AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಸೊನ್ನೆ ಸುತ್ತಿದ ನಾಯಕ ಸೂರ್ಯ; 4ನೇ ಫೈನಲ್​ನಲ್ಲೂ ಇತಿಹಾಸ ಬದಲಾಗಲಿಲ್ಲ

Suryakumar Yadav Golden Duck: 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 255 ರನ್ ಗಳಿಸಿ ದಾಖಲೆ ನಿರ್ಮಿಸಿತು, ಇದು ಟಿ20 ಫೈನಲ್ ಇತಿಹಾಸದ ಅತಿ ದೊಡ್ಡ ಮೊತ್ತ. ಅಭಿಷೇಕ್, ಸಂಜು, ಇಶಾನ್ ಅರ್ಧಶತಕ ಗಳಿಸಿದರು. ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಗೋಲ್ಡನ್ ಡಕ್ ಆದರು. ಇದು ಧೋನಿ, ರೋಹಿತ್ ಶರ್ಮಾ ನಂತರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಒಂದಂಕಿ ದಾಟದ ಭಾರತದ ನಾಯಕರ ಸರಣಿಯನ್ನು ಮುಂದುವರೆಸಿದೆ.

IND vs NZ: ಸೊನ್ನೆ ಸುತ್ತಿದ ನಾಯಕ ಸೂರ್ಯ; 4ನೇ ಫೈನಲ್​ನಲ್ಲೂ ಇತಿಹಾಸ ಬದಲಾಗಲಿಲ್ಲ
Suryakumar Yadav
ಪೃಥ್ವಿಶಂಕರ
|

Updated on:Mar 08, 2026 | 10:00 PM

Share

ನ್ಯೂಜಿಲೆಂಡ್ ವಿರುದ್ಧದ 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ (T20 World Cup Final) ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 255 ರನ್​ಗಳ ದಾಖಲೆ ಮೊತ್ತ ಕಲೆಹಾಕಿತು. ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ಮೊತ್ತ ಇದಾಗಿದೆ. ಟೀಂ ಇಂಡಿಯಾ ಈ ದಾಖಲೆ ಬರೆಯುವಲ್ಲಿ ತಂಡದ ಮೂವರು ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್​ಗಳ ತಲಾ ಅರ್ಧಶತಕದ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅವರ ಅಬ್ಬರದಿಂದಾಗಿ ಟೀಂ ಇಂಡಿಯಾ 200 ರನ್​ಗಳ ದಾಟಿತು. ಆದರೆ ಈ ಮೂವರನ್ನು ಹೊರತುಪಡಿಸಿ ಆ ಬಳಿಕ ಬಂದವರು ಪರಿಣಾಮಕಾರಿಯಾಗಲಿಲ್ಲ. ಅದರಲ್ಲೂ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ನಿರಾಶೆ ಮೂಡಿಸಿದರು. ಈ ಮೂಲಕ ಟಿ20 ವಿಶ್ವಕಪ್ ಫೈನಲ್​ನಲ್ಲಿ ಭಾರತದ ನಾಯಕರ ರನ್ ಬರವನ್ನು ಈ ಪಂದ್ಯದಲ್ಲೂ ಮುಂದುವರೆಸಿದರು.

ನಾಯಕರ ಒಂದಂಕಿ ಸಾಧನೆ

ವಾಸ್ತವವಾಗಿ ಟೀಂ ಇಂಡಿಯಾ ಇದುವರೆಗೆ ನಾಲ್ಕು ಬಾರಿ ಟಿ20 ವಿಶ್ವಕಪ್ ಫೈನಲ್ ಆಡಿದೆ. ಇದರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡು ಫೈನಲ್​ಗಳನ್ನು ಆಡಿದರೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಒಂದು ಹಾಗೂ ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಫೈನಲ್ ಪಂದ್ಯವನ್ನು ಆಡುತ್ತಿದೆ. ಆದರೆ ಈ ನಾಲ್ಕು ಫೈನಲ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕರಿಗೆ ಒಂದಂಕಿ ದಾಟಿ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ. ಅಂದರೆ ಈ ಮೂವರು ನಾಯಕರು ಟಿ20 ವಿಶ್ವಕಪ್ ಫೈನಲ್​ನಲ್ಲಿ 10 ರನ್​ ಒಳಗೆ ವಿಕೆಟ್ ಒಪ್ಪಿಸಿದ್ದಾರೆ.

6,4,9,0 ನಾಯಕರ ಸ್ಕೋರ್

ಮೊದಲನೆಯದಾಗಿ, 2007 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಎಂಎಸ್ ಧೋನಿ ಕೇವಲ 6 ರನ್ ಗಳಿಸಿದರೆ, 2014 ರ ಫೈನಲ್‌ನಲ್ಲಿ ಕೇವಲ 4 ರನ್​ ಕಲೆಹಾಕಿದ್ದರು. 2024 ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ರೋಹಿತ್ ಶರ್ಮಾ ಕೂಡ 9 ರನ್‌ಗಳಿಗೆ ಔಟಾಗಿದ್ದರು. ಆದಾಗ್ಯೂ ಈ ಇಬ್ಬರು ಫೈನಲ್‌ನಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಈ ಹಿಂದಿನ ಒಂದಂಕಿ ಸರಣಿಯನ್ನು ಮುರಿಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದರಂತೆ ಕಿವೀಸ್ ವಿರುದ್ಧ ಅವರ ಪ್ರದರ್ಶನವೂ ಅದ್ಭುತವಾಗಿತ್ತು. ಆದರೆ ಸೂರ್ಯನಿಗೆ ಈ ಪಂದ್ಯದಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

IND vs NZ: ಮೊದಲ ಓವರ್‌ನಲ್ಲಿ ಸಿಕ್ಸರ್; ವಿಶ್ವ ದಾಖಲೆ ಮುರಿದ ಸಂಜು ಸ್ಯಾಮ್ಸನ್

42 ತಿಂಗಳ ನಂತರ ಸೊನ್ನೆ

ಇದರೊಂದಿಗೆ, ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮೊದಲ ಎಸೆತದಲ್ಲೇ ಸೊನ್ನೆಗ ಔಟಾದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರಿಗಿಂತ ಮೊದಲು ಪಾಕಿಸ್ತಾನದ ಶಾಹಿದ್ ಅಫ್ರಿದಿ, ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್ ಮತ್ತು ವೆಸ್ಟ್ ಇಂಡೀಸ್‌ನ ಲೆಂಡ್ಲ್ ಸಿಮನ್ಸ್ ಶೂನ್ಯಕ್ಕೆ ಔಟಾಗಿದ್ದರು. ಹಾಗೆಯೇ ಇದು ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಇದು ಸೂರ್ಯಕುಮಾರ್ ಯಾದವ್ ಅವರ ಮೂರನೇ ಗೋಲ್ಡನ್ ಡಕ್ ಸಾಧನೆಯಾಗಿದೆ. ಇದಕ್ಕೂ ಮೊದಲು ಸೂರ್ಯ 42 ತಿಂಗಳ ಹಿಂದೆ ಅಂದರೆ 2022 ರ ಸೆಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಎಸೆತದಲ್ಲೇ ಬಲಿಯಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Sun, 8 March 26

Follow Us