IND vs ENG: ಕೊನೆಯ ಪಂದ್ಯ ಸೋತರೂ ಏಕದಿನ ಸರಣಿ ಗೆದ್ದ ಭಾರತ ಯುವ ತಂಡ
India U19 vs England U19: ಭಾರತ ಅಂಡರ್-19 ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಜಯ ಸಾಧಿಸಿದರೂ, ಭಾರತ ತಂಡ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

ಭಾರತ ಅಂಡರ್-19 ಹಾಗೂ ಇಂಗ್ಲೆಂಡ್ ಅಂಡರ್ 19 (India U19 vs England U19) ತಂಡಗಳ ನಡುವೆ ನಡೆದ ಐದು ಪಂದ್ಯಗಳ ಯೂತ್ ಏಕದಿನ ಸರಣಿಯ (Youth ODI series) ಕೊನೆಯ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿತು. ಭಾರತದ ಪರ ಅಂಬರೀಶ್ 66 ರನ್ ಬಾರಿಸಿದರೆ, ಆರಂಭಿಕ ವೈಭವ್ ಸೂರ್ಯವಂಶಿ (Vaibhav Suryavanshi) 33 ರನ್‌ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಪರ ಮೇಯಸ್ ಅಜೇಯ 82 ರನ್ ಬಾರಿಸಿದರೆ, ಡಾಕಿನ್ಸ್ 66 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಈ ಸೋಲಿನ ಹೊರತಾಗಿಯೂ ಭಾರತ ತಂಡ 3-2 ರ ಅಂತರದಿಂದ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಅಂಬರೀಶ್ ಏಕಾಂಗಿ ಹೋರಾಟ
ಐದನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡದ ಪರ ಅಂಬರೀಶ್ 81 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 66 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು 210 ರನ್ಗಳಿಗೆ ಕೊಂಡೊಯ್ದರು. ಅಂಬರೀಷ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಭಾರತಕ್ಕೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅಂಬರೀಶ್ ಯುಧ್ಜಿತ್ ಗುಹಾ ಅವರೊಂದಿಗೆ ಎಂಟನೇ ವಿಕೆಟ್‌ಗೆ 68 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಭಾರತಕ್ಕೆ ಕಳಪೆ ಆರಂಭ
ಆದಾಗ್ಯೂ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ನಾಯಕ ಆಯುಷ್ ಮ್ಹಾತ್ರೆ ಮತ್ತು ವಿಹಾನ್ ಮಲ್ಹೋತ್ರಾ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಮ್ಹಾತ್ರೆ ಮತ್ತು ವಿಹಾನ್ ತಲಾ ಒಂದು ರನ್ ಗಳಿಸಿ ಔಟಾದರು. ಆರಂಭಿಕ ಹಿನ್ನಡೆಗಳ ನಂತರ, ಕಳೆದ ಪಂದ್ಯದ ಶತಕವೀರ ಸೂರ್ಯವಂಶಿ ಮತ್ತು ರಾಹುಲ್ ಕುಮಾರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಮೂರನೇ ವಿಕೆಟ್‌ಗೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು 51 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ವೈಭವ್ ಈ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗದೆ 42 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 33 ರನ್ ಗಳಿಸಿ ಔಟಾದರು. ವೈಭವ್ ಔಟಾದ ನಂತರ, ರಾಹುಲ್ ಕುಮಾರ್ 21 ರನ್ ಮತ್ತು ಹರ್ವಂಶ್ ಪಂಗಾಲಿಯಾ 24 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
IND vs ENG: 200 ರನ್ ಹೊಡಿತ್ತೀನಿ ಎಂದಿದ್ದ ವೈಭವ್ ಕೊನೆಯ ಪಂದ್ಯದಲ್ಲಿ ಹೊಡೆದಿದ್ದೇಷ್ಟು?
ಕೈಕೊಟ್ಟ ಮಧ್ಯಮ ಕ್ರಮಾಂಕ
ಆ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದ ಕನಿಷ್ಕ ಚೌಹಾಣ್ ಕೂಡ 24 ರನ್ ಗಳಿಸಿ ಆರನೇ ಬ್ಯಾಟ್ಸ್‌ಮನ್ ಆಗಿ ಔಟಾದರು. ಇದಾದ ನಂತರದ ಎಸೆತದಲ್ಲಿ ದೀಪೇಶ್ ದೇವೇಂದ್ರ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಏಳು ವಿಕೆಟ್‌ಗಳು ಬಿದ್ದ ನಂತರ, ಅಂಬರೀಶ್ ಮತ್ತು ಯುಧ್‌ಜಿತ್ ಗುಹಾ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಗುಹಾ 10 ರನ್ ಗಳಿಸಿ ಔಟಾದರೆ, ಆ ನಂತರ ಬಂದ ನಮನ್ ಪುಷ್ಪಕ್ ಖಾತೆ ತೆರೆಯದೆ ಔಟಾದರು. ಅಂಬರೀಶ್ ಹೊರತುಪಡಿಸಿ, ಭಾರತ ಪರ ಅನ್ಮೋಲ್‌ಜಿತ್ ಸಿಂಗ್ ಐದು ರನ್ ಗಳಿಸಿ ಅಜೇಯರಾಗಿ ಮರಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
