Asia Cup 2022: ಏಷ್ಯಾಕಪ್‌ನಲ್ಲಿ ಭಾರತದ್ದೇ ಸಿಂಹಪಾಲು; ಈ ಟೂರ್ನಿಯಲ್ಲಿ ದಾಖಲಾದ ಹಲವು ದಾಖಲೆಗಳಿವು
Asia Cup 2022: ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದೇ ಸಮಯದಲ್ಲಿ, ಭಾರತದ ನಂತರ ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಏಷ್ಯಾದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಾದ ಏಷ್ಯಾಕಪ್ (Asia Cup) ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ, ಪಂದ್ಯಾವಳಿಯ ಬಿಗ್ ಮ್ಯಾಚ್ ಆಗಸ್ಟ್ 28 ರಂದು ನಡೆಯಲಿದೆ. ಅಂದರೆ ಈ ದಿನ ಕ್ರಿಕೆಟ್ ಮೈದಾನದಲ್ಲಿ ಭಾರತ-ಪಾಕಿಸ್ತಾನ (India-Pakistan) ನಡುವೆ ಫೈಟ್ ನಡೆಯಲಿದೆ. 2022 ಏಷ್ಯಾಕಪ್ ಯುಎಇಯಲ್ಲಿ (UAE) ನಡೆಯಲಿದ್ದು, ಇದುವರೆಗೆ ಈ ಟೂರ್ನಿಯಲ್ಲಿ ಹಲವು ಬೃಹತ್ ದಾಖಲೆಗಳು ದಾಖಲಾಗಿವೆ. ಅದರಲ್ಲೂ ಈ ಟೂರ್ನಿಯಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಈಗ ಈ ಟೂರ್ನಿಯಲ್ಲಿ ದಾಖಲಾದ ದಾಖಲೆಗಳ ಮೇಲೆ ಸ್ವಲ್ಪ ಕಣ್ಣು ಹಾಯಿಸೋಣ.
ಏಷ್ಯಾಕಪ್‌ನಲ್ಲಿನ ದಾಖಲೆಗಳು..!
- ಏಷ್ಯಾಕಪ್‌ನಲ್ಲಿ ಭಾರತ ಬಲಿಷ್ಠ ತಂಡವಾಗಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದೇ ಸಮಯದಲ್ಲಿ, ಭಾರತದ ನಂತರ ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿವೆ.
- 50 ಓವರ್‌ಗಳು ಮತ್ತು 20 ಓವರ್‌ಗಳ ಎರಡೂ ಮಾದರಿಗಳಲ್ಲಿ ಏಷ್ಯಾ ಕಪ್ ಗೆದ್ದ ಏಕೈಕ ತಂಡ ಭಾರತ.
- ಶ್ರೀಲಂಕಾದ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ 25 ಪಂದ್ಯಗಳನ್ನು ಆಡಿ 53 ರ ಸರಾಸರಿಯಲ್ಲಿ 1,220 ರನ್ ಗಳಿಸಿದ್ದಾರೆ.
- ಅದೇ ಸಮಯದಲ್ಲಿ ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಏಷ್ಯಾಕಪ್‌ನಲ್ಲಿ 23 ಪಂದ್ಯಗಳನ್ನು ಆಡಿರುವ ಸಚಿನ್, 971 ರನ್ ಗಳಿಸಿದ್ದಾರೆ.
- ಶ್ರೀಲಂಕಾದ ಮಾಜಿ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಈ ಟೂರ್ನಿಯಲ್ಲಿ 24 ಪಂದ್ಯಗಳನ್ನಾಡಿದ್ದು, 30 ವಿಕೆಟ್ ಪಡೆದಿದ್ದಾರೆ.
- ಏತನ್ಮಧ್ಯೆ, ಇರ್ಫಾನ್ ಪಠಾಣ್ ಏಷ್ಯಾಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 12 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ.
- ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಅವರು 25 ಪಂದ್ಯಗಳಲ್ಲಿ 6 ಶತಕಗಳನ್ನು ಗಳಿಸಿದ್ದಾರೆ.
- ಅದೇ ಸಮಯದಲ್ಲಿ, ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಏಷ್ಯಾಕಪ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. 2008ರಲ್ಲಿ ಭಾರತದ ವಿರುದ್ಧ 13 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದಿದ್ದರು.
ಇದನ್ನೂ ಓದಿ
Published On - 2:42 pm, Wed, 10 August 22