14 ಫೋರ್, 7 ಸಿಕ್ಸ್​: ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದ ಯುವ ಬ್ಯಾಟ್ಸ್​ಮನ್

Royal London Cup: ಈ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಂಟ್​ ತಂಡದ ಪರ ನಾಯಕ ಅಲೆಕ್ಸ್ ಬ್ಲೇಕ್ (62) ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ.

14 ಫೋರ್, 7 ಸಿಕ್ಸ್​: ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದ ಯುವ ಬ್ಯಾಟ್ಸ್​ಮನ್
Tom Prest
TV9kannada Web Team

| Edited By: Zahir PY

Aug 10, 2022 | 2:53 PM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಯಲ್ಲಿ 19ರ ಯುವ ಬ್ಯಾಟ್ಸ್​ಮನ್ ಟಾಮ್ ಪ್ರೆಸ್ಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಟೂರ್ನಿಯ​ ಗ್ರೂಪ್-ಬಿ ನಲ್ಲಿ ನಡೆದ ಪಂದ್ಯದಲ್ಲಿ ಕೆಂಟ್​ ಹಾಗೂ ಹ್ಯಾಂಪ್​ಶೈರ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಅಲೆಕ್ಸ್ ಬ್ಲೇಕ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಹ್ಯಾಂಪ್​ಶೈರ್ ಪರ ನಾಯಕ ಗುಬ್ಬಿನ್ಸ್ 107 ಎಸೆತಗಳಲ್ಲಿ 117 ರನ್ ಬಾರಿಸುವ ಮೂಲಕ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ ಪತನದ ಬಳಿಕ ಕ್ರೀಸ್​ಗೆ ಆಗಮಿಸಿದ 19ರ ಹರೆಯದ ಟಾಮ್ ಪ್ರೆಸ್ಟ್ ಇಡೀ ಪ್ರೇಕ್ಷಕರನ್ನು ದಂಗಾಗಿಸಿದ್ದರು. ಏಕೆಂದರೆ ಅನುಭವಿ ವೇಗಿಗಳನ್ನು ಒಳಗೊಂಡ ಕೆಂಟ್​ ತಂಡದ ಬೌಲರ್​ಗಳನ್ನು ಟಾಮ್ ಲೀಲಾಜಾಲವಾಗಿ ಎದುರಿಸಿದ್ದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನು ಸಿಡಿಸಿದ ಟಾಮ್ ಪ್ರೆಸ್ಟ್ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಯುವ ಬ್ಯಾಟ್ಸ್​ಮನ್​​ 150 ರನ್​ಗಳ ಗಡಿದಾಟಿದರು. ಅಂತಿಮವಾಗಿ ಪ್ರೆಸ್ಟ್​ 138 ಎಸೆತಗಳಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 181 ರನ್ ಸಿಡಿಸಿದರು. ಅಂದರೆ ಸಿಕ್ಸ್​-ಫೋರ್​ಗಳ ನೆರವನಿಂದ ಕೇವಲ 21 ಎಸೆತಗಳಲ್ಲಿ ಬರೋಬ್ಬರಿ 92 ರನ್ ಚಚ್ಚಿದ್ದರು.

ಈ ಸ್ಪೋಟಕ 181 ರನ್​ಗಳೊಂದಿಗೆ ರಾಯಲ್ ಲಂಡನ್​ ಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎಂಬ ವಿಶೇಷ ದಾಖಲೆಯನ್ನು ಟಾಮ್ ಪ್ರೆಸ್ಟ್​ ನಿರ್ಮಿಸಿದ್ದಾರೆ. ಇನ್ನು  ಪ್ರೆಸ್ಟ್​​​ ಅವರ ಈ ಶತಕದ ನೆರವಿನಿಂದ ಹ್ಯಾಂಪ್​ಶೈರ್ ತಂಡವು ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 396 ರನ್​ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಕೆಂಟ್​ ತಂಡದ ಪರ ನಾಯಕ ಅಲೆಕ್ಸ್ ಬ್ಲೇಕ್ (62) ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​​ಮನ್​ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಪರಿಣಾಮ ಕೆಂಟ್ ತಂಡವು 39.2 ಓವರ್​ಗಳಲ್ಲಿ 233 ರನ್​ಗಳಿಗೆ ಸರ್ಪಪತನ ಕಂಡಿತು. ಇದರೊಂದಿಗೆ ಹ್ಯಾಂಪ್​​ಶೈರ್ ತಂಡ ಬರೋಬ್ಬರಿ 163 ರನ್​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada