AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿಕೋನ ಸರಣಿಗೆ ಭಾರತದ 2 ತಂಡಗಳು ಪ್ರಕಟ; ಅನ್ವಯ್ ದ್ರಾವಿಡ್​ಗೆ ಅವಕಾಶ

India U19 Tri-Series: ಭಾರತ ಅಂಡರ್-19 'ಎ' ಮತ್ತು 'ಬಿ' ತಂಡಗಳು ನವೆಂಬರ್ 17 ರಿಂದ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಅಂಡರ್-19 ತಂಡದೊಂದಿಗೆ ತ್ರಿಕೋನ ಕ್ರಿಕೆಟ್ ಸರಣಿಯನ್ನು ಆಡಲಿವೆ. ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಯುವ ಈ ಸರಣಿಯಲ್ಲಿ ಅಗ್ರ ಎರಡು ತಂಡಗಳು ನವೆಂಬರ್ 30 ರಂದು ಫೈನಲ್‌ನಲ್ಲಿ ಸೆಣಸಲಿವೆ. ವಿಹಾನ್ ಮಲ್ಹೋತ್ರಾ ಮತ್ತು ಆರನ್ ಜಾರ್ಜ್ ಭಾರತೀಯ ತಂಡಗಳನ್ನು ಮುನ್ನಡೆಸಲಿದ್ದಾರೆ.

ತ್ರಿಕೋನ ಸರಣಿಗೆ ಭಾರತದ 2 ತಂಡಗಳು ಪ್ರಕಟ; ಅನ್ವಯ್ ದ್ರಾವಿಡ್​ಗೆ ಅವಕಾಶ
ಭಾರತ ಅಂಡರ್ 19 ತಂಡ (ಪ್ರಾತಿನಿಧಿಕ ಚಿತ್ರ)
ಪೃಥ್ವಿಶಂಕರ
|

Updated on: Nov 12, 2025 | 3:22 PM

Share

ಭಾರತದ ಹಿರಿಯ ಕ್ರಿಕೆಟ್ ತಂಡವು ನವೆಂಬರ್ 14 ರಿಂದ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ (Asia Cup Rising Stars 2025) ಲೀಗ್ ಕೂಡ ಕತಾರ್‌ನ ದೋಹಾದಲ್ಲಿ ಪ್ರಾರಂಭವಾಗಲಿದೆ. ಇದೆಲ್ಲದರ ನಡುವೆ, ಇನ್ನೂ ಎರಡು ಭಾರತೀಯ ತಂಡಗಳು ಮೈದಾನದಲ್ಲಿ ಕಾಣಿಸಿಕೊಳ್ಳಲಿವೆ. ವಾಸ್ತವವಾಗಿ ಅಫ್ಘಾನಿಸ್ತಾನ ಅಂಡರ್ -19 ಕ್ರಿಕೆಟ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ತ್ರಿಕೋನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಅಫ್ಘಾನಿಸ್ತಾನ ಅಂಡರ್ -19, ಭಾರತ ಅಂಡರ್ -19 ಎ ಮತ್ತು ಬಿ ತಂಡಗಳು ಭಾಗವಹಿಸಲಿವೆ. ಇದಕ್ಕಾಗಿ ಬಿಸಿಸಿಐನ (BCCI) ಜೂನಿಯರ್ ಆಯ್ಕೆ ಸಮಿತಿ ಎರಡು ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ.

ಒಂದೇ ಸರಣಿಯಲ್ಲಿ ಭಾರತದ 2 ತಂಡಗಳು

ಈ ತ್ರಿಕೋನ ಸರಣಿಯು ನವೆಂಬರ್ 17 ರಂದು ಪ್ರಾರಂಭವಾಗಲಿದೆ. ಸರಣಿಯ ಸ್ವರೂಪವು ಡಬಲ್ ರೌಂಡ್-ರಾಬಿನ್ ಸ್ವರೂಪವಾಗಿರುತ್ತದೆ, ಅಂದರೆ ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಆಡುತ್ತದೆ. ನಂತರ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಆಡುತ್ತವೆ. ಈ ಅಂತಿಮ ಪಂದ್ಯವು ನವೆಂಬರ್ 30 ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆಯಲಿವೆ. ಈ ಸರಣಿಗಾಗಿ ವಿಹಾನ್ ಮಲ್ಹೋತ್ರಾ ಅವರನ್ನು ಭಾರತ ಅಂಡರ್ -19 ಎ ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ಆರನ್ ಜಾರ್ಜ್ ಭಾರತ ಅಂಡರ್ -19 ಬಿ ತಂಡವನ್ನು ಮುನ್ನಡೆಸಲಿದ್ದಾರೆ.

