IND vs ZIM: ಆ.18 ರಿಂದ ಏಕದಿನ ಸರಣಿ ಆರಂಭ; ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ಬಗ್ಗೆ ಇಲ್ಲಿದೆ ಮಾಹಿತಿ

|

Updated on: Aug 10, 2022 | 4:45 PM

IND vs ZIM: ಏಕದಿನ ಮಾದರಿಯಲ್ಲಿ ಭಾರತ ಮತ್ತು ಜಿಂಬಾಬ್ವೆ ಪರಸ್ಪರ 63 ಪಂದ್ಯಗಳನ್ನು ಆಡಿವೆ.ಇದರಲ್ಲಿ ಭಾರತ 51 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳನ್ನು ಗೆದ್ದಿದೆ.

IND vs ZIM: ಆ.18 ರಿಂದ ಏಕದಿನ ಸರಣಿ ಆರಂಭ; ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ಬಗ್ಗೆ ಇಲ್ಲಿದೆ ಮಾಹಿತಿ
Follow us on

ವೆಸ್ಟ್ ಇಂಡೀಸ್ ಪ್ರವಾಸದ ನಂತರ ಇದೀಗ ಟೀಂ ಇಂಡಿಯಾ ಶೀಘ್ರದಲ್ಲೇ ಜಿಂಬಾಬ್ವೆಗೆ ತೆರಳಲಿದೆ. ಭಾರತ ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ (Rohit Sharma and Virat Kohli) ದಿಗ್ಗಜರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಶಿಖರ್ ಧವನ್‌ಗೆ (Shikhar Dhawan) ನೀಡಲಾಗಿದೆ. ಏಷ್ಯಾಕಪ್‌ಗೂ (Asia Cup) ಮುನ್ನ ಟೀಂ ಇಂಡಿಯಾಗೆ ಈ ಸರಣಿ ಮಹತ್ವದ್ದಾಗಿದೆ. ಈ ಸರಣಿಯೊಂದಿಗೆ ವೇಗದ ಬೌಲರ್ ದೀಪಕ್ ಚಹಾರ್ ಕೂಡ ಪುನರಾಗಮನ ಮಾಡುತ್ತಿದ್ದಾರೆ.

ಏಕದಿನ ಮಾದರಿಯಲ್ಲಿ ಭಾರತ ಮತ್ತು ಜಿಂಬಾಬ್ವೆ ಪರಸ್ಪರ 63 ಪಂದ್ಯಗಳನ್ನು ಆಡಿವೆ.ಇದರಲ್ಲಿ ಭಾರತ 51 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳನ್ನು ಗೆದ್ದಿದೆ. 2 ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ. ಭಾರತ ಕೊನೆಯ ಬಾರಿಗೆ 2016 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಆಡಿತ್ತು.

ಬೌಲರ್‌ಗಳ ಮೇಲೆ ಶಿಖರ್ ನಂಬಿಕೆ

ಇದನ್ನೂ ಓದಿ
Asia Cup 2022: ಏಷ್ಯಾಕಪ್​ನಲ್ಲಿ ಭಾರತದ್ದೇ ಸಿಂಹಪಾಲು; ಈ ಟೂರ್ನಿಯಲ್ಲಿ ದಾಖಲಾದ ಹಲವು ದಾಖಲೆಗಳಿವು
Asia Cup 2022: ಜಸ್ಪ್ರೀತ್ ಬುಮ್ರಾ ಬಳಿಕ ಮತ್ತೊಬ್ಬ ಸ್ಟಾರ್ ಬೌಲರ್ ಏಷ್ಯಾಕಪ್​ನಿಂದ ಔಟ್..!
Asia Cup 2022: ಏಷ್ಯಾಕಪ್​ನಲ್ಲಿ ಬರೋಬ್ಬರಿ 3 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕಿಸ್ತಾನ..! ಹೇಗೆ ಗೊತ್ತಾ?

ತಂಡದ ನಾಯಕತ್ವದ ಬಗ್ಗೆ ಕೇಳಿದಾಗ ಮಾತನಾಡಿದ ಧವನ್, “ನಾಯಕನಾಗಿ, ನಾನು ನನ್ನ ಬೌಲರ್‌ಗಳನ್ನು ಮೊದಲು ನಂಬುತ್ತೇನೆ ಮತ್ತು ಅವರ ಯೋಜನೆಗಳನ್ನು ಅನುಸರಿಸುತ್ತೇನೆ. ಉನ್ನತ ಮಟ್ಟದಲ್ಲಿ ಪ್ರತಿಯೊಬ್ಬರೂ ವೃತ್ತಿಪರರು ಮತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾರೆ ಎಂದಿದ್ದಾರೆ.

ಈ ಸರಣಿಯು ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ. ಹದಿಮೂರು ತಂಡಗಳ ಈವೆಂಟ್ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ನೇರ ಅರ್ಹತೆಯ ಮುಖ್ಯ ಮೂಲವಾಗಿದೆ. ಭಾರತ ತಂಡವು 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೂರು T20 ಮತ್ತು ಮೂರು ODIಗಳನ್ನು ಆಡಿದಾಗ ಭಾರತ ತಂಡವು ಕೊನೆಯದಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು.

ODI ಸರಣಿಯ ಸಂಪೂರ್ಣ ವೇಳಾಪಟ್ಟಿ

ಆಗಸ್ಟ್ 18 – 1 ನೇ ODI – ಹರಾರೆ – 12:45 pm

ಆಗಸ್ಟ್ 20 – 2 ನೇ ODI – ಹರಾರೆ – 12:45 pm

22 ಆಗಸ್ಟ್ – 3 ನೇ ODI – ಹರಾರೆ – 12:45 pm

ಭಾರತ-ಜಿಂಬಾಬ್ವೆ ಏಕದಿನ ಸರಣಿ ಯಾವಾಗ ನಡೆಯಲಿದೆ?

ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಆಗಸ್ಟ್ 18 ರಂದು ಪ್ರಾರಂಭವಾಗಿ ಆಗಸ್ಟ್ 22 ರಂದು ಕೊನೆಗೊಳ್ಳಲಿದೆ.

ಭಾರತ-ಜಿಂಬಾಬ್ವೆ ODI ಸರಣಿ ಎಲ್ಲಿ ನಡೆಯಲಿದೆ?

ಭಾರತ-ಜಿಂಬಾಬ್ವೆ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.

ಭಾರತ-ಜಿಂಬಾಬ್ವೆ ODI ಸರಣಿಯ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ-ಜಿಂಬಾಬ್ವೆ ಏಕದಿನ ಸರಣಿಯ ನೇರ ಪ್ರಸಾರ ಸೋನಿ ನೆಟ್‌ವರ್ಕ್ ಸ್ಪೋರ್ಟ್ಸ್‌ನಲ್ಲಿರಲಿದೆ. ಜೊತೆಗೆ ಡಿಡಿ ಸ್ಪೋರ್ಟ್ಸ್‌ನಲ್ಲೂ ನೇರ ಪ್ರಸಾರ ಮಾಡಲಾಗುತ್ತದೆ.

ಭಾರತ-ಜಿಂಬಾಬ್ವೆ ODI ಸರಣಿಯ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

ಭಾರತ-ಜಿಂಬಾಬ್ವೆ ODI ಸರಣಿಯ ಲೈವ್ ಸ್ಟ್ರೀಮಿಂಗ್ Sony Liv ನಲ್ಲಿ ಲಭ್ಯವಿರುತ್ತದೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್

Published On - 4:44 pm, Wed, 10 August 22