುಂಬುವುದು. ಶನಿ ದಶೆ ಉತ್ತಮವಾಗಿದ್ದು ಉದ್ಯೋಗದಲ್ಲಿ ಬೆಳವಣಿಗೆ ಯಥಾಪ್ರಕಾರವಾಗಿ ಮುಂದುವರಿಯುವುದು. ಬರುವ ಹಣವೆಲ್ಲ ಕೈಸೇರಿ ಸಂತೋಷ ನಿಮ್ಮದಾಗುವುದು. ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಾಗುವಂತೆ ನೋಡಿಕೊಳ್ಳುವಿರಿ.

ಮಿಥುನ ರಾಶಿ :

ರಾಶಿಯ ಅಧಿಪತಿ ಅಷ್ಟಮದಲ್ಲಿ ಇರಲಿದ್ದು ನಿಮಗೆ ಅಶುಭ. ಸಪ್ತಮದಲ್ಲಿ ಇದ್ದಾಗಿನ ಧೈರ್ಯ, ವರ್ಚಸ್ಸು, ಮಾತುಗಾರಿಕೆ ಎಲ್ಲ‌ ಕಡೆ ಗೆಲವಿದ್ದು ಈಗ ಅದೆಲ್ಲವೂ ಕಾಣಿಸದು. ಬುಧ ದಶೆಯವರಿಗೆ ಇದರ ಅತಿಯಾದ ಅನುಭವವಾಗಲಿದೆ. ವಿವಾಹಕ್ಕೆ ಬಂಧುಗಳಿಂದ ಅಡಚಣೆಯಾಗಲಿದೆ. ಈ ತಿಂಗಳ ಗೃಹೋದ್ಯಮ ಲಾಭಕರವಾಗಿದ್ದು ಅಸಕ್ತಿ ಹೆಚ್ಚುವುದು. ಲೇಖನ, ಸಾಹಿತ್ಯ, ಭಾಷಣ ಕ್ಷೇತ್ರಕ್ಕೆ ನಿಮಗೆ ಒತ್ತಡ ಬರಲಿದೆ. ಗಣಪತಿಯನ್ನು ಯಶಃಪ್ರಾಪ್ತಿಗೆ ಪ್ರಾರ್ಥಿಸಿ.

ಕರ್ಕಾಟಕ ರಾಶಿ :

ಈ ರಾಶಿಯವರಿಗೆ ಜನವರಿಯಲ್ಲಿ ಮಿಶ್ರಫಲ. ಸಪ್ತಮದಲ್ಲಿ ನಾಲ್ಕು ಗ್ರಹದ ಸಮಾಗಮದಿಂದ ಶುಭವಿದ್ದರೂ ಸಂಗಾತಿಯು ಪ್ರಬಲವಾಗಿರುವರು. ಕುಜನು ಉಚ್ಚಸ್ಥಾನದಲ್ಲಿದ್ದು ಇದರ ಪ್ರಭಾವದಿಂದ ತಂದೆಗೂ ಪರಿಣಾಮವಾಗಲಿದೆ. ಆನ್ ಲೈನ್ ಮೂಲಕ ವ್ಯಾಪರಕ್ಕೆ ಹೆಚ್ಚು ಮಹತ್ತ್ವ ಬರಲಿದೆ. ಬೇಕಾದ ವ್ಯವಸ್ಥೆಯನ್ನು ಮಾಡುವಿರಿ. ಶನಿ ಹಾಗೂ ಕುಜ ದಶೆ ನಿಮಗೆ ಉದ್ಯಮ‌ ಹಾಗೂ ದಾಂಪತ್ಯ ಜೀವನಕ್ಕೆ ಪೂರಕವಾಗಿದ್ದಾಗಿದೆ. ಶಿವಪಾರ್ವತಿಯರು ಒಟ್ಟಾಗಿರುವ ಸ್ಥಳಕ್ಕೆ ಹೋಗಿ.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಯವರಿಗೆ ಜನವರಿ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ಶತ್ರುವಿನ‌ ರಾಶಿಯಲ್ಲಿ ಇರಲಿದ್ದು ಜೊತೆಗೆ ಶತ್ರುಸ್ಥಾನದಲ್ಲಿಯೂ ಇರುವ ಕಾರಣ ನಿಮ್ಮ ಗುಣಗಳೇ ನಿಮಗೆ ಶತ್ರುವಾಗಲಿದೆ. ಸ್ವಭಾವದ ಕಾರಣ ಎಲ್ಲರಿಂದ ದೂರವಾಗಬೇಕಾಗುವುದು. ರವಿ ದಶೆ ನಿಮಗೆ ಸಂಪೂರ್ಣ ನಕಾರಾತ್ಮಕ ಅಂಶವನ್ನು ಕೊಡಲಿದೆ. ಸರ್ಕಾರದ ಕಾರ್ಯದಲ್ಲಿ ವೈಫಲ್ಯ, ಆರೋಗ್ಯದಲ್ಲಿ ಮುನ್ನೆಚ್ಚರಿಕೆ ಬೇಕು. ತಂದೆಯ ಬಗ್ಗೆ ಸದ್ಭಾವ ದೂರಾಗುವುದು. ಶಿವನ ವ್ರತವನ್ನು ಮಾಡುವುದು ಉತ್ತಮ.

ಕನ್ಯಾ ರಾಶಿ :

ಜನವರಿ ತಿಂಗಳಲ್ಲಿ ನಿಮಗೆ ಮಿಶ್ರಫಲ. ರಾಶಿಯ ಅಧಿಪತಿ ಪಂಚಮದಲ್ಲಿ ಇರಲಿದ್ದು ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಿಸುವುದು. ವೈವಾಹಿಕ ಸಂಬಂಧದಲ್ಲಿ ಭಾವನೆಗಳು ಅನರ್ಥಕ್ಕೆ ದಾರಿ ಮಾಡುವುದು. ಹೋಟೆಲ್, ರೆಸ್ಟೋರೆಂಟ್ ಉದ್ಯಮದಿಂದ ಲಾಭ. ಕಲಾವಿದರಿಗೆ ಅವಕಾಶ ಲಭ್ಯವಾಗಿದ್ದು, ಅದನ್ನು ಬಳಸಿಕೊಳ್ಳಿ. ಸಹೋದ್ಯೋಗಿಗಳ ಜೊತೆ ಮನಸ್ತಾಪವನ್ನು ಬೆಳೆಸಿಕೊಳ್ಳುವಿರಿ. ಬುಧ ದಶೆ ಸಾಧಾರಣವಾಗಿರಲಿದೆ.

ತುಲಾ ರಾಶಿ :

ಏಳನೇ ರಾಶಿಯವರಿಗೆ ಜನವರಿ ತಿಂಗಳಲ್ಲಿ ಶುಭ ಫಲ. ರಾಶಿ ಅಧಿಪತಿ ಶುಕ್ರ ಚತುರ್ಥದಲ್ಲಿ ಇರುವನು. ಮಿತ್ರನ ರಾಶಿಯಲ್ಲಿ ಇದ್ದು, ಭೋಗದ ಸುಖವನ್ನು ನೀಡುವನು. ಕುಟುಂಬದ ಜೊತೆ ಕಾಲ‌ ಕಳೆಯುವಿರಿ. ಇನ್ನು ಉದ್ಯೋಗಕ್ಕೆ ಸಂಬಂಧಿಸಿದಂತೆ ಕೃಷಿಯ‌ ಚಟುವಟಿಕೆಯಲ್ಲಿ ಪ್ರಗತಿ ಕಾಣಬಹುದು. ಯಂತ್ರೋಪಕರಣ ಅಥವಾ ಔಷಧೀಯ ವ್ಯಾಪಾರದಿಂದ ಲಾಭವಿದೆ. ವಾಹನವೂ ನಿಮಗೆ ತಕ್ಕಮಟ್ಟಿನ ಲಾಭವನ್ನು ಕೊಡುವುದು. ಶುಕ್ರದಶೆಯಿಂದ ನೆಮ್ಮದಿ ನಿಮ್ಮದಾಗುವುದು.

ವೃಶ್ಚಿಕ ರಾಶಿ :

ಜನವರಿ ತಿಂಗಳಲ್ಲಿ ಎಂಟನೇ ರಾಶಿಯವರಿಗೆ ಅಶುಭ. ಗುರುವಿನ ಪ್ರಭಾವ ನಿಮ್ಮ ಮೇಲೆ ಪೂರ್ಣವಾಗಿ ಇರದ ಕಾರಣ ಪ್ರಯತ್ನ ಪೂರ್ವಕ ಪಡೆಯಬೇಕು. ಈ ತಿಂಗಳು ನಿಮ್ಮ ಸಾಮರ್ಥ್ಯ ಹೊಳಪಿನಿಂದ ಕೂಡಿರುವುದು. ಯಾರ ಪ್ರಶಂಸೆಯನ್ನೂ ಅಪೇಕ್ಷಿಸದೇ ನಿಮ್ಮಷ್ಟೇ ಮಹತ್ಕಾರ್ಯದಲ್ಲಿ ತತ್ಪರರಾಗುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ರವಿ ದಶೆ ಉತ್ತಮ. ಇನ್ನು ವೈವಾಹಿಕ ವಿಚಾರದಲ್ಲಿ ಬಲವಂತ ಬೇಡ. ನಿಮ್ಮ‌ತಲೆ ಗಟ್ಟಿಯಿದೆ ಎಂದು ಬಂಡೆಗೆ ಕುಟ್ಟಲಾಗದು. ಕಾಲಕ್ಕಾಗಿ ಕಾಯಬೇಕು.

ಧನು ರಾಶಿ :

ರಾಶಿ ಚಕ್ರದ ಒಂಭತ್ತನೆಯ ರಾಶಿಯವರಿಗೆ ಈ ತಿಂಗಳು ಶುಭಪ್ರದ. ಗುರವಿನ ರಾಶಿಗೆ ಗುರವಿನ ದೃಷ್ಟಿ ಇದೆ. ಉದ್ಯೋಗದ ಅಧಿಪತಿ ದ್ವಿತೀಯದಲ್ಲಿ ಇದ್ದಾನೆ. ಸಾಲವನ್ನು ಮಾಡಿಕೊಂಡಿದ್ದರೆ ತೀರಿಹೋಗುವುದು. ಗ್ರಾಹಕ ಕೇಂದ್ರದಲ್ಲಿ ಇರುವವರಿಗೆ ಶುಭ. ಖಾರದ ಮಾತುಗಳಿಂದ ಬೇಸರವೂ ಉಂಟಾಗುವುದು. ಹೇಳಬೇಕಾದ ವಿಚಾರಗಳನ್ನು ನೇರವಾಗಿ ಹೇಳದೇ ಸುತ್ತಿ ಬಳಸಿ ಮಾತನಾಡುವಿರಿ.

ಮಕರ ರಾಶಿ :

ಈ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಶುಭಫಲ. ನಿಮ್ಮ ರಾಶಿಯಲ್ಲಿ ಈ ತಿಂಗಳು ನಾಲ್ಕು ಗ್ರಹಗಳ ಸಂಯೋಗವಾಗಲಿದ್ದು ಪರಸ್ಪರ ಸಾಮರಸ್ಯವುಳ್ಳ ಗ್ರಹಗಳೇ ಆಗಿದೆ. ಕುಜನ ಉಚ್ಚಕ್ಷೇತ್ರವಿದಾಗಿದೆ. ಭೂಮಿಯ ಲಾಭವಾಗಲಿದೆ. ಮನೆಯಿಂದ ದೂರವಿದ್ದವರಿಗೆ ಈ ತಿಂಗಳಲ್ಲಿ ಸಂತೋಪ ಪ್ರದವಾದ ಸಂಗತಿಗಳು ಇರಲಿವೆ. ಕುಜ, ಶುಕ್ರ ದಶೆಗಳು ಶುಭವಾಗಲಿದೆ. ಸಹೋದರರಲ್ಲಿ ಭಿನ್ನಾಭಿಪ್ರಾಯ ಬರುವುದು.

ಇದನ್ನೂ ಓದಿ: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಪ್ರಭಾವಿ ವ್ಯಕ್ತಿಗಳಿಂದ ಉದ್ಯೋಗಕ್ಕೆ ಸಹಾಯವಾಗಲಿದೆ

ಕುಂಭ ರಾಶಿ :

ಜನವರಿ ತಿಂಗಳಲ್ಲಿ ನಿಮಗೆ ಮಿಶ್ರಫಲ. ನಾಲ್ಕು ಗ್ರಹರು ದ್ವಾದಶಸ್ಥಾನದಲ್ಲಿ ಇವೆ. ತಂದೆಯಿಂದ ನಷ್ಟ, ಸಂಗಾತಿಯಿಂದ ಬೇಸರ, ಸ್ಪರ್ಧೆಯಲ್ಲಿ ಸೋಲು, ಮಾತಿನ ಮೇಲೆ ಅಪನಂಬಿಕೆ, ಬಂಧುಗಳ‌ ಮೇಲೆ ವಿಶ್ವಾಸ ರಾಹಿತ್ಯ ಇವೆಲ್ಲ ಇರಲಿವೆ. ಗುರುವಿನ ದೃಷ್ಟಿ ನಿಮ್ಮ ಮೇಲಿರುವ ಕಾರಣ, ಎಂತಹ ಆಪತ್ತನ್ನೂ ಗೆಲ್ಲುವ ಸಾಮರ್ಥ್ಯ ಬರಲಿದೆ. ದೇಹ ಮನಸ್ಸಿಗೆ ಬಂಧನದ ಭಾವ ಬಂದರೂ ಅದರಿಂದ ಮುಕ್ತರಾಗುವಿರಿ. ಗುರು ದಶೆ ಉತ್ತಮವಾಗಲಿದೆ.

ಮೀನ ರಾಶಿ :

ಈ ತಿಂಗಳ ಕೊನೆಯ ರಾಶಿಯವರಿಗೆ ಶುಭಫಲ. ನಿಮಗೆ ನಾಲ್ಕು ಗ್ರಹಗಳ ಸ್ಥಿತಿಯಿಂದ ಶುಭದ ಪ್ರವಾಹ ನಿಮಗೆ. ಹಲವು ದಿನಗಳಿಂದಲೂ ಸಂಕಟದಲ್ಲಿ, ದುಃಖದಲ್ಲಿದ್ದ ನಿಮಗೆ ಒಂದೊಂದೆ ಮಾರ್ಗಗಳು ತೆರೆಯಲ್ಲಿದ್ದು ನೆಮ್ಮದಿ, ಸಂಪತ್ತು, ಆರೋಗ್ಯ ಎಲ್ಲವೂ ಬರುವ ಸೂಚನೆ ನಿಮಗೆ ಸಿಗಲಿದೆ. ಸೋಲುಂಡ ನಿಮಗೆ ಗೆಲವು ನಿಶ್ಚಯವಾಗಲಿದೆ. ತಾಯಿ ಪ್ರೀತಿ ನಿಮಗೆ ಸಿಗಲಿದೆ. ಕುಜ, ಶುಕ್ರ, ಶನಿ ದಶೆಗಳು ನಿಮಗೆ ಬದಲಾವಣೆಯನ್ನು ತಂದುಕೊಡುವವಾಗಿವೆ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!