ವೇಳಾಪಟ್ಟಿಯ ಪ್ರಕಾರ, ಮೊದಲ ಪಂದ್ಯವು ನವೆಂಬರ್ 17 ರಂದು ಭಾರತ ಎ ಮತ್ತು ಭಾರತ ಬಿ ನಡುವೆ ನಡೆಯಲಿದೆ. ನಂತರ ನವೆಂಬರ್ 19 ರಂದು ಭಾರತ ಬಿ ಹಾಗೂ ಅಫ್ಘಾನಿಸ್ತಾನ, ನವೆಂಬರ್ 21 ರಂದು ಭಾರತ ಎ ಹಾಗೂ ಅಫ್ಘಾನಿಸ್ತಾನ, ನವೆಂಬರ್ 23 ರಂದು ಭಾರತ ಎ ಮತ್ತು ಭಾರತ ಬಿ, ನವೆಂಬರ್ 25 ರಂದು ಭಾರತ ಬಿ ಮತ್ತು ಅಫ್ಘಾನಿಸ್ತಾನ ಮತ್ತು ನವೆಂಬರ್ 27 ರಂದು ಭಾರತ ಎ ಹಾಗೂ ಅಫ್ಘಾನಿಸ್ತಾನ ನಡುವೆ ಪಂದ್ಯಗಳು ನಡೆಯಲಿವೆ. ನಂತರ ಫೈನಲ್ ಪಂದ್ಯ ನಡೆಯಲಿದೆ.

ಭಾರತದ ತಂಡಗಳು

ಭಾರತ ಅಂಡರ್ 19 ಎ ತಂಡ: ವಿಹಾನ್ ಮಲ್ಹೋತ್ರಾ (ನಾಯಕ), ಅಭಿಗ್ಯಾನ್ ಕುಂಡು (ಉಪನಾಯಕ), ವಾಫಿ ಕುಚ್ಚಿ, ವಂಶ ಆಚಾರ್ಯ, ವಿನೀತ್ ವಿಕೆ, ಲಕ್ಷ್ಯ ರಾಯ್‌ಚಂದಾನಿ, ಎ. ರಾಪೋಲ್ (ವಿಕೆಟ್ ಕೀಪರ್), ಕನಿಷ್ಕ್ ಚೌಹಾಣ್, ಖಿಲನ್ ಎ ಪಟೇಲ್, ಅನ್ಮೋಲ್ಜೀತ್ ಸಿಂಗ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ಅಶುತೋಷ್ ಮಹೀದಾ, ಆದಿತ್ಯ ರಾವತ್, ಮೊಹಮ್ಮದ್ ಮಲಿಕ್.

ಭಾರತ ಅಂಡರ್-19 ಬಿ ತಂಡ: ಆರನ್ ಜಾರ್ಜ್ (ನಾಯಕ), ವೇದಾಂತ್ ತ್ರಿವೇದಿ (ಉಪನಾಯಕ), ಯುವರಾಜ್ ಗೋಹಿಲ್, ಮೌಲ್ಯರಾಜ್ ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಆರ್ ಎಸ್ ಅಂಬ್ರಿಸ್, ಬಿ ಕೆ ಕಿಶೋರ್, ನಮನ್ ಪುಷ್ಪಕ್, ಹೇಮಾಚೂಡೇಶನ್ ಜೆ, ಉಧವ್ ಮೋಹನ್, ಇಶಾನ್ ಸೂದ್, ಡಿ ದೀಪೇಶ್, ರೋಹಿತ್ ಕುಮಾರ್ ದಾಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು